ಪೆಟ್ ಶೋ ಸ್ಪರ್ಧೆ: ಮುದ್ದು ಶ್ವಾನಗಳನ್ನು ನೋಡಿ ಫಿದಾ ಆದ ಮೈಸೂರಿಗರು

ಮೈಸೂರು. ಅಕ್ಟೋಬರ್ 14 : ವಿಶ್ವವಿಖ್ಯಾತ ನಾಡಹಬ್ಬ ದಸರೆಯ ಅಂಗವಾಗಿ ಇಂದು ಭಾನುವಾರ ಆಯೋಜಿಸಿದ್ದ ಶ್ವಾನ ಪ್ರದರ್ಶನದಲ್ಲಿ ವಿವಿಧ ಬಗೆಯ ಮುದ್ದು - ಮುದ್ದು ಶ್ವಾನಗಳು ನೋಡುಗರ ಗಮನ ಸೆಳೆದವು.

ಮೈಸೂರು ದಸರಾ - ವಿಶೇಷ ಪುರವಣಿ

ನಗರದ ಮೈಸೂರು ವಿವಿಯ ಮಹಾರಾಜ ಮೈದಾನದಲ್ಲಿ ದಸರಾ ಪ್ರಯುಕ್ತ ಆಯೋಜನೆ ಮಾಡಿದ್ದ ಪೆಟ್ ಶೋನಲ್ಲಿ ವಿವಿಧ 27 ತಳಿಗಳ 300 ಕ್ಕೂ ಹೆಚ್ಚು ಶ್ವಾನಗಳು ಭಾಗವಹಿಸಿದ್ದವು.

A dog show was held in Mysore

ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ ಚಾಲನೆ ನೀಡಿದರು. ಈ ಸಂದರ್ಭದಲ್ಲಿ 500ಕ್ಕೂ ಹೆಚ್ಚು ಸಾಕುಪ್ರಾಣಿಗಳನ್ನು ಪ್ರದರ್ಶಿಸಲಾಯಿತು. ರಾಜ್ಯದ ವಿವಿಧ ಮೂಲೆಗಳಿಂದ ಬಂದಿರುವ ಶ್ವಾನಗಳನ್ನು ನೋಡಿ ಪ್ರಾಣಿಪ್ರಿಯರು ಕಣ್ತುಂಬಿಕೊಂಡರು.

A dog show was held in Mysore

ರಾಟ್ ವಿಲ್ಲರ್, ಜರ್ಮನ್ ಶಫರ್ಡ್ , ಲ್ಯಾರ್ಬೆಡಾರ್, ಬೀಗಲ್, ಶೈಬೀರಿಯಾ ನಸ್ಕಿ, ಮುಧೂಳ್ ಹೌಂಡ್, ರಾಜ್ಯಪಾಳ್ಯಂ, ಗ್ರೇಡ್ ಡೆನ್ ನಾಯಿಗಳು ಗಮನಸೆಳೆದವು. ಸುಮಾರು 1 ಸಾವಿರದಿಂದ 1 ಲಕ್ಷ ಬೆಲೆ ಬಾಳುವ ಶ್ವಾನಗಳು ಈ ವೇಳೆ ಪ್ರದರ್ಶನಗೊಂಡವು. ಶ್ವಾನ ಹಾಗೂ ಶ್ವಾನ ಪಾಲಕರು ದಸರಾದಲ್ಲಿ ಪಾಲ್ಗೊಂಡು ಸಂತಸ ವ್ಯಕ್ತಪಡಿಸಿದರು.

A dog show was held in Mysore

ನಾಯಿಗಳ ಕೂದಲನ್ನು ಬಾಚಣಿಕೆಯಿಂದ ಬಾಚುವುದು, ಕರವಸ್ತ್ರದಿಂದ ಒರೆಸುವುದು ಇವೆಲ್ಲಾ ಪೆಟ್ ಶೋನಲ್ಲಿ ಕಂಡು ಬಂದ ಸಾಮಾನ್ಯ ದೃಶ್ಯವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+