ಲಾಕ್ ಡೌನ್ ಟೈಮಲ್ಲಿ ಸಿಗೋ ಮದ್ಯವೆಲ್ಲಾ ವಿಷಪೂರಿತವಂತೆ...

ಮೈಸೂರು, ಮಾರ್ಚ್ 31: "ಲಾಕ್ ಡೌನ್ ವೇಳೆ ಹೊರಗೆ ಸಿಗುವ ಯಾವುದೇ ಮದ್ಯವಿದ್ದರೂ ಅದನ್ನು ವಿಷಪೂರಿತ ಮದ್ಯ ಎಂದೇ ಪರಿಗಣಿಸಲಾಗುವುದು. ಈ ವೇಳೆ ಯಾವುದೇ ಮದ್ಯದಂಗಡಿ ಬಾಗಿಲು ತೆರೆಯುವುದಕ್ಕೆ ಅನುಮತಿ ನೀಡಿಲ್ಲ" ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತ ಕೆ.ಎಸ್.ಮುರಳಿ ಎಚ್ಚರಿಕೆ ನೀಡಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಫೇಸ್ ಬುಕ್ ಪೇಜ್ ನಲ್ಲಿ ನೇರ ಸಂದೇಶ ನೀಡಿದ ಅವರು, ಮಾರ್ಚ್ 23ರಿಂದ ಏಪ್ರಿಲ್ 14ರವರೆಗೆ ಜಿಲ್ಲೆಯಾದ್ಯಂತ ಎಲ್ಲ ತರಹದ ಸನ್ನದು, ಎಲ್ಲ ತರಹದ ಅಬಕಾರಿ ಅಂಗಡಿಗಳನ್ನು ಮುಚ್ಚಲಾಗಿದೆ. ಮದ್ಯ, ಸೇಂದಿ ಮದ್ಯಕ್ಕೆ ಸಂಬಂಧಿಸಿದ ಇನ್ಯಾವುದೇ ವಹಿವಾಟನ್ನು ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಜಾರಿ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಈ ಸಮಯದಲ್ಲಿ ಯಾರಾದರೂ ಬಿಳಿಯ ಕ್ಯಾನ್ ಅಥವಾ ಕಲರ್ ಲೆಸ್ ದ್ರವ್ಯ ಅಥವಾ ಇನ್ನಾವುದೇ ದ್ರವ್ಯ ಸಾಗಿಸುವಾಗ ಘಾಟಿನ ವಾಸನೆ ಇದ್ದರೆ ಅದು ಖಂಡಿತ ಆಲ್ಕೋಹಾಲ್ ಗೆ ಸಂಬಂಧಿಸಿದ್ದಾಗಿರುತ್ತದೆ. ಇದರ ಬಗ್ಗೆ ಮಾಹಿತಿ ನೀಡಿ. ಸಾಕಷ್ಟು ಬಾರಿ ಆಲ್ಕೋಹಾಲ್ ಇದ್ದದ್ದು ಮೆಥೆನಾಲ್ ಆಗಿಬಿಡುತ್ತದೆ. ಆಗ ಅದು ವಿಷಪೂರಿತವಾಗುತ್ತದೆ. ಮದ್ಯ ವ್ಯಸನಿಗಳಾಗಿದ್ದರೆ ಮದ್ಯ ಸಿಕ್ತು ಅಂತ ಕುಡಿಯಲು ಹೋಗಬೇಡಿ.

Alcohol Which Get In This Lock Down Time Considered As Poison Said KS Murali

ಈ ಸಮಯದಲ್ಲಿ ಮದ್ಯ ಅಂತ ಸೇವಿಸಲು ಹೋದರೆ ಪ್ರಾಣಕ್ಕೆ ಸಂಚಕಾರ ಬರುತ್ತದೆ. ದಯವಿಟ್ಟು ಇಂತಹ ಸಮಯದಲ್ಲಿ ಎಕ್ಸೈಸ್ ಕಂಟ್ರೋಲ್ ರೂಂ 0821-2541863 ಗೆ ತಪ್ಪದೇ ಫೋನ್ ಮಾಡಿ ತಿಳಿಸಿ ಎಂದು ಮನವಿ ಮಾಡಿದ್ದಾರೆ.

ಈ ಕುರಿತು ಪತ್ತೆಗೆ 13 ತಂಡಗಳು ದಿನ, ರಾತ್ರಿ ಕರ್ತವ್ಯ ನಿರ್ವಹಿಸುತ್ತಿದೆ. ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ಧಾವಿಸಿ ಅದನ್ನು ಸೀಜ್ ಮಾಡುತ್ತಾರೆ. ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದುವರೆಗೆ 48 ಲೀಟರ್ ಸೇಂದಿಯನ್ನು ವಶಕ್ಕೆ ಪಡೆಯಲಾಗಿದೆ. ಈ ವೇಳೆ ಜನಸಂದಣಿ ಆಗಬಾರದು. ಕಳ್ಳಬಟ್ಟಿ, ಮದ್ಯ, ಯಾವುದೇ ರೀತಿಯ ಮದ್ಯವನ್ನು ಈಗ ನಕಲಿ, ವಿಷಪೂರಿತ ಅಂತಲೇ ಪರಿಗಣಿಸಲಾಗುವುದು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+