ಕೋವಿಡ್ - 19 ಪರೀಕ್ಷೆ; ಮೈಸೂರು ಜಿಲ್ಲೆಯ ಜನರಿಗೊಂದು ಮನವಿ

ಮೈಸೂರು, ಜೂನ್ 16 : ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ ಜಿಲ್ಲೆಯ ಜನರಿಗೆ ಮನವಿಯೊಂದನ್ನು ಮಾಡಿದೆ. ಕೋವಿಡ್ - 19 ಗುಣಲಕ್ಷಣಗಳು ಕಂಡು ಬಂದರೆ ತಕ್ಷಣದ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದೆ.

Recommended Video

      IPL might start from 26th September | IPL 2020 | Oneindia Kannada

      ಕೋವಿಡ್ - 19 ಗುಣಲಕ್ಷಣಗಳು ಇದ್ದಲ್ಲಿ ಹತ್ತಿರ ಇರುವ ಸರ್ಕಾರಿ ಅಥವ ಖಾಸಗಿ ಆಸ್ಪತ್ರೆಗಳಲ್ಲಿ ಪರೀಕ್ಷೆಗೆ ಒಳಪಡಬೇಕು. ಖಾಸಗಿ ಆಸ್ಪತ್ರೆ/ ಪಾಲಿ ಕ್ಲಿನಿಕ್/ಕ್ಲಿನಿಕ್‌ಗಳಿಗೆ ಬರುವ ರೋಗಿಗಳಲ್ಲಿ SARI ಮತ್ತು ILI ಪ್ರಕರಣಗಳು ಕಂಡುಬಂದವರಿಗೆ ಕೋವಿಡ್ - 19 ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಬೇಕಿರುತ್ತದೆ.

      ಮೈಸೂರು ಜಿಲ್ಲೆಯಲ್ಲಿನ ಎಲ್ಲಾ ಖಾಸಗಿ ಆಸ್ಪತ್ರೆ/ಪಾಲಿ ಕ್ಲಿನಿಕ್/ ಕ್ಲಿನಿಕ್‌ಗಳಿಗೆ ಬರುವ ರೋಗಿಗಳಲ್ಲಿ SARI ಮತ್ತು ILI ಪ್ರಕರಣಗಳು ಕಂಡು ಬಂದರೆ ಈ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದು ಮಾಹಿತಿ ನೀಡಲಾಗಿದೆ.

      COVID 19 Test Humble Request To Mysuru People

      * ಕೋವಿಡ್ ಆಸ್ಪತ್ರೆ (ಜಿಲ್ಲಾ ಆಸ್ಪತ್ರೆ ಮೇಟ್ಟಗಳ್ಳಿ)
      * ಕೆ. ಆರ್. ಆಸ್ಪತ್ರೆ, ಮೈಸೂರು
      * ಚೆಲುವಾಂಬ ಆಸ್ಪತ್ರೆ, ಮೈಸೂರು
      * ತಾಲೂಕು ಆಸ್ಪತ್ರೆಗಳು ಟಿ. ನರಸೀಪುರ/ ನಂಜನಗೂಡು/ ಎಚ್‌. ಡಿ. ಕೋಟೆ/ ಹುಣಸೂರು/ ಕೆ. ಆರ್. ನಗರ/ ಪಿರಿಯಾಪಟ್ಟಣ

      * ಸಮುದಾಯ ಆರೋಗ್ಯ ಕೇಂದ್ರಗಳಾದ ಸಾಲಿಗ್ರಾಮ/ ಹುಲ್ಲಹಳ್ಳಿ/ ತಗಡೂರು (ಉಚಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬಹುದು).

      ಪರೀಕ್ಷೆಗೆ ಒಳಗಾಗುವ ರೋಗಿಗಳು ಯಾವುದೇ ರೀತಿಯ ಕ್ವಾರಂಟೈನ್‌ನಲ್ಲಿ ಇರಬೇಕಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಸ್ಪಷ್ಟಪಡಿಸಿದೆ.

      ಕೋವಿಡ್ -19 ಸೋಂಕಿನ ಲಕ್ಷಣಗಳು

      * ಮೂಗು ಸೊರುವುದು
      * ತಲೆ ನೋವು
      * ಗಂಟಲು ನೋವು
      * ಒಣ ಕೆಮ್ಮು
      * ಜ್ವರ
      * ಉಸಿರಾಟದ ತೊಂದರೆ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+