ಮೈಸೂರು : ಬಿ.ದಯಾನಂದ ಅಧಿಕಾರ ಸ್ವೀಕಾರದ ಚಿತ್ರಗಳು
ಮೈಸೂರು, ಏ. 29 : ಮೈಸೂರು ನಗರದ ಪೊಲೀಸ್ ಆಯುಕ್ತರಾಗಿ ಬಿ.ದಯಾನಂದ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ನಗರ ಹೆಚ್ಚುವರಿ ಆಯುಕ್ತರಾಗಿ ವರ್ಗಾವಣೆಗೊಂಡಿರುವ ಡಾ.ಎಂ.ಎ.ಸಲೀಂ ಅವರಿಗೆ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು.
ಬುಧವಾರ ಬೆಳಗ್ಗೆ ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ ಬಿ.ದಯಾನಂದ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು. ನಂತರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಡಾ.ಎಂ.ಎ.ಸಲೀಂ ಅವರಿಂದ ದಯಾನಂದ ಅವರು ಅಧಿಕಾರ ಸ್ವೀಕರಿಸಿದರು.[ಡಾ.ಎಂ.ಎ.ಸಲೀಂ ವರ್ಗಾವಣೆ]
ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ ಮತ್ತು ಭದ್ರತೆ)ರಾಗಿದ್ದ ಬಿ.ದಯಾನಂದ ಅವರನ್ನು ಮೈಸೂರು ಪೊಲೀಸ್ ಆಯುಕ್ತರಾಗಿ ಸರ್ಕಾರ ಶನಿವಾರ ವರ್ಗಾವಣೆ ಮಾಡಿತ್ತು. ಡಾ.ಎಂ.ಎ.ಸಲೀಂ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. [ಟ್ವಿಟ್ಟರಿಗೆ ಬಂದ ಮೈಸೂರು ಪೊಲೀಸರು]
ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ದಯಾನಂದ ಅವರು, 'ಸರ್ಕಾರ ಯಾವುದೇ ನಗರಕ್ಕೆ ವರ್ಗಾವಣೆ ಮಾಡಿದರೂ ಸಂತೋಷದಿಂದ ಕೆಲಸ ಮಾಡುತ್ತೇನೆ. ಮೈಸೂರು ನಗರದಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಶ್ರಮಿಸುತ್ತೇನೆ' ಎಂದು ಹೇಳಿದರು. ಚಿತ್ರಗಳಲ್ಲಿ ನೋಡಿ ಅಧಿಕಾರ ಸ್ವೀಕಾರ

ಅಧಿಕಾರ ವಹಿಸಿಕೊಂಡ ಬಿ.ದಯಾನಂದ
ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ಬಿ.ದಯಾನಂದ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಮೈಸೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಡಾ.ಎಂ.ಎ.ಸಲೀಂ ಅವರು ದಯಾನಂದ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಗೌರವ ವಂದನೆ ಸಲ್ಲಿಕೆ
ಬುಧವಾರ ಬೆಳಗ್ಗೆ ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬಿ.ದಯಾನಂದ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು. ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ ಮತ್ತು ಭದ್ರತೆ) ಬಿ.ದಯಾನಂದ ಅವರನ್ನು ಮೈಸೂರು ಪೊಲೀಸ್ ಆಯುಕ್ತರಾಗಿ ಸರ್ಕಾರ ಶನಿವಾರ ವರ್ಗಾವಣೆ ಮಾಡಿತ್ತು.

ಡಾ.ಎಂ.ಎ.ಸಲೀಂ ಅವರಿಗೆ ಆತ್ಮೀಯ ಬೀಳ್ಕೊಡುಗೆ
ಮೈಸೂರು ನಗರ ಪೊಲೀಸ್ ಆಯುಕ್ತರಾಗಿದ್ದ ಡಾ.ಎಂ.ಎ.ಸಲೀಂ ಅವರಿಗೆ ಈ ಸಂದರ್ಭದಲ್ಲಿ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು. ಪೊಲೀಸ್ ಆಯುಕ್ತರಾಗಿದ್ದಾಗ ಸಹಕಾರ ನೀಡಿದ ಮೈಸೂರಿನ ಎಲ್ಲಾ ಜನತೆಗೆ ಅವರು ಧನ್ಯವಾದ ಸಲ್ಲಿಸಿದರು.

ಡಾ.ಎಂ.ಎ.ಸಲೀಂ ಬೆಂಗಳೂರಿಗೆ ವರ್ಗಾವಣೆ
ಮೈಸೂರು ಪೊಲೀಸ್ ಆಯುಕ್ತರಾಗಿದ್ದ ಡಾ.ಎಂ.ಎ.ಸಲೀಂ ಅವರನ್ನು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ ಮತ್ತು ಭದ್ರತೆ)ರಾಗಿ ವರ್ಗಾವಣೆ ಮಾಡಲಾಗಿದೆ.

ಸಂತೋಷದಿಂದ ಕೆಲಸ ಮಾಡುತ್ತೇನೆ
ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ದಯಾನಂದ ಅವರು, 'ಸರ್ಕಾರ ಯಾವುದೇ ನಗರಕ್ಕೆ ವರ್ಗಾವಣೆ ಮಾಡಿದರೂ ಸಂತೋಷದಿಂದ ಕೆಲಸ ಮಾಡುತ್ತೇನೆ. ಮೈಸೂರು ನಗರದಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಶ್ರಮಿಸುತ್ತೇನೆ' ಎಂದು ಹೇಳಿದರು.












Click it and Unblock the Notifications