ಪೆದ್ದು ಯುವತಿಯ ಗರ್ಭಿಣಿ ಮಾಡಿದ ಮೈಸೂರು ಯುವಕನ ಬಂಧನ
ಮೈಸೂರು, ಫೆಬ್ರವರಿ,24: ಯುವತಿಯನ್ನು ಪುಸಲಾಯಿಸಿ ಪ್ರೀತಿಸುವ ನಾಟಕವಾಡಿದ ಕಾಮಿ ಪ್ರೇಮಿಯೊಬ್ಬ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ಗರ್ಭಿಣಿ ಮಾಡಿ ನಾಪತ್ತೆಯಾಗಿದ್ದ ಯುವಕನನ್ನು ಬಂಧಿಸುವಲ್ಲಿ ಉದಯಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಉದಯಗಿರಿ ನಿವಾಸಿ ಶಿವಕುಮಾರ್ (35) ಬಂಧಿತ ಆರೋಪಿ. ಈತ ಹುಡುಗಿಯ ಪೆದ್ದುತನವನ್ನು ತನ್ನ ಅಸ್ತ್ರವನ್ನಾಗಿ ಬಳಸಿಕೊಂಡು ಆಕೆಯೊಂದಿಗೆ ದೈಹಿಕ ಸಂಪರ್ಕ ಸಾಧಿಸಿ, ಮೋಸಮಾಡಿ ಪರಾರಿಯಾಗಿದ್ದನು.[ಮಾಯಾವಿ ಮಾತಿಗೆ ಮರುಳಾಗಿ ಹಣ ಕಳೆದುಕೊಂಡ ಗಂಡಸರೆಷ್ಟು?]

ಏನಿದು ಘಟನೆ?
ಶಿವಕುಮಾರ್ ಉದಯಗಿರಿಯ ಯುವತಿಯೊಬ್ಬಳ ಮೇಲೆ ಕಣ್ಣು ಹಾಕಿದ್ದನು. ಆಕೆ ಸ್ವಲ್ಪ ಮಟ್ಟಿಗೆ ಪೆದ್ದಿಯಾಗಿದ್ದು, ಅದನ್ನೇ ಅಸ್ತ್ರ ಮಾಡಿಕೊಂಡ ಶಿವಕುಮಾರ್ ಆಕೆಯ ಪೂರ್ವಾಪರ ತಿಳಿದುಕೊಂಡನು. ಬಳಿಕ ಆಕೆಗೆ ಬಲೆ ಬೀಸಿ ಪ್ರೀತಿಸುವ ನಾಟಕವಾಡಿದ ಶಿವಕುಮಾರ್ ಪ್ರೇಮವನ್ನು ನೈಜ ಎಂದು ಭಾವಿಸಿದ ಆಕೆ ಆತನೊಂದಿಗೆ ಸಲುಗೆಯಿಂದಲೇ ಬೆರೆತಿದ್ದಾಳೆ.[ಗರ್ಭಿಣಿ ಮೇಲೆ ಅಮಾನವೀಯ ಹಲ್ಲೆ]
ಯುವತಿಯ ಸಲುಗೆಯನ್ನು ದುರುಪಯೋಗಪಡಿಸಿಕೊಂಡ ಶಿವಕುಮಾರ್ ದೈಹಿಕ ಸಂಪರ್ಕ ಸಾಧಿಸಿದ್ದಾನೆ. ನಂತರ ಆಕೆ ಗರ್ಭಿಣಿಯಾಗಿರುವುದು ತಿಳಿಯುತ್ತಿದ್ದಂತೆಯೇ ಅಲ್ಲಿಂದ ಪರಾರಿಯಾಗಿ ಬೇರೆ ಯುವತಿಯೊಂದಿಗೆ ಮದುವೆಯಾಗಲು ನಿಶ್ಚಯಿಸಿದ್ದಾನೆ.[ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ರೇಪ್, ವಿಡಿಯೋ ಮಾಡಿದ ದುರುಳರು]
ಯುವತಿ ಗರ್ಭಿಣಿಯಾಗಿರುವ ವಿಷಯ ತಿಳಿದ ಮನೆಯವರು ಆಕೆಯ ಬಳಿ ವಿಚಾರಿಸಿದಾಗ ಶಿವಕುಮಾರ್ ಪ್ರೀತಿಸುವ ನಾಟಕವಾಡಿ ದೈಹಿಕ ಸಂಬಂಧ ಬೆಳೆಸಿದ ವಿಚಾರವನ್ನು ಹೇಳಿದ್ದಾಳೆ. ಮನೆಯವರು ಉದಯಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.[ಮಹಿಳಾ ದೌರ್ಜನ್ಯ ವಿರುದ್ದ ದನಿಯಾದ ವಾಮಾ ಬಲ್ದೋಟ]
ವಿಷಯ ತಿಳಿದ ಶಿವಕುಮಾರ್ ನಾಪತ್ತೆಯಾಗಿದ್ದನು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.












Click it and Unblock the Notifications