ನೋಡ್ರಿ, ಮೈಸೂರು ಸುಂಕನಹಳ್ಳಿಯಲ್ಲಿ ಕೋಳಿ ಕೂಗೋದಿಲ್ವಂತೆ!

ಮೈಸೂರು,ಜನವರಿ,20: ಆ ಊರಿನಲ್ಲಿ ಜನ ಮಾಂಸ ಸೇವಿಸಲ್ಲ..ಹೆಂಡ ಕುಡಿಯಲ್ಲ..ಕೋಳಿ ಕೂಗುವ ಸದ್ದು ಕೇಳಲ್ಲ.. ಇದೇನಪ್ಪಾ ಅಂಥ ಅಚ್ಚರಿಯಾಯಿತೇ? ಇದು ಅಚ್ಚರಿಯಾದರೂ ಸತ್ಯ. ಮೈಸೂರಿನ ಕೆ.ಆರ್.ನಗರ ತಾಲೂಕಿನ ಭೇರ್ಯ-ಸಾಲಿಗ್ರಾಮ ಮುಖ್ಯ ರಸ್ತೆಯ ಬಾಚಹಳ್ಳಿ ಗ್ರಾಮದಿಂದ 2ಕಿಮೀ ದೂರದಲ್ಲಿರುವ ಸಂಕನಹಳ್ಳಿಗೆ ಇದೆಲ್ಲ ಕಂಡು ಬರುತ್ತದೆ.

ಮಾಂಸ ಪ್ರಿಯರಿಗೆ ಕೋಳಿ ಅಂದ್ರೆ ಬಲುಪ್ರಿಯ. ಹೀಗಾಗಿ ಗ್ರಾಮೀಣ ಪ್ರದೇಶದಿಂದ ಪಟ್ಟಣ ಪ್ರದೇಶದ ತನಕ ಕೋಳಿಗಳು ಕಂಡು ಬರುತ್ತವೆ. ಹೀಗಿರುವಾಗ ಸಂಕನಹಳ್ಳಿಯಲ್ಲಿ ಕೋಳಿಗಳೇ ಇಲ್ಲ ಎಂದರೆ ಆಶ್ಚರ್ಯವಾಗುವುದು ಖಂಡಿತಾ. ಇದಕ್ಕೆ ಕಾರಣವೂ ಇದೆ. ಏನಿದು ಮುಂದೆ ಓದಿ.[ಅರೆರೆ.. ಅವರೆ ಮೇಳ.. ಕೊಂಚ ದುಬಾರಿ, ಆದ್ರೂ ಬರ್ರಿ!]

Mysuru

ಗ್ರಾಮದಲ್ಲಿ ಸುಮಾರು 365ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದು ಇವರಲ್ಲಿ ಬಣಜಿಗಶೆಟ್ಟರು, ಲಿಂಗಾಯಿತರು ಹಾಗೂ ಅರ್ಚಕರು ಮಾತ್ರ ಇದ್ದಾರೆ. ಇವರು ಗ್ರಾಮದಲ್ಲಿ ಹಸು, ಎಮ್ಮೆ, ಕುರಿಗಳನ್ನ ಮಾತ್ರ ಸಾಕುತ್ತಾರೆ ಜೊತೆಗೆ ಸಸ್ಯಹಾರಿಗಳಾಗಿದ್ದಾರೆ. ಹೀಗಿದ್ದ ಮೇಲೆ ಕೋಳಿ ಸಾಕುವ ಪ್ರಮೇಯ ಎಲ್ಲಿಂದ ಬಂತು?

ಇನ್ನು ಗ್ರಾಮದಲ್ಲಿ ಮಾಂಸ ಅಡುಗೆ ಮಾಡಿದರೆ ಅಂಥವರಿಗೆ ಕೆಡುಕಾಗುತ್ತದೆ ಎಂಬ ಮಾತುಗಳನ್ನು ಹಿರಿಯರು ಹೇಳುತ್ತಾರೆ. ಹಿಂದೆ ಒಮ್ಮೆ ಗೊಂಬೆ ಆಡಿಸುವ ಕಲಾವಿದರು ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದರು. ಅವರು ಮಾಂಸಹಾರಿಗಳಾಗಿದ್ದು ಊರಿನಿಂದ ಹೊರಗೆ ಅಡುಗೆ ಮಾಡಿ ಊಟ ಮಾಡಿ ನಂತರ ಗ್ರಾಮಕ್ಕೆ ಬರುತ್ತಿದ್ದರು.[ಅಡುಗೆ, ಮಕ್ಕಳ ಆರೈಕೆ, ಸೆಕ್ಯೂರಿಟಿ ಚಿಂತೆಗೆ ಇಲ್ಲಿದೆ ಉತ್ತರ]

ಅವರು ಒಮ್ಮೆ ಯಾರಿಗೂ ತಿಳಿಯದಂತೆ ಊರೊಳಗೆ ಮಾಂಸದ ಅಡುಗೆ ಮಾಡಿದ್ದರು. ಆದರೆ ಬೆಳಿಗ್ಗೆ ಅವರ ಮೂರು ಕುದುರೆಗಳು ಸಾವನ್ನಪ್ಪಿದ್ದವು ಎಂದು ಗ್ರಾಮದ ಹಿರಿಯರು ಹೇಳುತ್ತಾರೆ. ಗ್ರಾಮದಲ್ಲಿ ಬಸವೇಶ್ವರ ದೇವಾಲಯವಿದ್ದು ಇಲ್ಲಿರುವ ನಂದಿಗೆ ದಿನನಿತ್ಯ ಪೂಜೆ ನಡೆಯುತ್ತದೆ. ಗ್ರಾಮದಲ್ಲಿ ಬಂಡಿ ಹಬ್ಬವೂ ನಡೆಯುತ್ತದೆ. ಪಕ್ಕದ ಗ್ರಾಮ ಮೇಲೂರಿನಿಂದ ಶ್ರೀಶಂಭುಲಿಂಗೇಶ್ವರ ದೇವರನ್ನು ತಂದು ಊರಿನ ಮಧ್ಯಭಾಗದಲ್ಲಿರುವ ಕುರ್ಜಿನಲ್ಲಿ ಪ್ರತಿಷ್ಠಾಪಿಸಿ ಪೂಜೆಗೈಯ್ಯಲಾಗುತ್ತದೆ. ಇವರಿಗೆ ವ್ಯವಸಾಯವೇ ಬದುಕು.

ಗ್ರಾಮದಲ್ಲಿ ನೀರು ಬಳಕೆದಾರರ ಸಹಕಾರ ಸಂಘ ಹಾಗೂ ಮಹಿಳಾ ಸ್ವ-ಸಹಾಯ ಸಂಘ ಸೇರಿ ಐದು ಸಂಘಗಳಿವೆ. ಗ್ರಾಮದಲ್ಲಿ ಮದ್ಯಪಾನ ನಿಷೇಧಿಸಲಾಗಿದೆ. ಹೀಗಾಗಿ, ಜಗಳ, ಹಿಂಸೆ ಇಲ್ಲದಾಗಿದೆ. ಒಟ್ಟಾರೆ ಸಂಕನಹಳ್ಳಿ ಇತರೆ ಗ್ರಾಮಗಳಿಗೆ ಮಾದರಿಯಾಗಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+