ವೈರಲ್ ವಿಡಿಯೋ: ಏರ್ ಇಂಡಿಯಾ ವಿಮಾನದಲ್ಲಿ ಐರಿಶ್ ಮಹಿಳೆಯ ರಂಪಾಟ

ಮುಂಬೈ, ನವೆಂಬರ್ 14: ಲಂಡನ್ನಿನಿಂದ ಮುಂಬೈಗೆ ಬಂದ ಏರ್ ಇಂಡಿಯಾ ವಿಮಾನದಲ್ಲಿ ಐರಿಶ್ ಮಹಿಳೆಯೊಬ್ಬರು ವೈನ್ ನೀಡಿಲ್ಲವೆಂದು ಅಶ್ಲೀಲ ಭಾಷೆಯಲ್ಲಿ ವಿಮಾನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಿಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮತ್ತಷ್ಟು ವೈನ್ ಗೆ ಬೇಡಿಕೆ ಇಟ್ಟಿದ್ದರು. 'ನಾನು ನಿಮ್ಮೆಲ್ಲರಿಗೋಸ್ಕರ(ಭಾರತೀಯರಿಗೋಸ್ಕರ) ಕೆಲಸ ಮಾಡುತ್ತಿದ್ದೇನೆ. ನಾನೋರ್ವ ಅಂತಾರಾಷ್ಟ್ರೀಯ ಕ್ರಿಮಿನಲ್ ಲಾಯರ್. ನನಗೆ ಒಂದು ಗ್ಲಾಸ್ ವೈನ್ ನೀಡುವುದಕ್ಕೆ ನಿಮಗೆ ಸಾಧ್ಯವಿಲ್ಲವೇ?' ಎಂದು ಕೊಳಕು ಪದಗಳನ್ನು ಬಳಸಿ ಅವರು ಕ್ಯಾಬಿನ್ ಕ್ರ್ಯೂ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ.

Viral Video: Irish woman uses vulgar language against Air India crew

ಇದಕ್ಕೂ ಮೊದಲೂ ಈಕೆ ವಿಮಾನ ಸಿಬ್ಬಂದಿಯೊಂದಿಗೆ ಸರಿಯಾಗಿ ವರ್ತಿಸದಿದ್ದ ಕಾರಣ, ಅವರಿಗೆ ಮತ್ತಷ್ಟು ವೈನ್ ನೀಡದಂತೆ ಫ್ಲೈಟ್ ಕಮಾಂಡರ್ ತಾಕೀತು ಹಾಕಿದ್ದರು. ಸಿಬ್ಬಂದಿಯೂ ಅದನ್ನೇ ಪಾಲಿಸಿದ್ದರು. ಆದರೆ ಆಕೆ ಅಸಭ್ಯ ಭಾಷೆಯಲ್ಲಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಭಾರತೀಯರ ಹುಬ್ಬೇರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+