• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟಿ.ನರಸೀಪುರ ಠಾಣೆಯಲ್ಲಿ ರೈಫಲ್‌ ನ 50 ಬುಲೆಟ್‌ಗಳೇ ನಾಪತ್ತೆ

By ಮೈಸೂರು ಪ್ರತಿನಿಧಿ
|

ಮೈಸೂರು, ಜೂನ್ 02: ಇಲ್ಲಿಗೆ ಸಮೀಪದ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ರೈಫಲ್‌ ಗಳಿಗೆ ಬಳಕೆಯಾಗುವ 50 ಬುಲೆಟ್‌ ಗಳು ಕಡಿಮೆ ಇರುವುದು ಕಂಡು ಬಂದಿವೆ. ಅಷ್ಟು ಬುಲೆಟ್‌ಗಳು ಹೇಗೆ ಕಾಣೆಯಾದವು ಎಂಬುದರ ಬಗ್ಗೆ ಈಗ ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ.

ಪೊಲೀಸ್ ಠಾಣೆಗಳಲ್ಲಿರುವ ಶಸ್ತ್ರಾಸ್ತ್ರಗಳನ್ನು ಪರಿಶೀಲಿಸುವ ಜವಾಬ್ದಾರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಮದ್ದುಗುಂಡು ಪರಿಶೀಲನಾ ತಂಡದ್ದಾಗಿರುತ್ತದೆ. ಇವರು ನಿಗದಿತವಾಗಿ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪರಿಶೀಲಿಸುತ್ತಾರೆ. ವಾಡಿಕೆಯಂತೆ ಶನಿವಾರ ಟಿ.ನರಸೀಪುರ ಠಾಣೆಯ ಶಸ್ತ್ರಾಸ್ತ್ರಗಳನ್ನು ಪರಿಶೀಲಿಸಿದಾಗ 50 ಬುಲೆಟ್‌ಗಳು ಕಡಿಮೆ ಇರುವುದು ಕಂಡುಬಂದಿದೆ. ಆದರೆ, ಹೇಗೆ ಕಾಣೆಯಾದವು ಎಂಬ ಕುರಿತು ಠಾಣಾಧಿಕಾರಿ ಸೇರಿದಂತೆ ಯಾವ ಸಿಬ್ಬಂದಿಗೂ ಮಾಹಿತಿಯಿಲ್ಲ. ಈ ಸಂಬಂಧ ತನಿಖೆ ಆರಂಭವಾಗಿದೆ.

50 Rifle Bullets Missing From T Narasipura Police Station In Mysuru

ಕೇಸ್ ಮುಚ್ಚಿ ಕಳ್ಳನ ಕೈಲೇ ಜೇಬು ತುಂಬಿಸಿಕೊಂಡ ಸಿರುಗುಪ್ಪದ ಪೊಲೀಸರು

ಹೇಗೆ ಈ ಬುಲೆಟ್ ಗಳು ಕಡಿಮೆ ಆಗಿವೆ ಎಂದು ತನಿಖೆಯಿಂದ ತಿಳಿದು ಬರಬೇಕಿದ್ದು, ಡಿವೈಎಸ್ ‌ಪಿ ತನಿಖೆ ನಡೆಸುತ್ತಿದ್ದಾರೆ ಎಂದು ಮೈಸೂರು ಎಸ್‌ಪಿ ಸಿಬಿ ರಿಶ್ಯಂತ್ ತಿಳಿಸಿದ್ದಾರೆ.

English summary
50 bullets of rifles missing from t narasipura police station. Investigagion started by dysp
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more