ಸಿದ್ದರಾಮಯ್ಯಗೆ ಆತಂಕ, ಭೂ ಹಗರಣ ಕೇಸ್, ಸಿಬಿಐ ತನಿಖೆಗೆ?

Recommended Video

      ಸಿದ್ದರಾಮಯ್ಯಗೆ ಆತಂಕ, ಭೂ ಹಗರಣ ಕೇಸ್, ಸಿಬಿಐ ತನಿಖೆಗೆ? | Oneindia Kannada

      ಮೈಸೂರು, ನವೆಂಬರ್ 21: ಕೃಷಿ ಭೂಮಿಯಲ್ಲಿ ನಿಯಮ ಉಲ್ಲಂಘಿಸಿ ಮನೆ ನಿರ್ಮಾಣ ಮಾಡಿದ ಆರೋಪ ಹೊತ್ತುಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆತಂಕ ಶುರುವಾಗಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಸಾಧ್ಯತೆ ಕಂಡು ಬಂದಿದೆ.

      ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ಧದ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಕುರಿತು ಮೈಸೂರು ಪೊಲೀಸ್ ಆಯುಕ್ತರಿಗೆ ಪೊಲೀಸ್ ಮಹಾನಿರ್ದೇಶಕರು(ಡಿಜಿ -ಐಜಿಪಿ) ಪತ್ರ ಬರೆದಿದ್ದಾರೆ.

      ಮೈಸೂರಿನ ಗಂಗರಾಜು ಎಂಬವರು ಸಿದ್ದರಾಮಯ್ಯ ಸೇರಿ ಹಲವರ ವಿರುದ್ಧ ದೂರು ನೀಡಿದ್ದರು. ಜುಲೈ 23 ರಂದು ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

      ಆದರೆ, ಈ ಪ್ರಕರಣದಲ್ಲಿ ಆರೋಪಿ ಸಿದ್ದರಾಮಯ್ಯ ಅವರ ವಿರುದ್ಧ ಎಫ್ಐಆರ್ ದಾಖಲಾಗಿದ್ದರು. ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ ಎಂದು ಆರೋಪಿಸಿ ಗಂಗರಾಜು ಅವರು ಡಿಜಿ ಐಜಿಪಿ ನೀಲಮಣಿರಾಜು ಅವರಿಗೆ ದೂರು ನೀಡಿದ್ದರು. ಮೈಸೂರು ಪೊಲೀಸ್ ಆಯುಕ್ತರಿಗೆ ಈ ಬಗ್ಗೆ ವಿವರಣೆ ಕೋರಿ ಡಿಜಿ ಐಜಿಪಿ ಪತ್ರ ಬರೆದಿದ್ದಾರೆ.

      ಕೃಷಿಭೂಮಿಯಲ್ಲಿ ಮನೆ ನಿರ್ಮಾಣ ಆರೋಪ

      ಕೃಷಿಭೂಮಿಯಲ್ಲಿ ಮನೆ ನಿರ್ಮಾಣ ಆರೋಪ

      ಮೈಸೂರಿನ ವಿಜಯನಗರದಲ್ಲಿರುವ ಸಿದ್ದರಾಮಯ್ಯ ನಿವಾಸವೇ ಈಗ ವಿವಾದದ ಕೇಂದ ಬಿಂದು. ಈ ಮನೆಯನ್ನು ಕೃಷಿಭೂಮಿಯಲ್ಲಿ ನಿರ್ಮಿಸಲಾಗಿದೆ. ಮನೆ ಜಾಗ ಖರೀದಿ, ನಿರ್ಮಾಣ, ಅನುಮತಿ ಎಲ್ಲದರಲ್ಲೂ ಅಕ್ರಮ ಎಸಗಲಾಗಿದೆ ಎಂದು ಮೈಸೂರಿನ ಗಂಗರಾಜು ಎಂಬುವರು ದೂರು ಸಲ್ಲಿಸಿ, ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿದ್ದರು.

      ಅಕ್ರಮವಾಗಿ ಡಿನೋಟಿಫೈ, ಪಾಲಿಕೆ ಅನುಮತಿ ಇಲ್ಲ

      ಅಕ್ರಮವಾಗಿ ಡಿನೋಟಿಫೈ, ಪಾಲಿಕೆ ಅನುಮತಿ ಇಲ್ಲ

      ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಈ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿತ್ತು. ಆದರೆ, ಈ ಜಾಗವನ್ನು ಸಿದ್ದರಾಮಯ್ಯ ಅವರು ತಮ್ಮ ಪ್ರಭಾವ ಬಳಸಿ ಡಿನೋಟಿಫೈ ಮಾಡಿಸಿದ್ದಲ್ಲದೆ, ಜಾಗ ಖರೀದಿಸಿ ಮನೆ ಕಟ್ಟಿದ್ದಾರೆ.

      ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ, ಗ್ರಾಮ ಪಂಚಾಯಿತಿಯಿಂದ ಅನುಮತಿ ಕೂಡಾ ಸಮರ್ಪಕವಾಗಿ ಸಿಕ್ಕಿಲ್ಲ ಎಂದು ಆರೋಪಿಸಲಾಗಿದೆ.

      ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಕೇಸ್

      ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಕೇಸ್

      ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ನಾಲ್ಕು ಜನರ ವಿರುದ್ಧ 9 ಐಪಿಸಿ ಸೆಕ್ಷನ್ 120ಬಿ, 197, 166, 167, 169, 200, 417, 409, 420 ಹಾಗೂ ಸೆಕ್ಷನ್ 468] ಪ್ರಕರಣ ದಾಖಲಿಸಲಾಗಿದೆ. ಮೈಸೂರಿನ ಸಿವಿಲ್ ನ್ಯಾಯಾಲಯವು ಸಿದ್ದರಾಮಯ್ಯ ವಿರುದ್ಧ ಎಫ್ ಐಆರ್ ದಾಖಲಿಸಲು ಆದೇಶ ನೀಡಿತ್ತು

      Array

      Array

      30 ಗುಂಟೆ ಜಾಗ ಅಕ್ರಮ ಡಿನೋಟಿಫೈ ಮಾಡಲಾಗಿದೆ. ಅದರ ಸುತ್ತಾ 400-500 ಎಕರೆ ಜಾಗವನ್ನು ಭೂಸ್ವಾಧೀನವಾಗಿದೆ. ಸಿದ್ದರಾಮಯ್ಯ ಜೊತೆ ಮುಡಾದ ಮಾಜಿ ಅಧ್ಯಕ್ಷರಾದ ಸಿ. ಬಸವೇಗೌಡ, ಡಿ ಧೃವಕುಮಾರ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಸಿ. ಬಸವೇಗೌಡ ಕೂಡ ಸಿದ್ದರಾಮಯ್ಯ ಅವರಿಗೆ ಸಹಾಯ ಮಾಡಿದ್ದಾರೆ ಎಂದು ಗಂಗರಾಜು ಅವರು ಖಾಸಗಿ ಸುದ್ದಿ ವಾಹಿನಿ ಜತೆ ಮಾತನಾಡುತ್ತಾ ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+