ಮೈಸೂರಿನಲ್ಲಿ ಡೆಂಗ್ಯೂಗೆ 12 ವರ್ಷದ ಬಾಲಕಿ ಬಲಿ
ಮೈಸೂರು, ಜುಲೈ 25: ಮೈಸೂರಿನಲ್ಲಿ ಡೆಂಗ್ಯೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ಇವತ್ತೂ ಕೂಡಾ ಓರ್ವ ಬಾಲಕಿ ಡೆಂಗ್ಯೂಗೆ ಬಲಿಯಾಗಿದ್ದಾಳೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಕಂಪಲಾಪುರ ಗ್ರಾಮದ ನಟೇಶ್ ನಾಯಕ್ ಪುತ್ರಿ ಕೆ.ಎನ್.ಶಾನಿಕಾ(12) ಸಾವಿಗೀಡಾದ ಬಾಲಕೆ. ಶ್ರೀ ನಾಗ ವಿದ್ಯಾ ಸಂಸ್ಥೆಯಲ್ಲಿ 6 ನೇ ತರಗತಿ ಓದುತ್ತಿದ್ದಳು. ಕಳೆದ ಮೂರು ದಿನಗಳಿಂದ ತೀವ್ರ ಜ್ವರದಿಂದ ಬಳಲುತಿದ್ದು, ಬಾಲಕಿಯನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಾಲಕಿ ಸಾವನ್ನಪ್ಪಿದ್ದಾಳೆ.













Click it and Unblock the Notifications