ಮೈಸೂರಿನಲ್ಲಿ ಆರಂಭಗೊಂಡಿದೆ ವಿನೂತನ ಎಳನೀರಿನ ಕೆಫೆ

ಮೈಸೂರು, ಫೆಬ್ರವರಿ 02; ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿನೂತನ ಎಳನೀರಿನ ಕೆಫೆಯೊಂದು ಆರಂಭಗೊಂಡಿದೆ. ಎಳನೀರನ್ನು ಸ್ವಾಭಾವಿಕ ಸ್ವರೂಪದಲ್ಲೇ ಸೇವಿಸಿದ್ದ ಜನರಿಗೆ ಅದಕ್ಕೊಂದು ಬಣ್ಣ, ಸ್ವಾಧ ಹಾಗೂ ವಿಭಿನ್ನವಾದ ರುಚಿಯೊಂದಿಗೆ ಸವಿಯಲು ವೇದಿಕೆಯನ್ನು ಮಾಡಿಕೊಟ್ಟಿರುವುದು ಕೊಕೊ ನೆಕ್ಸ್ಟ್‌ ಎಂಬ ಕೆಫೆ.

ಹೊಸದಾಗಿ ಆರಂಭಗೊಂಡ ಕೆಫೆಯಲ್ಲಿ ಗ್ರಾಹಕರಿಗೆ ಎಳನೀರನ್ನು ವಿವಿಧ ಬಣ್ಣ ಹಾಗೂ ರುಚಿಯೊಂದಿಗೆ ನೀಡಲಾಗುತ್ತಿದೆ. ಎಳನೀರಿನೊಂದಿಗೆ ಸಿಗುವ ಪೇಪರ್ ಗಂಜಿಯನ್ನು ಕೂಡ ವಿಭಿನ್ನ ರೀತಿಯಲ್ಲಿ ಸಲಾಡ್‍ಗಳಿಗೂ ಬಳಸಲಾಗಿದ್ದು, ಗ್ರಾಹಕರಿಗೆ ಹೊಸ ರುಚಿ ನೀಡುತ್ತಿದೆ. ಗ್ರಾಹಕರು ಊಹಿಸಿಕೊಳ್ಳದ ವಿಭಿನ್ನ ರುಚಿಯ ಸ್ವಾದಿಷ್ಟವಾದ ಎಳನೀರು ಇಲ್ಲಿ ಲಭ್ಯವಿದೆ.

ಬ್ಲ್ಯಾಕ್ ಕರೆಂಟ್, ಸ್ಟ್ರಾಬೆರಿ, ಲೀಚ್, ಮ್ಯಾಂಗೋ, ಕಿವಿ, ಆರೆಂಜ್, ಮ್ಯಾಂಗೋ ಮುಂತಾದ 8 ಸ್ವಾದಗಳಲ್ಲಿ ಎಳನೀರು ಜನರಿಗೆ ಲಭ್ಯವಿದೆ. ಕೋಕೋ ನೆಕ್ಸ್ಟ್‌ ನಲ್ಲಿ ವಿಭಿನ್ನ ಹಾಗೂ ವಿಶೇಷ ಸ್ವಾದವಿರುವ ಎಳ ನೀರು ಮಾತ್ರವಲ್ಲದೆ, ಐಸ್‍ಕ್ರೀಮ್ ಜೊತೆಯಲ್ಲಿ ಫ್ರೂಟ್ ಸಲಾಡ್, ವೆಜಿಟೇಜಲ್ ಸಲಾಡ್ ಸೇರಿದಂತೆ ಮಾಕ್‍ಟೇಲ್ಸ್, ಸ್ಮೂಥೀಸ್ ಹಾಗೂ ಪಾಪಿಂಗ್ ಬೂಬಾ ಹೆಸರಿನಲ್ಲಿ ಇನ್ನೂ ವಿಶೇಷವಾದ ಸ್ವಾದಿಷ್ಟ ತಿನಿಸು ಹಾಗೂ ಪಾನೀಯಗಳು ಸಿಗಲಿವೆ.

Coconut Cafe People Can Taste 8 Types Of Flavors

ನೇರವಾಗಿ ರೈತರ ತೋಟದಿಂದ ಬರುವ ಎಳನೀರಿನ ಅಗತ್ಯವಿರುವಷ್ಟು ಸಿಪ್ಪೆಗಳನ್ನು ಬಿಡಿಸಿ ಅದಕ್ಕೆ ಬಯೋ ಡಿಗ್ರೇಡಬಲ್ ಕಾಗದ ಸುತ್ತಿ ಸ್ವಚ್ಚತೆ ಕಾಪಾಡಲಾಗಿದೆ. ಎಳನೀರನ್ನು ಕುಡಿಯಲು ಹಾಗೂ ಒಳಗಿರುವ ಗಂಜಿ ತಿನ್ನುವುದಕ್ಕೂ ವಿಶೇಷವಾದ ರೀತಿಯಲ್ಲಿ ಸಿದ್ಧ ಪಡಿಸಿರುವ ಓಪನರ್‌ ಲಭ್ಯವಿದೆ. ಉತ್ಸಾಹಿ ಯುವಕರಾದ ಪವನ್, ನಾಗಾರ್ಜುನ್ ಹಾಗೂ ಆದ್ವಿತ್ ಪಾಲುದಾರಿಕೆಯಲ್ಲಿ ಕೋಕೋ ಕೊಕೊ ನೆಕ್ಸ್ಟ್‌ ಸಂಸ್ಥೆಯನ್ನು ಆರಂಭಿಸಿದ್ದಾರೆ.

ಮಂಗಳವಾರ ಒನ್‌ ಇಂಡಿಯಾ ಕನ್ನಡದೊಂದಿಗೆ ಮಾತನಾಡಿದ ನಾಗಾರ್ಜುನ್, "ನಗರಕ್ಕೆ ಇದು ಹೊಸ ಕಾನ್‍ಸೆಪ್ಟ್ ಆಗಿದೆ. ನಾವು ಎಳನೀರು ಅಂಗಡಿಯನ್ನು ಮುಂಬೈ ನಗರದಲ್ಲಿ ನೋಡಿದ್ದೆವು. ಅದನ್ನೇ ಮೂಲವಾಗಿಟ್ಟುಕೊಂಡು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸಿದ್ದೇವೆ. ಈ ಮಾದರಿಯಲ್ಲಿ ಎಳನೀರು ಬ್ಯಾಂಕಾಕ್ ಮತ್ತು ಥೈಲ್ಯಾಂಡ್‍ನಲ್ಲಿ ಲಭ್ಯವಿದ್ದು, ಅದನ್ನೂ ಇನ್ನೂ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಮಾಡಿದ್ದೇವೆ" ಎಂದರು.

Coconut Cafe People Can Taste 8 Types Of Flavors

ಜನರು ಸರಸ್ವತಿಪುರಂನಲ್ಲಿ ಆರಂಭಿಸಿರುವ ಕೋಕೋ ಶಾಪ್‍ಗೆ ಬರಬಹುದು. ಇದಲ್ಲದೆ 19 ಕಿಯೋಸ್ಕ್‌ ಗಳಲ್ಲಿ ನಗರದ ವಿವಿಧ ಕಡೆ ಎಳನೀರು ಲಭ್ಯವಿದೆ ಅಲ್ಲಿಯೂ ಖರೀದಿಸಬಹುದು. ಆನ್‍ಲೈನ್‍ನಲ್ಲಿಯೂ ಬುಕ್ಕಿಂಗ್ ಮಾಡುವ ಸೌಲಭ್ಯವಿದೆ. 8 ವಿವಿಧ ಸವಿರುಚಿಯಲ್ಲಿ ಎಳನೀರು ಲಭ್ಯವಿದ್ದು, ಎಲ್ಲವೂ ಮೈಸೂರಿಗರಿಗೆ ಹೊಸದಾಗಿದೆ.

ಕೊಕೊ ನೆಕ್ಸ್ಟ್‌ ಹೆಬ್ಬಾಳದಲ್ಲಿ ಫ್ಯಾಕ್ಟರಿ ಹೊಂದಿದೆ. ಅಲ್ಲಿ ಎಲ್ಲವನ್ನೂ ಸಿದ್ಧ ಮಾಡಿ ತರಲಾಗುತ್ತದೆ. ಯಾರೇ ಆರ್ಡ್‍ರ್ ಮಾಡಿದರೂ ಫ್ಯಾಕ್ಟರಿಯಲ್ಲಿ ಪ್ಯಾಕಿಂಗ್ ಮಾಡಿ ಅಲ್ಲಿಂದ ನೇರವಾಗಿ ಗ್ರಾಹಕರಿಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ. ಈ ವಿನೂತನ ಪ್ರಯತ್ನಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ತಾಜಾ ಎಳನೀರೊಂದರ ದರ 40 ರುಪಾಯಿಗಳಿಂದ ಪ್ರಾರಂಭಗೊಳ್ಳುತ್ತದೆ. ಕಿಯೋಸ್ಕ್‌ ಗಳಲ್ಲಿ 35 ರೂಪಾಯಿ ದರವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+