ವಿನೋದ್ ಖನ್ನಾರಿಗೆ ಕ್ಯಾನ್ಸರ್? ವೈರಲ್ ಆಯ್ತು ಫೋಟೋ

ಆಸ್ಪತ್ರೆಯಲ್ಲಿ ಕೃಷರಾಗಿ ನಿಂತಿರುವ ವಿನೋದ್ ಖನ್ನಾ ಅವರ ಚಿತ್ರ ವೈರಲ್ ಆಗಿದ್ದು, ವಿನೋದ್ ಅವರಿಗೆ ಕ್ಯಾನ್ಸರ್ ಇದೆ ಎಂಬ ಸುದ್ದಿ ಹಬ್ಬಿದೆ.

ಮುಂಬೈ, ಏಪ್ರಿಲ್ 06: ಹಿರಿಯ ನಟ, ಬಿಜೆಪಿ ಸಂಸದ ವಿನೋದ್ ಖನ್ನಾ ಅವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ವಿನೋದ್ ಅವರ ಮಗ ರಾಹುಲ್ ಖನ್ನ ಹೇಳಿದ್ದರು. ಆದರೆ, ಆಸ್ಪತ್ರೆಯಲ್ಲಿ ಕೃಷರಾಗಿ ನಿಂತಿರುವ ವಿನೋದ್ ಖನ್ನಾ ಅವರ ಚಿತ್ರ ವೈರಲ್ ಆಗಿದ್ದು, ವಿನೋದ್ ಅವರಿಗೆ ಕ್ಯಾನ್ಸರ್ ಇದೆ ಎಂಬ ಸುದ್ದಿ ಹಬ್ಬಿದೆ.

ಪಂಜಾಬಿನ ಗುರ್ ದಾಸನ್ಪುರ್ ಕ್ಷೇತ್ರದ ಹಾಲಿ ಬಿಜೆಪಿ ಸಂಸದರಾಗಿರುವ ವಿನೋದ್ ಖನ್ನಾ ಅವರ ಆರೋಗ್ಯ ಈಗ ಸುಧಾರಿಸಿದೆ. ವಿನೋದ್ ಅವರ ಆರೋಗ್ಯ ಸುಧಾರಣೆಗಾಗಿ ಶುಭ ಹಾರೈಸಿದ ಎಲ್ಲರಿಗೂ ರಾಹುಲ್ ಖನ್ನಾ ಅವರು ಧನ್ಯವಾದ ಅರ್ಪಿಸಿದ್ದರು.

Vinod Khanna's photo from hospital sparks rumours of the actor suffering from cancer

ಆದರೆ, ಎಚ್. ಎನ್ ರಿಲಯನ್ಸ್ ಫೌಂಡೇಶನ್ ಹಾಗೂ ಆಸ್ಪತ್ರ್ರೆಯಲ್ಲಿ ವಿನೋದ್ ಖನ್ನಾ ಚಿಕಿತ್ಸೆ ಪಡೆಯುತ್ತಿರುವ 70 ವರ್ಷ ವಯಸ್ಸಿನ ವಿನೋದ್ ಖನ್ನಾ ಅವರು ಆಸ್ಪತ್ರೆಯ ಯೂನಿಫಾರ್ಮ್ ದಿರಿಸಿನಲ್ಲಿರುವ ಚಿತ್ರವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.

Vinod Khanna's photo from hospital sparks rumours of the actor suffering from cancer

ವಿನೋದ್ ಖನ್ನಾ ಅವರಿಗೆ ಬ್ಲಾಡರ್ ಕ್ಯಾನ್ಸರ್ ಕಾಯಿಲೆಯಿದೆ ಎಂದು ಸುದ್ದಿ ಬಂದಿದೆ. ವಿನೋದ್ ಖನ್ನಾ ಅವರಿಗೆ ಕ್ಯಾನ್ಸರ್ ಇರುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರ ಬಂದಿಲ್ಲ. ಅಮರ್ ಅಕ್ಬರ್ ಅಂಟೋನಿ, ಇನ್ಸಾಫ್, ಮೇರೆ ಅಪ್ನೆ ಮುಂತಾದ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+