ಆಟೋ ಕ್ರಾಸ್ ರೇಸ್ ನಲ್ಲಿ ಧೂಳೆಬ್ಬಿಸಲು ರೆಡಿಯಾಗುತ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್

ಮೈಸೂರು, ಸೆಪ್ಟೆಂಬರ್. 21 : ಅಕ್ಟೋಬರ್ 10 ರಿಂದ 19ರವರೆಗೆ ವೈಭವೋಪೇತವಾಗಿ ನಡೆಯಲಿರುವ ಮೈಸೂರು ದಸರಾದಲ್ಲಿ ಈ ಬಾರಿ ಹಲವು ಅಚ್ಚರಿಗಳು ಕಾದಿವೆ. ಪ್ರತಿ ವರುಷ ಕೇವಲ ಯುವ ದಸರಾದಲ್ಲಿ ಭಾಗಿಯಾಗಿ ಯುವಕರನ್ನು ಮೋಡಿ ಮಾಡುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಬಾರಿ ಆಟೋ ಕ್ರಾಸ್ ರೇಸ್ ಗೆ ಮೆರಗು ನೀಡಲಿದ್ದಾರೆ.

ಅಕ್ಟೋಬರ್ 7 ರಂದು ಆಟೋ ಟ್ರ್ಯಾಕ್ ರೇಸ್ ನಡೆಯಲಿದ್ದು, ಅಂದು ರೇಸ್ ನಲ್ಲಿ ಧೂಳೆಬ್ಬಿಸಲು ದರ್ಶನ್ ಈಗಾಗಲೇ ಪೂರ್ವ ತಯಾರಿ ನಡೆಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಮೈಸೂರಿನ ಲಲಿತ ಮಹಲ್ ಬಳಿ ದರ್ಶನ್ ಆಟೋ ಕ್ರಾಸ್ ರೇಸ್ ನಡೆಸಿದ್ದ ಫೋಟೋಗಳು ವೈರಲ್ ಆಗಿದ್ದವು. ಆದರೆ ಏಕೆಂದು ಯಾರಿಗೂ ತಿಳಿದಿರಲಿಲ್ಲ.

Actor Darshan will be participated at the Auto Cross race

ಆದರೆ ಈ ಕುರಿತಾದ ಮಾಹಿತಿ ಸದ್ಯ ರಿವೀಲ್ ಆಗಿದೆ. ದಸರೆ ಹಿನ್ನೆಲೆಯಲ್ಲಿ ರೇಸ್ ಗಾಗಿ ಲಲಿತ ಮಹಲ್ ಹೆಲಿಪ್ಯಾಡ್ ನಲ್ಲಿ ಗ್ರಾವೆಲ್ ಫಸ್ಟ್ ಟ್ರ್ಯಾಕ್ ಅಳವಡಿಸಲು ನಿರ್ಧರಿಸಲಾಗಿದ್ದು, ದೇಶದ ಎಲ್ಲಾ ಭಾಗಗಳಿಂದ ರೇಸರ್ ಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ.

ಇನ್ನು ಕನ್ನಡ ಚಿತ್ರರಂಗದ ನಟ ದರ್ಶನ್ ಈ ರೇಸ್ ನಲ್ಲಿ ಪಾಲ್ಗೊಳ್ಳುತ್ತಿರುವುದು ಜನಾಕರ್ಷಣೆಗೆ ಸಾಕ್ಷಿಯಾಗಲಿದೆ. ನೆಚ್ಚಿನ ನಟನ ಟ್ರ್ಯಾಕ್ ರೇಸ್ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಆಟೋ ಕಾರ್ ರೇಸ್ ನಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ರೇಸ್ ಇರಲಿದೆ.

Actor Darshan will be participated at the Auto Cross race

ಭಾರತಿಯ ಕಾರುಗಳು ಹಾಗೂ ವಿದೇಶಿ ನಿರ್ಮಿತ ಕಾರುಗಳಿಗೆ ಪ್ರತ್ಯೇಕ ರೇಸ್ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+