ಮೈಸೂರು : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ ಖಾಲಿ
ಮೈಸೂರು, ಜ.8 : ಮೈಸೂರು ಗ್ರಾಮಾಂತರ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳನ್ನು ಗೌರವಧನದ ಆಧಾರದ ಮೇಲೆ ಆಯ್ಕೆ ಮಾಡಲು 18 ರಿಂದ 35 ವರ್ಷ ವಯೋಮಿತಿಯೊಳಗಿನ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.
ಕಮರಹಳ್ಳಿ, ಸಜ್ಜೆಹುಂಡಿ, ತಾವರೆಕಟ್ಟೆ ಹಾಗೂ ಮಾರಶೆಟ್ಟಹಳ್ಳಿ ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿ ಖಾಲಿ ಇವೆ. ಬೋಗಾದಿ, ಕಡಕೊಳ, ಬಡಗಲಹುಂಡಿ, ಕುಪ್ಪೇಗಾಲ, ಎಸ್.ಆರ್.ಹುಂಡಿ, ಶ್ಯಾದನಹಳ್ಳಿ, ಮಾರ್ಬಳ್ಳಿಹುಂಡಿ, ಕೆಂಚಲಗೂಡು ಹಾಗೂ ಬಂಡಿಪಾಳ್ಯ ಗ್ರಾಮಗಳಲ್ಲಿ ಅಂಗನವಾಡಿ ಸಹಾಯಕಿಯರ ಹುದ್ದೆ ಖಾಲಿ ಇವೆ.

ವಿದ್ಯಾರ್ಹತೆ : ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಸಲ್ಲಿಸುವವರ ಕನಿಷ್ಠ 4ನೇ ತರಗತಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಎಸ್ಎಸ್ಎಲ್‌ಸಿ ವಿದ್ಯಾರ್ಹತೆ ಹೊಂದಿರಬೇಕು. [ಕರವೇಯಿಂದ ಉಚಿತ ಉದ್ಯೋಗ ಮಾರ್ಗದರ್ಶನ ಶಿಬಿರ]
ಜನವರಿ 24 ಕೊನೆಯ ದಿನ : ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 24. ಹೆಚ್ಚಿನ ಮಾಹಿತಿಗೆ 0821-2567940 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು.
ಆಸಕ್ತರು ನಿಗದಿತ ಅರ್ಜಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಮೈಸೂರು ಗ್ರಾಮಾಂತರ ಯೋಜನೆ, ನಂ. 3653/ಹೆಚ್. ಸಾಹುಕಾರ್ ಚೆನ್ನಯ್ಯ ರಸ್ತೆ, ಸರಸ್ವತಿಪುರಂ, ಮೈಸೂರು -09 ಇಲ್ಲಿ ಪಡೆಯಬಹುದಾಗಿದೆ.












Click it and Unblock the Notifications