ಮಾರ್ಚ್ 12ಕ್ಕೆ ಮೈಸೂರು ವಿವಿಯ ಅದ್ಧೂರಿ 98ನೇ ಘಟಿಕೋತ್ಸವ
ಮೈಸೂರು, ಮಾರ್ಚ್ 11 : ಮೈಸೂರು ವಿಶ್ವವಿದ್ಯಾಲಯದ 98ನೇ ಘಟಿಕೋತ್ಸವ ಮಾ. 12ರ ನಾಳೆ ಬೆಳಿಗ್ಗೆ 10.30ಕ್ಕೆ ಕ್ರಾಫರ್ಡ್ ಭವನದಲ್ಲಿ ನಡೆಯಲಿದ್ದು, 27,502 ಅಭ್ಯರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಗುತ್ತಿದೆ.
ಪಿಎಚ್.ಡಿ 575, ಸ್ನಾತಕೋತ್ತರ ಪದವಿ 7,576, ಸ್ನಾತಕ ಪದವಿ 19,351 ಅಭ್ಯರ್ಥಿಗಳು ಸೇರಿ ಒಟ್ಟು 27,502 ಮಂದಿ ಪದವಿ ಪಡೆಯಲಿದ್ದಾರೆ. ಇವರಲ್ಲಿ 1,71,522(ಶೇ. 62) ಮಹಿಳೆಯರು, 10,380(ಶೇ.38) ಪುರುಷರು ನಾಳೆ ಪದವಿ ಪಡೆಲಿದ್ದಾರೆ.
ಭೂ ವಿವಾದ: ಸುಪ್ರೀಂ ಮೆಟ್ಟಿಲೇರಿದ ಮೈಸೂರು ಜಿಲ್ಲಾಡಳಿತ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೊ.ಸಿ.ಬಸವರಾಜು ಅವರು, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ಲೋಕಾಯುಕ್ತ ನ್ಯಾ.ಎನ್.ಸಂತೋಷ್ ಹೆಗ್ಡೆ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಬಿಡುವಿಲ್ಲದ ಕಾರಣ ರಾಜ್ಯಪಾಲರು ಘಟಿಕೋತ್ಸವದಲ್ಲಿ ಭಾಗವಹಿಸುತ್ತಿಲ್ಲ ಎಂದರು.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಶೇ.70 ಮಹಿಳೆಯರು
348 ಪದಕಗಳು ಮತ್ತು 168 ನಗದು ಬಹುಮಾನಗಳನ್ನು 207 ಅಭ್ಯರ್ಥಿಗಳು ಪಡೆದುಕೊಂಡಿದ್ದಾರೆ. ಇವರಲ್ಲಿ 145 (ಶೇ. 70) ಮಂದಿ ಮಹಿಳೆಯರಾಗಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ ಶೇ. 57 ಮತ್ತು ಸ್ನಾತಕ ಪದವಿಯಲ್ಲಿ ಶೇ. 65ರಷ್ಟು ಮಹಿಳೆಯರು ಪದವಿ ಪಡೆದಿದ್ದು ಮೇಲುಗೈ ಸಾಧಿಸಿದ್ದಾರೆ ಎಂದು ಪ್ರಭಾರ ಕುಲಪತಿ ಪ್ರೊ.ಸಿ.ಬಸವರಾಜು ತಿಳಿಸಿದ್ದಾರೆ.

ಅನುಮೋದನೆ ಆಗಿಲ್ಲ
98ನೇ ಘಟಿಕೋತ್ಸವದಲ್ಲಿ 3 ಮಂದಿಗೆ ಗೌರವ ಡಾಕ್ಟರೇಟ್ ನೀಡಲು ಪರಿಣಿತರ ಸಮಿತಿ ರಾಜ್ಯಪಾಲರ ಅನುಮೋದನೆಗಾಗಿ ಕಳುಹಿಸಲಾಗಿದೆ. ಅವರಿಂದ ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸಿಂಡಿಕೇಟ್ ಸಭೆಯಲ್ಲಿ 12 ಮಂದಿಗೆ ಗೌರವ ಡಾಕ್ಟರೇಟ್ ನೀಡುವಂತೆ ಶಿಫಾರಸು ಮಾಡಲಾಗಿತ್ತು. ಅವರಲ್ಲಿ ಪರಿಣಿತರ ಸಮಿತಿ ಮೂವರನ್ನು ಅಂತಿಮಗೊಳಿಸಿ ಮಾ. 2ರಂದು ರಾಜ್ಯಪಾಲರ ಅನುಮೋದನೆಗಾಗಿ ಕಳುಹಿಸಲಾಗಿದೆ. 2 ದಿನಗಳ ಮುಂಚೆಯೇ ಗೌರವ ಡಾಕ್ಟರೇಟ್ ನೀಡುವವರ ಪಟ್ಟಿಯನ್ನು ಕಳುಹಿಸಬೇಕು. ಇಲ್ಲಿಯವರೆಗೂ ಅನುಮೋದನೆ ಬಂದಿಲ್ಲ.

ಲೈಂಗಿಕ ಕಿರುಕುಳದ ಬಗ್ಗೆ ತನಿಖೆ
ಹಿಂದಿನ ಪ್ರಭಾರ ಕುಲಪತಿ ಪ್ರೊ.ದಯಾನಂದ ಮಾನೆ ಅವರ ಅವಧಿಯಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ಸರಿಯಾಗಿ ನಡೆದಿಲ್ಲ ಮತ್ತು ಆಗ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ರಾಜ್ಯಪಾಲರದಿಂದ ಆದೇಶ ಬಂದಿದೆ ಎಂದು ಪ್ರೊ.ಸಿ.ಬಸವರಾಜು ತಿಳಿಸಿದರು. ಲೈಂಗಿಕ ದೌರ್ಜನ್ಯದ ಬಗ್ಗೆ ಸಿಂಡಿಕೇಟ್ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರು ಸೂಚಿಸಿದ್ದಾರೆ. ಸಿಂಡಿಕೇಟ್ ಸಭೆಯಲ್ಲಿ ಸಾರ್ವಜನಿಕ ಆಡಳಿತ ವಿಭಾಗದ ಮುಖ್ಯಸ್ಥರ ಹುದ್ದೆಯಿಂದ ಪ್ರೊ.ಮಾನೆ ಅವರನ್ನು ತೆಗೆಯಲು ತೀರ್ಮಾನಿಸಲಾಗಿದೆ. ಆದರೆ, ಇನ್ನೂ ಜಾರಿ ಆಗಿಲ್ಲ ಎಂದರು.

ಯುಜಿಸಿ ನಿಯಮಕ್ಕೆ ವಿರುದ್ಧ
ಮೈಸೂರು ವಿವಿ ಲೆಕ್ಕಪರಿಶೋಧನೆ ಸಮಿತಿ 11 ಗ್ರಂಥಾಲಯ ಸಹಾಯಕರನ್ನು ಸಹ ಗ್ರಂಥಪಾಲಕರಾಗಿ ಬಡ್ತಿ ಕೊಟ್ಟಿರುವುದು ಯುಜಿಸಿ ನಿಯಮಕ್ಕೆ ವಿರುದ್ಧವಾಗಿದೆ. ಸರ್ಕಾರದ ಸೂಚನೆ ಮೇರೆಗೆ ಬಡ್ತಿ ಹಿಂಪಡೆಯಲಾಗಿದ್ದು, ಅವರಿಂದ ಹೆಚ್ಚುವರಿ ವೇತನವನ್ನು ಹಂತ ಹಂತವಾಗಿ ಪಡೆಯಲಿದ್ದೇವೆ. ಆ ಹುದ್ದೆಗಳಿಗೆ ನಿಯಮಾನುಸಾರ ನೇಮಕಾತಿ ಮಾಡಲಾಗುವುದು. 11 ಮಂದಿಯಲ್ಲಿ ಅರ್ಹರಿದ್ದರೆ ಅವರನ್ನು ಸಹ ಗಂಥಪಾಲಕರಾಗಿ ನೇಮಿಸಲಾಗುವುದು ಎಂದು ಪ್ರೊ.ಸಿ.ಬಸವರಾಜು ಹೇಳಿದರು.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications