ರಮ್ಯಾ ಹೋಟೆಲಿನಲ್ಲಿ ಇಡ್ಲಿ, ಸಾಂಬಾರ್ ತಿಂದ ಸಿದ್ದರಾಮಯ್ಯ
Recommended Video

ಮೈಸೂರು, ಮಾರ್ಚ್ 31: ವಿಧಾನಸಭೆ ಚುನಾವಣೆ ಪ್ರಚಾರದ ತರಾತುರಿಯಲ್ಲಿದ್ದರೂ ಸಿಎಂ ಸಿದ್ದರಾಮಯ್ಯ ಅವರು ಬಿಡುವು ಮಾಡಿಕೊಂಡು ಇಂದು ಬೆಳಗ್ಗೆ ತಮ್ಮ ಮೆಚ್ಚಿನ ಹೊಟೆಲ್‌ನಲ್ಲಿ ಇಡ್ಲಿ-ಸಾಂಬಾರ್ ಸವಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಬಂಡೀಪುರದ ರೆಸಾರ್ಟ್ ನಲ್ಲಿ ವಾಸ್ತವ್ಯದ ಬಳಿಕ ಮೈಸೂರಿಗೆ ಬಂದ ಕೂಡಲೇ ಸಿದ್ದರಾಮಯ್ಯ ಅವರು ಮಸಾಲೆ ದೋಸೆಗೆ ಫೇಮಸ್ ಆದ ಲಕ್ಷ್ಮೀಪುರಂ 'ರಮ್ಯಾ ಮಹೇಂದ್ರ' ಹೋಟೆಲ್ ಗೆ ತೆರಳಿ ಉಪಾಹಾರ ಸೇವಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಹಳೆಯ ಸ್ನೇಹಿತರೊಂದಿಗೆ ಹೊಟೆಲ್‌ಗೆ ತೆರಳಿದ ಸಿದ್ದರಾಮಯ್ಯ ಅವರು ಹೋಟೆಲ್‌ನಲ್ಲಿ ತಮಗೆ ಇಷ್ಟವಾದ ಇಡ್ಲಿ ಸಾಂಬಾರ್, ದೋಸೆಯನ್ನು ಗೆಳೆಯರ ಜೊತೆ ಹರಟೆ ಹೊಡೆಯುತ್ತಾ ಮೆಲ್ಲಿದರು.

ನಿನ್ನೆ ಎಲ್ಲಾ ಬಂಡಿಪುರದ ರೆಸಾರ್ಟ್‌ನಲ್ಲಿ ಆಪ್ತ ಕಾಂಗ್ರೆಸ್ ಮುಖಂಡರ ಜೊತೆ ಗುಪ್ತ ಸಭೆಗಳನ್ನು ನಡೆಸಿದ ಸಿದ್ದರಾಮಯ್ಯ ಅವರು ನಾಳೆಕೂಡಾ ಚಾಮುಂಡೇಶ್ವರಿ ಮತ್ತು ವರುಣಾ ಕ್ಷೇತ್ರದ ಪ್ರಮುಖ ಮುಖಂಡರೊಂದಿಗೆ ಗುಪ್ತ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಚಾಮುಂಡೇಶ್ವರಿಯಲ್ಲಿ ಟೈಟ್-ಫೈಟ್ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ 'ಫೈಟ್ ಅಂದ್ರೆ ಏನು ಒಬ್ರಿಗೊಬ್ರು ಕುಸ್ತಿ ಆಡೋದಾ? ಫೈಟ್ ಏನೂ ಇಲ್ಲ , ಜನ ತೀರ್ಮಾನ ಮಡುವುದು. ಅವರ ಒಲವು ನಮ್ಮ ಪರ ಇದೆ' ಎಂದು ಕುಷಾಲಿನಿಂದ ಉತ್ತರಿಸಿದರು.
ಮೇ 15 ಕ್ಕೆ ಕಾಂಗ್ರೆಸ್ ಸರ್ಕಾರದ ಶ್ರಾದ್ಧ ಎಂದಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ 'ಅವನೊಬ್ಬ ಮತಾಂಧ, ಅವನ ಹೇಳಿಕೆಗಳಿಗೆಲ್ಲಾ ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಏಕವಚನದಲ್ಲೇ ಕಿಡಿಕಾರಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಹಾಲಿ ಶಾಸಕ, ಮಾಜಿ ಸಚಿವ ಜಿ.ಟಿ.ದೇವೇಗೌಡ ಮತ್ತು ಸಿಎಂ ಸಿದ್ದರಾಮಯ್ಯ ಅವರ ನಡುವಿನ ಸ್ಫರ್ಧೆ ಭಾರಿ ಜಿದ್ದಾ ಜಿದ್ದಿನ ಕಣ ಎಂದು ಪರಿಗಣಿಸಲ್ಪಟ್ಟಿದೆ. ಜಿ.ಟಿ.ದೇವೇಗೌಡ ಅವರು ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರದಲ್ಲಿ ನಿರತರಾಗಿದ್ದಾರೆ.












Click it and Unblock the Notifications