ಮೈಸೂರು ದಸರಾದಲ್ಲಿ ಕಣ್ತುಂಬಲಿದೆ ಆಕರ್ಷಕ ಏರ್ ಶೋ!
ಮೈಸೂರು, ಸೆಪ್ಟೆಂಬರ್ 26: ಮೈಸೂರು ದಸರಾ ಮಹೋತ್ಸವಕ್ಕೆ ಈ ಬಾರಿ ಏರ್ ಶೋ ವಿಶೇಷ ಮೆರುಗು ನೀಡಲಿದೆ.
ಮೈಸೂರಿನಲ್ಲಿ ಏರ್ ಶೋ ನಡೆಸಲು ಒಪ್ಪಿಗೆ ಸಿಕ್ಕಿದ್ದು, ಸೆಪ್ಟೆಂಬರ್ 29 ರಂದು ಬೆಳಗ್ಗೆ 11 ಗಂಟೆಗೆ ಏರ್ ಶೋ ಉದ್ಘಾಟನೆಯಾಗಲಿದೆ.

ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ಏರ್ ಶೋ ನಡೆಸುವಂತೆ ಇತ್ತೀಚೆಗೆ ದೆಹಲಿಗೆ ಹೋಗಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದರು. ಮುಖ್ಯಮಂತ್ರಿಯವರ ಮನವಿಗೆ ಸ್ಪಂದಿಸಿದ ನಿರ್ಮಲಾ ಸೀತಾರಾಮನ್ ಏರ್ ಶೋ ಗೆ ಅನುಮತಿ ನೀಡಿರುವುದು ದಸರಾ ಪ್ರವಾಸಿಗರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.












Click it and Unblock the Notifications