ತಾಯಿ ಚಾಮುಂಡಿ ಬಳಿ ಯತ್ನಾಳ್ ಬೇಡಿಕೊಂಡಿದ್ದೇನು?

ಮೈಸೂರು, ಜುಲೈ 05; "ರಾಜ್ಯವನ್ನು ಲೂಟಿ ಮಾಡುತ್ತಿರುವ ದುಷ್ಟರ ಸಂಹಾರ ಆಗಬೇಕು" ಎನ್ನುವ ಮೂಲಕ ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿರುದ್ಧ ಮತ್ತೊಮ್ಮೆ ಪರೋಕ್ಷ ವಾಗ್ದಾಳಿ ನಡೆಸಿದರು.

ಸೋಮವಾರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. "ಅನ್‌ಲಾಕ್ ಹಿನ್ನಲೆಯಲ್ಲಿ ಚಾಮುಂಡಿ ದೇವಿಯ ದರ್ಶನಕ್ಕೆ ಬಂದಿದ್ದೇನೆ. ದುಷ್ಟರ ಸಂಹಾರ ಮಾಡು ಅಂತ ತಾಯಿ ಬಳಿ ಬೇಡಿಕೊಂಡಿದ್ದೇನೆ" ಎಂದರು.

"ಯಾರು ಅಪಾರ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೋ, ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೋ, ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೋ ಅವರೆಲ್ಲರೂ ದುಷ್ಟರು. ಅತಿ ಶೀರ್ಘದಲ್ಲೇ ದುಷ್ಟ ಸಂಹಾರ ಆಗುವ ವಿಶ್ವಾಸವೂ ಇದೆ" ಎಂದು ವಾಗ್ದಾಳಿ ನಡೆಸಿದರು.

Basanagouda Patil Yatnal Visits Chamundeshwari Temple

ನಾಯಕತ್ವ ಬದಲಾವಣೆ ಬಗ್ಗೆ ಮತ್ತೊಮ್ಮೆ ಪ್ರಸ್ತಾಪಿಸಿ, "ಕೆಟ್ಟವರೊಂದಿಗೆ ಒಳ್ಳೆಯವರೂ ಸೇರಿಕೊಂಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ವಿಳಂಬ ಆಗುತ್ತಿದೆ. ಕುರುಕ್ಷೇತ್ರ ಯುದ್ಧದಲ್ಲಿ ಕೌರವರೊಂದಿಗೆ ಭೀಷ್ಮ, ದ್ರೋಣಾಚಾರ್ಯರಂತ ಒಳ್ಳೆಯವರೂ ಇದ್ದರು. ಕೆಲವು ಸಂದರ್ಭದಲ್ಲಿ ಹೀಗೆಲ್ಲ ಆಗುತ್ತೆ. ಆದರೆ ದುಷ್ಟ ಸಂಹಾರ ಆಗಲೇಬೇಕಲ್ವಾ?" ಎಂದು ಪ್ರಶ್ನಿಸಿದರು.

"ಪಕ್ಷದ ಹೈಕಮಾಂಡ್ ಕೂಡ ಮುಖ್ಯಮಂತ್ರಿ ಬದಲಾವಣೆಗೆ ಪರಿಶೀಲನೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 15 ನೂತನ ಸಿಎಂ ಧ್ವಜಾರೋಹಣ ಚರ್ಚೆ ವಿಚಾರ. ಅಲ್ಲಿವರೆಗೂ ಯಾಕೆ ಮುಂದುವರಿಸಬೇಕು ಹಾಗೂ ಶೀಘ್ರದಲ್ಲೇ ಸಿಎಂ ಬದಲಾವಣೆ ಮಾಡಬೇಕು"‌ ಎಂದರು.

ಬಿ‌. ವೈ. ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, "ಸಿಎಂ ನಿವಾಸ ಕಾವೇರಿ ಹಿಂಭಾಗದಲ್ಲಿ ಗೆಸ್ಟ್‌ಗೌಸ್‌ ಇದೆ. ಇವರ ಎಲ್ಲ ಡೀಲ್‌ಗಳೂ ಅಲ್ಲೇ ನಡೆಯೋದು. ದಿನಕ್ಕೆ ನೂರು ಕೋಟಿ ರೂ. ಲೂಟಿ ಹೊಡೆಯುತ್ತಿದ್ದಾರೆ. ಹೀಗಿದ್ದರೂ ಸಿಸಿಬಿ ಪೊಲೀಸರು ಅಲ್ಲಿಗೆ ಯಾಕೆ ರೈಡ್ ಮಾಡಲ್ಲ? ಎಂದು ಕೇಳಿದರು.

"ದಕ್ಷಿಣೆ ಕಾಸಿಗೆ ಆಸೆ ಬಿದ್ದು ಕೆಲವು ಮಠಾಧೀಶರು ಸಿಎಂ ಪರ ಮಾತನಾಡುತ್ತಿದ್ದಾರೆ. ಲವ್ ಜಿಹಾದ್‌ ತಡೆಯಲು ಮಠಾಧೀಶರು ಮುಂದಾಗಬೇಕು. ಕೆಟ್ಟವರಿಗೆ ಬುದ್ದಿ ಹೇಳುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಸಿಎಂ ಬದಲಾವಣೆ ಮಾಡಿದರೆ ಬೀದಿಗೆ ಬರ್ತೀವಿ ಅನ್ನೋದು ಸರಿಯಲ್ಲ. ಮುಖ್ಯಮಂತ್ರಿ ಕುಟುಂಬದಿಂದ ಲಿಂಗಾಯತ ಸಮಾಜಕ್ಕೆ ಕೆಟ್ಟ ಹೆಸರು ಬಂದಿದೆ" ಎಂದು ದೂರಿದರು.

"ಭ್ರಷ್ಟರ ಪರವಾಗಿ ಮಠಾಧೀಶರು ಮಾತನಾಡುತ್ತಿದ್ದು, ನಿಮಗೆ ಅಷ್ಟೊಂದು ರಾಜಕೀಯ ಹುಚ್ಚು ಇದ್ರೆ ಖಾವಿ ತೆಗೆದು ಖಾದಿ ಧರಿಸಿ ಬನ್ನಿ" ಎಂದು ಶಾಸಕ ಯತ್ನಾಳ್ ವಾಗ್ದಾಳಿ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+