ಆಟೋದಲ್ಲಿ ಬಿಟ್ಟಿದ್ದ ದುಬಾರಿ ಫೋನ್ ಹಿಂದಿರುಗಿಸಿದ ಚಾಲಕ
ಮೈಸೂರು, ಫೆಬ್ರವರಿ 26: ಪ್ರಯಾಣಿಕರೊಬ್ಬರು ಆಟೋದಲ್ಲಿ ಬಿಟ್ಟು ಹೋಗಿದ್ದ ಐಫೋನ್ ಹಿಂತಿರುಗಿಸಿ ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
ಫೋನ್ ಹಿಂದಿರುಗಿಸಿದ ಚಾಲಕನ ಹೆಸರು ನೂರ್ ಪಾಷ. ಪ್ರಯಾಣಿಕರೊಬ್ಬರು ಆಟೋದಲ್ಲಿ ಪ್ರಯಾಣಿಸಿ ಐಫೋನ್ ಅನ್ನು ಮರೆತು ಆಟೋದಲ್ಲಿ ಬಿಟ್ಟು ಹೊರಟು ಹೋಗಿದ್ದರು. ಆಟೋದಲ್ಲಿ ಫೋನ್ ಕಂಡ ನೂರ್ ಪಾಷ, ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಪೋಲಿಸ್ ಆಯುಕ್ತರಾದ ಡಾ.ಚಂದ್ರಗುಪ್ತರವರಿಗೆ ಐಫೋನ್ ಹಿಂದಿರುಗಿಸಿದ್ದಾರೆ.

"ಆಟೋ ಚಾಲಕ ನೂರ್ ಪಾಷ ಅವರ ಪ್ರಾಮಾಣಿಕತೆಗೆ ನಗರ ಪೋಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರು, ಮೈಸೂರು ಸಿಟಿ ಪೊಲೀಸ್ ಫೇಸ್ ಬುಕ್ ನಲ್ಲಿ ನೂರ್ ಪಾಷ ಅವರ ಫೋಟೋ ಹಾಕಿ ಶ್ಲಾಘಿಸಿದ್ದಾರೆ.












Click it and Unblock the Notifications