ಕೆಸಿನೋ ಪಾರ್ಕ್ ಹೋಟೆಲ್‌ನಲ್ಲಿ ಸಿಬ್ಬಂದಿ ದಹನಕ್ಕೆ ಯತ್ನ
ಮೈಸೂರು, ಆ.28 : ಮೈಸೂರಿನ ಪ್ರತಿಷ್ಠಿತ ಕೆಸಿನೋ ಪಾರ್ಕ್ ಹೋಟೆಲ್‌ನಲ್ಲಿ ಸಿಬ್ಬಂದಿಗಳನ್ನು ಸಜೀವವಾಗಿ ಸುಟ್ಟುಹಾಕಲು ಯತ್ನಿಸಲಾಗಿದೆ. ಘಟನೆಯಿಂದಾಗಿ ಹೋಟೆಲ್‌ನ ಆರು ಮಂದಿ ಸಿಬ್ಬಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬುಧವಾರ ತಡರಾತ್ರಿ ನಗರದ ಬಂಬೂ ಬಜಾರ್‌ನಲ್ಲಿರುವ ಕೆಸಿನೋ ಪಾರ್ಕ್ ಹೋಟೆಲ್‌ನ ಆರುಮಂದಿ ಸಿಬ್ಬಂದಿಗಳು ಮಲಗಿದ್ದ ಕೋಟೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಎಲ್ಲರೂ ಗಾಯಗೊಂಡಿದ್ದು, ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಗಾಯಗೊಂಡವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.












Click it and Unblock the Notifications