ಚಲನಚಿತ್ರ, ಮಾಧ್ಯಮ ಮತ್ತು ಸೃಜನಶೀಲ ಕಲೆ ಡಿಪ್ಲೋಮಾಗೆ ಅರ್ಜಿ ಆಹ್ವಾನ

ಮುಂಬೈ, ಆಗಸ್ಟ್ 12, 2021: ಏಷ್ಯಾದ ಮುಂಚೂಣಿಯ ಚಲನಚಿತ್ರ, ಸಂವಹನ ಮತ್ತು ಸೃಜನಶೀಲ ಕಲೆಗಳ ಸಂಸ್ಥೆ ವ್ಹಿಸ್ಲಿಂಗ್ ವುಡ್ಸ್ ಇಂಟರ್ ನ್ಯಾಷನಲ್ (WWI) 2021ರ ವರ್ಷಕ್ಕೆ ಆಗಸ್ಟ್ ಸುತ್ತಿನ ಪ್ರವೇಶ ಪರೀಕ್ಷೆಯ ದಿನಾಂಕಗಳನ್ನು ಪ್ರಕಟಿಸಿದೆ. ಖ್ಯಾತ ಚಿತ್ರಕರ್ಮಿ ಸುಭಾಷ್ ಘಾಯ್, ಮುಕ್ತಾ ಆರ್ಟ್ಸ್ ಹಾಗೂ ಮುಂಬೈನ ಫಿಲಂ ಸಿಟಿಯಿಂದ WWI ಪ್ರವರ್ತಕರಾಗಿದ್ದಾರೆ.

ಡಬ್ಲ್ಯೂಡಬ್ಲ್ಯೂಐ ಚಲನಚಿತ್ರ ನಿರ್ಮಾಣ, ನಟನೆ, ಅನಿಮೇಷನ್ ಅಂಡ್ ಗೇಮ್ ಡಿಸೈನ್, ಮೀಡಿಯಾ ಅಂಡ್ ಕಮ್ಯುನಿಕೇಷನ್, ಫ್ಯಾಷನ್ ಡಿಸೈನ್, ಮ್ಯೂಸಿಕ್, ವಿಶುಯಲ್ ಕಮ್ಯುನಿಕೇಷನ್ ಡಿಸೈನ್ ಮತ್ತು ಈವೆಂಟ್ ಮ್ಯಾನೇಜ್‍ಮೆಂಟ್‍ಗಳಲ್ಲಿ ತನ್ನ ಪೂರ್ಣಕಾಲಿಕ, ಸ್ನಾತಕೋತ್ತರ ಮತ್ತು ಡಿಪ್ಲೊಮಾ ಕೋರ್ಸ್‍ಗಳಿಗೆ ಚಲನಚಿತ್ರ, ಮಾಧ್ಯಮ ಮತ್ತು ಸೃಜನಶೀಲ ಕಲೆಗಳ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಸ್ವೀಕರಿಸುತ್ತಿದೆ.

ಪ್ರವೇಶ ಪರೀಕ್ಷೆಗೆ ನೋಂದಣಿಗೆ ಕೊನೆಯ ದಿನಾಂಕ ಆಗಸ್ಟ್ 15, 2021. ನೋಂದಣಿಯ ನಂತರ ಪ್ರವೇಶ ಪರೀಕ್ಷೆಗಳನ್ನು ಆಗಸ್ಟ್ 17-19, 2021ರ ನಡುವೆ ನಡೆಸಲಾಗುತ್ತದೆ. ಬಿಎಸ್ಸಿ, ಬಿಎ, ಎಂಎ, ಬಿ.ಬಿ.ಎ, ಎಂಬಿಎ ಹಾಗೂ ಡಿಪ್ಲೋಮಾ ಪ್ರವೇಶ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಈ ಬಗ್ಗೆ ವಿವರ ಮುಂದಿದೆ...

ಬಿ.ಎಸ್ಸಿ/ಬಿ.ಎ ಪ್ರವೇಶಕ್ಕೆ ಅರ್ಜಿ

ಬಿ.ಎಸ್ಸಿ/ಬಿ.ಎ ಪ್ರವೇಶಕ್ಕೆ ಅರ್ಜಿ

ಬಿ.ಎಸ್ಸಿ/ಬಿ.ಎ ಫಿಲ್ಮ್ ಮೇಕಿಂಗ್ ಸ್ಪೆಷಲೈಸೇಷನ್‍ಗಳು (ಸಿನೆಮಾಟೋಗ್ರಫಿ, ನಿರ್ದೇಶನ, ಸಂಕಲನ, ನಿರ್ಮಾಣ, ನಿರ್ಮಾಣ ವಿನ್ಯಾಸ, ಸೌಂಡ್ ರೆಕಾರ್ಡಿಂಗ್ ಅಂಡ್ ಡಿಸೈನ್ ಮತ್ತು ವಿಎಫ್‍ಎಕ್ಸ್);
ಎಂ.ಎ. ಇನ್ ಫಿಲ್ಮ್ ಮೇಕಿಂಗ್ ಸ್ಪೆಷಲೈಸೇಷನ್‍ಗಳು((ಸಿನೆಮಾಟೋಗ್ರಫಿ, ನಿರ್ದೇಶನ, ಸಂಕಲನ, ನಿರ್ಮಾಣ, ನಿರ್ಮಾಣ ವಿನ್ಯಾಸ, ಸೌಂಡ್ ರೆಕಾರ್ಡಿಂಗ್ ಅಂಡ್ ಡಿಸೈನ್ ಮತ್ತು ವಿಎಫ್‍ಎಕ್ಸ್);
ಬಿ.ಎ. ಇನ್ ಸ್ಕ್ರೀನ್ ರೈಟಿಂಗ್; ಇಂಟಿಗ್ರೇಟೆಡ್ ಬಿ.ಎಸ್ಸಿ+ಪಿಜಿ ಡಿಪ್ಲೊಮಾ ಇನ್ ಅನಿಮೇಷನ್ ಸ್ಪೆಷಲೈಸೇಷನ್‍ಗಳೊಂದಿಗೆ (2ಡಿ ಅನಿಮೇಷನ್, 3ಡಿ ಅನಿಮೇಷನ್, ಕಾಮಿಕ್ ಬುಕ್ ಡಿಸೈನ್, ಗೇಮ್ ಡಿಸೈನ್ ಮತ್ತು ಪ್ರಿವಿಶುಯಲೈಸೇಷನ್);
ಇಂಟಿಗ್ರೇಟೆಡ್ ಬಿ.ಎಸ್ಸಿ+ ಪಿಜಿ ಡಿಪ್ಲೊಮಾ ಇನ್ ಗೇಮ್ ಡಿಸೈನ್; ಬಿ.ಎ.ಇನ್ ಆ್ಯಕ್ಟಿಂಗ್;
ಬಿ.ಎ. ಇನ್ ಫ್ಯಾಷನ್ ಡಿಸೈನ್; ಎಂ.ಎ.ಇನ್ ಕಾಸ್ಟೂಮ್ ಡಿಸೈನ್; ಇಂಟಿಗ್ರೇಟೆಡ್ ಬಿ.ಎ+ಪಿ.ಜಿ. ಡಿಪ್ಲೊಮಾ ಇನ್ ವಿಶುಯಲ್ ಕಮ್ಯುನಿಕೇಷನ್ ಡಿಸೈನ್

ಅಡ್ವಾನ್ಸ್ಡ್ ಡಿಪ್ಲೊಮಾಕ್ಕಾಗಿ ಅರ್ಜಿ

ಅಡ್ವಾನ್ಸ್ಡ್ ಡಿಪ್ಲೊಮಾಕ್ಕಾಗಿ ಅರ್ಜಿ

ಬಿ.ಎ.ಇನ್ ಮ್ಯೂಸಿಕ್ ಪ್ರೊಡಕ್ಷನ್ ಅಂಡ್ ಕಂಪೊಸಿಷನ್; ಬಿ.ಬಿ.ಎ ಇನ್ ಮೀಡಿಯಾ ಅಂಡ್ ಕಮ್ಯುನಿಕೇಷನ್;
ಎಂ.ಬಿ.ಎ ಇನ್ ಮೀಡಿಯಾ ಅಂಡ್ ಎಂಟರ್‌ಟೈನ್‍ಮೆಂಟ್; ಬಿ.ಬಿ.ಎ ಇನ್ ಈವೆಂಟ್ ಮ್ಯಾನೇಜ್‍ಮೆಂಟ್;
ಎಂ.ಬಿ.ಎ ಇನ್ ಈವೆಂಟ್ ಮ್ಯಾನೇಜ್‍ಮೆಂಟ್ ಅಂಡ್ ಎಕ್ಸ್‍ಪೀರಿಯೆನ್ಷಿಯಲ್ ಮಾರ್ಕೆಟಿಂಗ್;
ಅಡ್ವಾನ್ಸ್ಡ್ ಡಿಪ್ಲೊಮಾ ಇನ್ ಸ್ಕ್ರೀನ್ ರೈಟಿಂಗ್;
ಅಡ್ವಾನ್ಸ್ಡ್ ಡಿಪ್ಲೊಮಾ ಇನ್ ಆ್ಯಕ್ಟಿಂಗ್ ಅಂಡ್ ಡಿಪ್ಲೊಮಾ ಇನ್ ಸ್ಕ್ರೀನ್ ರೈಟಿಂಗ್.
ಡಬ್ಲ್ಯೂಡಬ್ಲ್ಯೂಐ ಪದವಿ, ಸ್ನಾತಕೋತ್ತರ ಮತ್ತು ಡಿಪ್ಲೊಮಾ ಕಾರ್ಯಕ್ರಮಗಳನ್ನು ಭಾರತದ ಎರಡು ಮುಂಚೂಣಿಯ ಶಿಕ್ಷಣ ಸಂಸ್ಥೆಗಳಾದ ರಾಜೀವ್ ಗಾಂಧಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಯೂಥ್ ಡೆವಲಪ್‍ಮೆಂಟ್ ಮತ್ತು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ (ಟಿ.ಐ.ಎಸ್.ಎಸ್) ಒಪ್ಪಂದದ ಅಡಿಯಲ್ಲಿ ಒದಗಿಸಲಾಗುತ್ತದೆ.

ಆನ್‍ಲೈನ್ ಅರ್ಜಿಗಳನ್ನು ಭರ್ತಿ

ಆನ್‍ಲೈನ್ ಅರ್ಜಿಗಳನ್ನು ಭರ್ತಿ

ಅರ್ಜಿದಾರರ ಸುರಕ್ಷತೆ ಆಧರಿಸಿ ಎಲ್ಲ ಪರೀಕ್ಷೆಗಳನ್ನು ಆನ್‍ಲೈನ್‍ನಲ್ಲಿ ನಡೆಸಲಾಗುತ್ತದೆ. ಹಾಲಿವುಡ್ ರಿಪೋರ್ಟರ್‌ನಲ್ಲಿ ವಿಶ್ವದ ಟಾಪ್ 10 ಫಿಲ್ಮ್ ಸ್ಕೂಲ್‍ಗಳಲ್ಲಿ ಒಂದಾಗಿದೆ ಮತ್ತು 2019ರ ಎಫ್‍ಐಸಿಸಿಐ ಹೈಯರ್ ಎಜುಕೇಷನ್ ಎಕ್ಸೆಲೆನ್ಸ್ ಅವಾರ್ಡ್ಸ್‌ನಲ್ಲಿ ಎಕ್ಸೆಲೆನ್ಸ್ ಇನ್ ಕ್ರಿಯೇಟಿವ್ ಅಂಡ್ ಪರ್ಫಾರ್ಮೆನ್ಸ್ ಆರ್ಟ್ಸ್‌ಪುರಸ್ಕಾರ ಪಡೆದಿದೆ.

ವಿದ್ಯಾರ್ಥಿಗಳು ಆನ್‍ಲೈನ್ ಅರ್ಜಿಗಳನ್ನು ಭರ್ತಿ ಮಾಡಲು ಪ್ರವೇಶ ಪರೀಕ್ಷೆ ತೆಗೆದುಕೊಳ್ಳಲು ಅಧಿಕೃತ ವೆಬ್ ತಾಣಕ್ಕೆ ಭೇಟಿ ಕೊಡಬಹುದು.

ಕರ್ನಾಟಕದಲ್ಲೂ ಸಿನಿಮಾ ಸಂಬಂಧಿಸಿದ ಡಿಪ್ಲೋಮಾ

ಕರ್ನಾಟಕದಲ್ಲೂ ಸಿನಿಮಾ ಸಂಬಂಧಿಸಿದ ಡಿಪ್ಲೋಮಾ

ಪೂರಕ ಸುದ್ದಿ: ಕರ್ನಾಟಕದಲ್ಲೂ ಸಿನಿಮಾ ಸಂಬಂಧಿಸಿದ ಡಿಪ್ಲೋಮಾ ಆರಂಭದ ಘೋಷಣೆಯಾಗಿದೆ. ''ಉದ್ಯೋಗ ಮಾರುಕಟ್ಟೆ ಹಾಗೂ ಕೈಗಾರಿಕೆಗಳ ಬೇಡಿಕೆಗಳಿಗೆ ತಕ್ಕಂತೆ ಮಾನವ ಸಂಪನ್ಮೂಲವನ್ನು ಒದಗಿಸುವ ಉದ್ದೇಶದಿಂದ ಬಹುದೊಡ್ಡ ತೀರ್ಮಾನವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಎಂಟು ಹೊಸ ಡಿಪ್ಲೊಮಾ ಕೋರ್ಸ್‌ಗಳನ್ನು ಡಿಪ್ಲೊಮಾ ಇಂಜಿನಿಯರಿಂಗ್‌ನಲ್ಲಿ ಸೇರಿಸಲಾಗುತ್ತಿದೆ'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಘೋಷಿಸಿದ್ದಾರೆ. ಈ ಮೂಲಕ ಡಿಪ್ಲೊಮಾ ಕಲಿಯುವ ಬಯಸುವ ವಿದ್ಯಾರ್ಥಿಗಳಿಗೆ ಸಂತಸ ಕೊಟ್ಟಿದೆ.

ರಾಜ್ಯದಲ್ಲಿ ಹೆಚ್ಚೆಚ್ಚು ಉದ್ಯೋಗಾವಕಾಶ ಸೃಷ್ಟಿಸುವುದು, ಕೈಗಾರಿಕೆಗಳಿಗೆ ಉತ್ಕೃಷ್ಟ ಮಾನವ ಸಂಪನ್ಮೂಲ ಒದಗಿಸುವುದೇ ಹೊಸ ಕೋರ್ಸುಗಳ ಗುರಿ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಹಾಲಿ 33 ಡಿಪ್ಲೋಮಾ ಕೋರ್ಸ್‌ಗಳ ಜೊತೆಗೆ 8 ಹೊಸ ಕೋರ್ಸ್ ಸೇರಿಸಲಾಗುತ್ತಿದೆ. ಈ ಹೊಸ ಕೋರ್ಸ್ ಗಳ ಪಟ್ಟಿಯಲ್ಲಿ ನಿರ್ದೇಶನ ಮತ್ತು ಚಿತ್ರಕಥೆ ರಚನೆ, ಟೀವಿ ಕಾರ್ಯಕ್ರಮಗಳ ನಿರ್ಮಾಣ (Direction screen play writing and TV production) ಡಿಪ್ಲೋಮಾ ಕೂಡಾ ಸೇರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+