ಮೈಸೂರಿನಲ್ಲಿ ಮನೆಯಲ್ಲೇ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆ ಬಂಧನ

ಮೈಸೂರು, ಆಗಸ್ಟ್ 12: ತಮ್ಮ ಮನೆಯಲ್ಲೇ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆ ಮತ್ತು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ನಗರದ ಹಿನಕಲ್ ಹೊಸಬೀದಿಯಲ್ಲಿ ನಡೆದಿದೆ.

ಹಿನಕಲ್ ನ ಹೊಸಬೀದಿಯ ನಿವಾಸಿ ದಿವಂಗತ ರಾಘು ಎಂಬುವರ ಪತ್ನಿ ಜ್ಯೋತಿ ಹಾಗೂ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮೈಸೂರು ಬಿಳಿಕೆರೆ ಬಳಿಯ ಹಳೆಪುರ ನಿವಾಸಿ ದಿಲೀಪ್, ಬಿಳಿಕೆರೆಯ ದಿನೇಶ, ಬಿಳಿಕೆರೆಯ ದೇವರಹಳ್ಳಿಯ ವಾಸು ಬಂಧಿತರಾದವರು.

ಜ್ಯೋತಿ ಎಂಬಾಕೆ ತಮ್ಮ ಮನೆಯಲ್ಲಿ ಮಹಿಳೆಯರನ್ನಿಟ್ಟುಕೊಂಡು ಅಲ್ಲಿಗೆ ಗ್ರಾಹಕರನ್ನು ಕರೆಯಿಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದಳು ಎನ್ನಲಾಗಿದೆ. ಕಳೆದ ಹಲವು ಸಮಯಗಳಿಂದ ಇದನ್ನು ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ ಯಾರಿಗೂ ಸಂಶಯ ಬಂದಿರಲಿಲ್ಲ. ಇತ್ತೀಚೆಗೆ ಈ ಮನೆಗೆ ಹೊತ್ತಲ್ಲ ಹೊತ್ತಿನಲ್ಲಿ ಅಪರಿಚಿತರು ಬಂದು ಹೊಗುತ್ತಿರುವುದನ್ನು ಗಮನಿಸಿದ ಸ್ಥಳೀಯರಿಗೆ ಇಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವುದು ದೃಢಪಟ್ಟಿದೆ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

CCB Arrested Women Involved In Prostitution In Hinakal

ಪೊಲೀಸರಿಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮೈಸೂರು ನಗರದ ಡಿಸಿಪಿ ಮುತ್ತುರಾಜು ಅವರ ಮಾರ್ಗದರ್ಶನ ತಂಡ ದಾಳಿ ನಡೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಜ್ಯೋತಿ ಮತ್ತು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ದಿಲೀಪ್, ದಿನೇಶ್ ಮತ್ತು ವಾಸು ಅವರನ್ನು ಬಂಧಿಸಿ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+