ಮೈಸೂರಿನಲ್ಲಿ 70ನೇ ಗಣರಾಜ್ಯೋತ್ಸವ ಆಚರಣೆ, ವಿಶೇಷತೆ ಏನು?

ಮೈಸೂರು, ಜನವರಿ 26 : ಗಣ್ಯರ ಮೇಲೆ ನಡೆದ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಕಮಾಂಡೊ ಪಡೆ, ಕೊನೆಗೂ ಉಗ್ರರನ್ನು ಹೊಡೆದುರುಳಿಸಿತು.

ಇಂಥದೊಂದು ರೋಮಾಂಚಕ ದೃಶ್ಯ ನಗರದ ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ ನಡೆಯಿತು. ಆದರೆ, ಅದು ಅಣುಕು ಪ್ರದರ್ಶನ. ಗಣರಾಜ್ಯೋತ್ಸವ ಅಂಗವಾಗಿ ಕಮಾಂಡೊ ಪಡೆಯ ಮುಖ್ಯಸ್ಥ ಅಶೋಕಕುಮಾರ್‌ ನೇತೃತ್ವದಲ್ಲಿ ಅಣಕು ಕಾರ್ಯಾಚರಣೆ ಗಮನ ಸೆಳೆಯಿತು. ಈ ಮೂಲಕ 4 ತಿಂಗಳವರೆಗೆ ಪಡೆದ ತರಬೇತಿಯ ನಂತರ ಮೊದಲ ಬಾರಿಗೆ ಪಡೆಯ ಪೊಲೀಸರು ತಮ್ಮ ಕೌಶಲ ಮೆರೆದರು.

ಮೊದಲಿಗೆ ಆಯುಧ ಕೌಶಲ ಸ್ಪರ್ಧೆ ನಡೆಯಿತು. ಒಂದೇ ಕೈಯಿಂದ ಆಯುಧ ಬಿಚ್ಚಿದ ಪೊಲೀಸ್‌ ಪಡೆ ನಂತರ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಿಚ್ಚಿದ ಆಯುಧಗಳನ್ನು ಜೋಡಿಸಿದರು. ಆಮೇಲೆ ಸುಸಜ್ಜಿತ ವಾಹನದಲ್ಲಿ ಬಂದ ಗಣ್ಯರು ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುವಾಗ ಉಗ್ರರು ದಾಳಿ ನಡೆಸುತ್ತಾರೆ.

70th republic day celebrated in Mysuru

ಇದರೊಂದಿಗೆ ಗಣ್ಯರ ಮೇಲೆ ಬಾಂಬ್‌ ಎಸೆಯಲು ಯತ್ನಿಸುವ ಉಗ್ರರ ಪ್ರಯತ್ನವನ್ನು ಸಮರ್ಥವಾಗಿ ಎದುರಿಸಿದ ಪಡೆ ಗಣ್ಯರನ್ನು ಸುರಕ್ಷಿತವಾಗಿ ಅವರ ವಾಹನ ಹತ್ತಿಸುವ ಮೂಲಕ ಬೀಳ್ಕೊಟ್ಟಿತು. ಆಗ ಪ್ರೇಕ್ಷಕರು ಜೋರಾಗಿ ಚಪ್ಪಾಳೆ ತಟ್ಟಿ, ಶಿಳ್ಳೆ ಹಾಕಿ ಪ್ರೋತ್ಸಾಹಿಸಿದರು.

ಮನೆಯೊಳಗೆ ನುಗ್ಗಿದ ಉಗ್ರರ ಮೇಲೆ ಏಕಾಏಕಿ ದಾಳಿ ನಡೆಸದೆ ಮನೆಯನ್ನು ಮೊದಲು ಸುತ್ತುವರಿಯಿತು ಕಮಾಂಡೊ ಪಡೆ. ಇವರಿಗೆ ನೆರವಾಗಲು ಬಂದಿದ್ದು 'ಮೊಬೈಲ್‌ ಕಮಾಂಡ್ ಸೆಂಟರ್‌' ವಾಹನ. ಇದರಲ್ಲಿ ಡ್ರೋಣ್ ಕ್ಯಾಮೆರಾ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಮತ್ತೊಂದಿಷ್ಟು ಪಡೆ ಬಂದಿಳಿಯಿತು.

ಹಂತ ಹಂತವಾಗಿ ಮನೆಯೊಳಗೆ ನುಗ್ಗಿದ ಪಡೆ ಉಗ್ರರನ್ನು ಸೆದೆಬಡಿಯಿತು. ಹತ್ಯೆಯಾದ ಉಗ್ರರಿಂದ ವಶಪಡಿಸಿಕೊಂಡ ಆಯುಧಗಳನ್ನು ತಮ್ಮ ನಾಯಕರಿಗೆ ಸಿಬ್ಬಂದಿ ಒಪ್ಪಿಸಿತು.

70th republic day celebrated in Mysuru

ಇದೇ ಮೋದಲ ಬಾರಿಗೆ ಭಾರತೀಯ ಚುನಾವಣಾ ಆಯೋಗದಿಂದ ವಿಶೇಷ ಸ್ಥಬ್ದ ಚಿತ್ರ ಪ್ರದರ್ಶನಗೊಂಡಿತ್ತು. ವಿಶೇಷ ಸ್ಥಬ್ದ ಚಿತ್ರದ ಮೂಲಕ ಮತದಾರರಿಗೆ ಮತದಾನದ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ಮುಂದಾಗಿದೆ. ಸ್ತಬ್ಧ ಚಿತ್ರಕ್ಕೂ ಮುನ್ನ ಶಾಲಾ ಮಕ್ಕಳಿಂದ ಮತದಾನ ಜಾಗೃತಿ ಮೂಡಿಸುವ ಬೋರ್ಡ್ ಹಿಡಿದು ಪಥ ಸಂಚಲನದಲ್ಲಿ ಭಾಗಿಯಾಗಿದ್ದರು

ಇದಕ್ಕೂ ಮೊದಲು ಜಿಲ್ಲಾ ಉಸ್ತುವಾರಿ ಸಚಿವ ಜಿ ಟಿ ದೇವೇಗೌಡ ಧ್ವಜಾರೋಹಣ ನೆರವೇರಿಸಿದ ನಂತರ ತೆರೆದ ಜೀಪಿನಲ್ಲಿ ಪರೇಡ್‌ ವೀಕ್ಷಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+