ಮೈಸೂರಿನಲ್ಲಿ ಬೆಂಗಳೂರಿನ ಕಾಮುಕ ಟೆಕ್ಕಿ ಬಂಧನ

ಮೈಸೂರು, ಡಿ. 15: ವಿದ್ಯಾಭ್ಯಾಸ ಕೊಡಿಸುತ್ತೇನೆ ಎಂದು ದೂರದ ಸಂಬಂಧಿಯೊಬ್ಬಳನ್ನು ಮನೆಗೆ ಕರೆತಂದು ಇಟ್ಟುಕೊಂಡು, ಆಕೆಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ ಹೆದರಿಸಿ ಹಲ್ಲೆ ಮಾಡುತ್ತಿದ್ದ ಇಂಜಿನಿಯರ್ ಇದೀಗ ಜೈಲು ಸೇರಿದ್ದಾನೆ.

ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಲ್ಲಿ ಬೆಂಗಳೂರಿನ ಐಟಿ ಕಂಪನಿಯೊಂದರ ಉದ್ಯೋಗಿಯನ್ನು ಬಂಧಿಸಲಾಗಿದೆ. 16 ವರ್ಷದ ಬಾಲಕಿಯ ತಾಯಿ ಪೊಲೀಸರಿಗೆ ಆರೋಪಿಯ ವಿರುದ್ಧ ದೂರು ನೀಡಿದ್ದಳು. ತಕ್ಷಣ ಮೈಸೂರು ಮೂಲದ ವೆಂಕಟೇಶ್ ನನ್ನು ಬಂಧಿಸಲಾಗಿದೆ. ಚಂದಾಪುರದಲ್ಲಿ ವಾಸವಿದ್ದ ವೆಂಕಟೇಶ್ ವಿರುದ್ಧ ಉದಯಗಿರಿ ಪೊಲೀಸರು ಪೊಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.[ಲೈಂಗಿಕ ದೌರ್ಜನ್ಯ ಹೆಸರಲ್ಲಿ ಹಣ ವಸೂಲಿ: ಪತ್ರಕರ್ತ ಸೆರೆ]

rape

ಕೆಲ ವರ್ಷಗಳ ಹಿಂದೆಯೇ ಮದುವೆಯಾಗಿದ್ದ ವೆಂಕಟೇಶ ಬಾಲಕಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡುತ್ತೇನೆ ಎಂದು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದ. ತನ್ನ ಹೆಂಡತಿ ಮನೆಯಲ್ಲಿಲ್ಲದ ವೇಳೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಒಪ್ಪದಿದ್ದರೆ ಹಲ್ಲೆ ಮಾಡುತ್ತಿದ್ದ. ಆದರೆ ಬಾಲಕಿ ಮೈಸೂರಿಗೆ ಮರಳಿದಾಗ ತನ್ನ ತಾಯಿ ಬಳಿ ವಿಷಯ ಹೇಳಿಕೊಂಡಿದ್ದಾಳೆ.

ಸಮಾಜಕ್ಕೆ ಹೆದರಿ ಬಾಲಕಿ ಇಷ್ಟು ದಿನ ಸುಮ್ಮನಿದ್ದಳು, ಅಲ್ಲದೇ ವೆಂಕಟೇಶ ಆಕೆಯನ್ನು ಭಯ ಬೀಳುವಂತೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+