• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಪ್ರಾಪ್ತ ಯುವಕನ ಜಾಲಿ ರೈಡ್ ಗೆ ಯುವತಿ ಬಲಿ

|

ಮೈಸೂರು, ಆಗಸ್ಟ್ 14 : ಆ.13ರ ನಿನ್ನೆ ಮೈಸೂರಿನಲ್ಲಿ ಅಪ್ರಾಪ್ತ ಯುವಕನೋರ್ವ ಮಹೀಂದ್ರ ಸ್ಕಾರ್ಪಿಯೊ ಗಾಡಿಯಲ್ಲಿ ಸರಣಿ ಅಪಘಾತ ನಡೆಸಿ ವಿದ್ಯಾರ್ಥಿನಿಯ ಸಾವಿಗೆ ಕಾರಣವಾಗಿದ್ದಾನೆ. ಆ ಹುಡುಗನ ಜಾಲಿರೈಡ್ ವಿದ್ಯಾರ್ಥಿನಿಯ ಜೀವವನ್ನೇ ಕಸಿದುಕೊಂಡಿದೆ.

ಮೈಸೂರಿನಲ್ಲಿ ಅಪ್ರಾಪ್ತ ಯುವಕರಿಂದ ಹಿಟ್ ಅಂಡ್ ರನ್ ಘಟನೆ

ಈ ವಾಹನಕ್ಕೆ ಸಿಲುಕಿದ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿ ಅಶ್ವಿನಿ (18) ಮೃತಪಟ್ಟಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿನಿಗೆ ಗಾಯಗಳಾ

ಗಿವೆ. ವಾಹನವನ್ನು ಅತಿವೇಗವಾಗಿ ಚಾಲನೆ ಮಾಡಿದ 17 ವರ್ಷದ ಹುಡುಗನನ್ನು ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಂಜುನಾಥ್ ಎಂಬಾತ ಮಹೀಂದ್ರ ಸ್ಕಾರ್ಪಿಯೊ ವಾಹನವನ್ನು ಬಾಡಿಗೆಗೆ ಪಡೆದುಕೊಂಡಿದ್ದಾನೆ. ಈತನ ಮನೆಯ ಪಕ್ಕ ವಾಸಿಸುತ್ತಿದ್ದವ ಈ ವಾಹನವನ್ನು ಚಾಲನೆ ಮಾಡಿಕೊಂಡು ಬರುವುದಾಗಿ ಹೇಳಿ ಜಾಲಿರೈಡ್ ಹೊರಟಿದ್ದಾನೆ. ರಾಮಸ್ವಾಮಿ ವೃತ್ತದಿಂದ ಮುಡಾ ವೃತ್ತದ ಕಡೆಗೆ ವಾಹನದಲ್ಲಿ ಬಂದ ಬಾಲಕ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿ ಅಶ್ವಿನಿ ಹಾಗೂ ಆಕೆಯ ಸ್ನೇಹಿತೆಗೆ ಗುದ್ದಿದ್ದಾನೆ. ವಾಹನದ ಚಕ್ರ ಅಶ್ವಿನಿ ಅವರ ಹೊಟ್ಟೆಯ ಮೇಲೆ ಹರಿದಿದೆ.

ನಂತರ, ವಾಹನ ನಿಲ್ಲಿಸದೇ ಇನ್ನಷ್ಟು ವೇಗವಾಗಿ ರೋಟರಿ ಜಂಕ್ಷನ್ ಕಡೆಗೆ ಬಂದು ಎಡಕ್ಕೆ ಚಾಲನೆ ಮಾಡಿದ್ದಾನೆ. ಅಲ್ಲಿ ಒಂದು ದ್ವಿಚಕ್ರ ವಾಹನ ಹಾಗೂ ಮೈಸೂರು ನಗರಾಭಿವೃದ್ಧಿ ಕಾರ್ಯದರ್ಶಿ ಕಾರಿಗೆ ಗುದ್ದಿದ್ದಾನೆ. ಇಷ್ಟೊತ್ತಿಗೆ ವಾಹನದ ಟೈಯರ್ ಸಿಡಿದಿದೆ.

ಅಪಘಾತ ಮಾಡಿದ ಹುಡುಗ ಹಾಗೂ ಈತನಿಗೆ ವಾಹನ ನೀಡಿದ ಮಂಜುನಾಥ್ ವಿರುದ್ಧ ಕೆ.ಆರ್. ಸಂಚಾರ ವಿಭಾಗದಲ್ಲಿ ಹಲವು ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ.

English summary
17 year old girl death on minors hit and run case at Mysuru. A boy who borrowed an SUV for a joyride caused continuous accident and this death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X