ಸಾಲದಲ್ಲೇ ಮಾಸಿಹೋಯ್ತು ಮೈಸೂರಿನ ಪೈಂಟರ್ ಬದುಕು

ಮೈಸೂರು,ಫೆಬ್ರವರಿ,19: ಅತಿ ಸಾಲದ ಹೊರೆಗೆ ಹೆದರಿದ ಪೈಂಟಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಸಾಲ ತೀರಿಸಲಾಗದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರಿನ ಮಂಜುನಾಥ ಬಡಾವಣೆಯಲ್ಲಿ ನಡೆದಿದೆ.

ಹುಣಸೂರು ಮಂಜುನಾಥ ಬಡಾವಣೆ ನಿವಾಸಿ ಸಿದ್ದೊಜೀರಾವ್ ಅವರ ಪುತ್ರ ಸುಕುಮಾರ್ (40) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ವೃತಿಯಲ್ಲಿ ಪೈಂಟಿಂಗ್ ಗುತ್ತಿಗೆದಾರನಾಗಿದ್ದ ಸುಕುಮಾರ್ ಇದರೊಂದಿಗೆ ಸಣ್ಣಪುಟ್ಟ ರಿಯಲ್‍ಎಸ್ಟೇಟ್ ವ್ಯವಹಾರ ಮಾಡುತ್ತಿದ್ದು, ಈತ ಸಾಲ ಮಾಡಿಕೊಂಡಿದ್ದನು.[ಮೈಸೂರಿನ 'ಜ್ಯೋತಿ'ಗೆ ಕರಕುಶಲ ಕಲೆಯೇ ಬಾಳಿನ ಬೆಳಕು]

A painter commits suicide in Mysuru

ಸುಕುಮಾರ ಪತ್ನಿ ಇಬ್ಬರು ಮಕ್ಕಳ ಸಂಸಾರ ಹೊಂದಿದ್ದ ಸುಕುಮಾರ ಸಾಕಷ್ಟು ಸಾಲ ಮಾಡಿದ್ದನು. ಈತ ಮಾಡಿದ ಸಾಲ ತೀರಿಸಲಾಗದೆ ತಲೆತಪ್ಪಿಸಿಕೊಂಡು ಓಡಾಡುತ್ತಿದ್ದನು. ಈ ನಡುವೆ ಸಾಲಗಾರರ ಕಾಟ ತಡೆಯಲಾರದೆ ಹುಣಸೂರು ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ಮುಂಭಾಗದಲ್ಲಿರುವ ಆಶೋಕ ರೆಸಿಡೆನ್ಸಿಯಲ್ಲಿ ಕೊಠಡಿ ಪಡೆದುಕೊಂಡಿದ್ದು, ಅದರಲ್ಲಿ ವಾಸ್ತವ್ಯ ಹೂಡಿದ್ದನು.[ಅಪ್ಪಾ ನಂಗೆ ನೀನು ಬೇಕಪ್ಪಾ ಅನಲು ತಂದೆಯೇ ಇಲ್ಲ]

ಅಶೋಕ ರೆಸಿಡೆನ್ಸಿಯಲ್ಲಿ ಇದ್ದ ಈತ ಒಂದು ದಿನವಾದರೂ ಬಾಗಿಲು ತೆರೆಯದ ಕಾರಣ ಅನುಮಾನಗೊಂಡ ಲಾಡ್ಜ್ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ಒಡೆದು ನೋಡಿದಾಗ ಕೊಠಡಿಯ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದು ತಿಳಿದು ಬಂದಿದೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+