ಮಂಡ್ಯ ರೈಲ್ವೆ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ!
ಮಂಡ್ಯ ರೈಲ್ವೆ ನಿಲ್ದಾಣದ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಕರೆ ಬಂದ ಪರಿಣಾಮ ಕೆಲಕಾಲ ಆತಂಕ ಸೃಷ್ಟಿಯಾಯಿತು.
ಮಂಡ್ಯ, ಏಪ್ರಿಲ್ 25: ಮಂಡ್ಯ ರೈಲ್ವೆ ನಿಲ್ದಾಣದ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಕರೆ ಬಂದ ಪರಿಣಾಮ ಕೆಲಕಾಲ ಆತಂಕ ಸೃಷ್ಟಿಯಾಯಿತು.
ಬೆದರಿಕೆ ಕರೆ ಬರುತ್ತಿದ್ದಂತೆಯೇ ಪೊಲೀಸರಿಗೆ ಕರೆಮಾಡಿ, ಸ್ಥಳಕ್ಕೆ ಶ್ವಾನ ಮತ್ತು ಬಾಂಬ್ ನಿಷ್ಕ್ರಿಯ ದಳ ಕರೆಯಿಸಿ ತೀವ್ರ ತಪಾಸಣೆ ನಡೆಸಲಾಯಿತು. ಪ್ರಯಾಣಿಕರ ಬ್ಯಾಗ್ ಸಹ ತಪಾಸಣೆ ನಡೆಸಿದ್ದರಿಂದ ಕೆಲವರಿಗೆ ಇರಿಸುಮುರಿಸಾಯಿತು.

ಹುಸಿ ಬಾಂಬ್ ಬೆದರಿಕೆಯಿಂದಾಗಿ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರು ಆತಂಕದಿಂದ ಪರದಾಡುವಂತಾಯಿತು.












Click it and Unblock the Notifications