ಟ್ವಿಟ್ಟರ್ ವಿಡಿಯೋದಲ್ಲಿ ನೋಡಿ ಮುಂಬೈ ಮಳೆ ಅವಾಂತರ
ಮುಂಬೈ, ಆಗಸ್ಟ್ 29: ಅಸ್ಸಾಂ, ಬಿಹಾರ್, ಗುಜರಾತ್, ರಾಜಸ್ಥಾನದ ನಂತರ ವರುಣ ದೇವನ ಕಣ್ಣು ಭಾರತದ ವಾಣಿಜ್ಯ ರಾಜಧಾನಿ ಮುಂಬೈ ಮೇಲೆ ಬಿದ್ದಿದೆ.
ಆಗಸ್ಟ್ 28 ರ ಸಂಜೆಯಿಂದ ಆರಂಭವಾದ ಬಿರುಸಿನ ಮಳೆ ಇಂದೂ ಎಡಬಿಡದೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳು ತುಂಬಿ ಹರಿಯುತ್ತಿವೆ, ಮನೆಯನ್ನೇ ಹಾರಿಸಿಕೊಂಡು ಹೋಗುವಷ್ಟು ಜೋರಾಗಿ ಗಾಳಿ ಬೀಸುತ್ತಿದೆ, ರಸ್ತೆಯಲ್ಲಿ ಹನುಮಂತನ ಬಾಲದ ಹಾಗೇ ನಿಂತ ವಾಹನಗಳು ಟ್ರಾಫಿಕ್ ಸಮಸ್ಯೆಯ ತೀವ್ರತೆಗೆ ಸಾಕ್ಷಿಯಾಗಿವೆ, ಸಾರ್ವಜನಿಕ ಸಾರಿಗೆ ಸಂಪರ್ಕಗಳಿಲ್ಲದೆ ಜನರು ಪರದಾಡುವಂತಾಗಿದೆ.
ಮುಂಬೈ ಮಳೆಯ ಈ ಚಿಂತಾಜನಕ ಸ್ಥಿತಿ ಟ್ವಿಟ್ಟರ್ ನಲ್ಲೂ ಟ್ರೆಂಡಿಂಗ್ ಆಗಿದ್ದು, ಹಲವರು ಮಳೆಯ ವಿಡಿಯೋ ತೆಗೆದು ಟ್ವಿಟ್ಟರ್ ನಲ್ಲಿ ಹಂಚಿದ್ದಾರೆ. ಆಗಷ್ಟೇ ಬಾರಿ ಅನಾಹುತದಿಂದ ಜಸ್ಟ್ ಮಿಸ್ ಆದ ಕಾರು, ರಸ್ತೆ ತುಂಬಿರುವ ನೀರನ್ನು ತೂರಿಕೊಂಡು ಬರುತ್ತಿರುವ ಬಸ್ಸು, ಆಸ್ಪತ್ರೆಗಳಲ್ಲೂ ತುಂಬಿರುವ ನೀರು ಸೇರಿದಂತೆ ಹಲವು ವಿಡಿಯೋಗಳು ಇದೀಗ ವೈರಲ್ ಆಗಿವೆ. ಅವು ಮುಂಬೈ ಮಳೆಯ ತೀವ್ರತೆಗೆ ಕನ್ನಡಿ ಹಿಡಿದಿವೆ.
| Array |
ಜಸ್ಟ್ ಮಿಸ್
ಪಾರ್ಕ್ ಮಾಡಲಾಗಿದ್ದ ಕಾರನ್ನು ಆಗಷ್ಟೇ ಹೊರತೆಗೆದಿದ್ದ ವ್ಯಕ್ತಿ ಒಂದೇ ಒಂದು ಸೆಕೆಂಡ್ ನಲ್ಲಿ ಕಾರಿನ ಮೇಲೆರಗುವ ಕಂಬದಿಂದ ತಪ್ಪಿಸಿಕೊಂಡ ಈ 'ಜಸ್ಟ್ ಮಿಸ್' ವಿಡಿಯೋವನ್ನು ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ತೆಗೆದವರು ಗಾಯಕ ಅರಮಾನ್ ಮಲೀಕ್.
|
ಆಸ್ಪತ್ರೆಯೊಳಗೆ ಹೊಳೆ!
ಮುಂಬೈನ ಕೆ.ಇ.ಎಂ. ಆಸ್ಪತ್ರೆಗೆ ನುಗ್ಗಿದ ನೀರು ಕೆಲಕ್ಷಣ ಆತಂಕವನ್ನುಂಟು ಮಾಡಿತ್ತು. ಈ ವಿಡಿಯೋವನ್ನು ಆಮ್ ಆದ್ಮಿ ಪಕ್ಷದ ನಾಯಕಿ ಪ್ರೀತಿ ಶರ್ಮಾ ಮೆನಾನ್ ಅವರು ಶೇರ್ ಮಾಡಿದ್ದಾರೆ.
|
ರಸ್ತೆಯೆಲ್ಲ ಜಲಮಯ
ಕಾರಿನಲ್ಲಿ ಕುಳಿತು, ಮಳೆಯಿಂದ ರಸ್ತೆ ತುಂಬ ನೀರು ತುಂಬುತ್ತಿರುವ ದೃಶ್ಯವನ್ನು ಸೆರೆ ಹಿಡಿದ ಮೊಯ್ನಾಕ್ ಪಾಲ್ ಟ್ವಿಟ್ಟರ್ ನಲ್ಲಿ ಆ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
|
ವಾಹನ ಸಂಚಾರಕ್ಕೂ ಪರದಾಟ
ರಸ್ತೆಯಲ್ಲಿ ಆಳೆತ್ತರ ನೀರು ತುಂಬಿ ವಾಹನ ಸಂಚಾರವೂ ಕಷ್ಟವಾಗುತ್ತಿರುವ ವಿಡಿಯೋವನ್ನು ಅಶೋಕ್ ಪಂಡಿತ್ ಟ್ವೀಟ್ ಮಾಡಿದ್ದಾರೆ.












Click it and Unblock the Notifications