ಅಕ್ರಮ ಸಂಬಂಧ: ಕಳ್ಳ ಸ್ವಾಮೀಜಿಗೆ ಯದ್ವಾತದ್ವಾ ಗೂಸಾ ಕೊಟ್ಟ ಪತ್ನಿ

ಮೈಸೂರು, ಅಕ್ಟೋಬರ್. 29: ಪರಸ್ತ್ರೀಯೊಂದಿಗೆ ಅಕ್ರಮ ಸಂಬಂಧವಿರಿಸಿಕೊಂಡಿದ್ದ ಕಳ್ಳ ಸ್ವಾಮೀಜಿ (ಗುಡ್ಡಪ್ಪ) ತನ್ನ ಪತ್ನಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು, ಗೂಸಾ ತಿಂದ ಘಟನೆ ಮೈಸೂರಿನ ನಾಗನಗಳ್ಳಿ ಬಳಿ ನಡೆದಿದೆ.

ನಾಗನಗಳ್ಳಿ ಗ್ರಾಮದ ಕಬ್ಬಾಳಮ್ಮ ದೇವಾಲಯದ ಸ್ವಾಮೀಜಿ ದೇವರಾಜು ಎಂಬಾತನೇ ಗೂಸಾ ತಿಂದ ವ್ಯಕ್ತಿ. ಗುಡ್ಡಪ್ಪನ ಅಕ್ರಮ ಸಂಬಂಧ ಕಂಡುಹಿಡಿಯಲು ಆತನ ಪತ್ನಿಯಿಂದಲೇ ಕಾರ್ಯಾಚರಣೆ ನಡೆದಿದ್ದು, ಗುಡ್ಡಪ್ಪನ ಪತ್ನಿಯ ಕಾರ್ಯಾಚರಣೆಗೆ ಗ್ರಾಮಸ್ಥರು ನೆರವಾಗಿದ್ದರು. ನಂತರ ಗ್ರಾಮಸ್ಥರಿಂದಲೂ ಸ್ವಾಮೀಜಿಗೆ ಹಿಗ್ಗಾ ಮುಗ್ಗಾ ಗೂಸಾ ಬಿದ್ದಿದೆ.

ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಗುಡ್ಡಪ್ಪನ ಕಾಮಪುರಾಣ ಮುಂದುವರೆದಿತ್ತು. ಹೀಗೆ ಗುಡ್ಡಪ್ಪ ದೇವರಾಜು ಮಹಿಳೆಯೊಂದಿಗೆ ಲವ್ವಿಡವ್ವಿ ನಡೆಸುತ್ತಿದ್ದ ವೇಳೆ ಅಲ್ಲಿಗೆ ಧಾವಿಸಿದ ಗುಡ್ಡಪ್ಪನ ಪತ್ನಿ ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾಳೆ. ಪತ್ನಿಯ ಕಾರ್ಯಾಚರಣೆಗೆ ಗ್ರಾಮಸ್ಥರೂ ಸಾಥ್ ನೀಡಿದ್ದಾರೆ.

A Swamiji had an illegal relationship with a women in Mysuru

ಮನೆಯಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿ ಸಿಕ್ಕಿಬಿದ್ದ ಗುಡ್ಡಪ್ಪ ದೇವರಾಜುಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+