ಕೊವಿಡ್ 19 ಸೋಂಕಿತರ ಪಟ್ಟಿಯಲ್ಲಿ ಹಿರಿಯ ನಟ ಕಿರಣ್

ಮುಂಬೈ, ಮೇ 24: ಲಾಕ್ಡೌನ್ 4.0 ನಡುವೆ ಮುಂಬೈನಲ್ಲಿ ಕೊರೊನಾವೈರಸ್ ಸೋಂಕು ಹರಡುತ್ತಿದೆ. ಕಾಂಗ್ರೆಸ್ ವಕ್ತಾರ ಸಂಜಯ್ ಝಾ ನಂತರ ಮತ್ತೊಬ್ಬ ಸೆಲೆಬ್ರಿಟಿಗೆ ಕೊರೊನಾವೈರಸ್ ಕಾಟ ಆರಂಭವಾಗಿದೆ.

ಹಿಂದಿ ಚಲನಚಿತ್ರ ಹಾಗೂ ಕಿರುತೆರೆಯ ಹಿರಿಯ ನಟ ಕಿರಣ್ ಕುಮಾರ್ ಅವರಿಗೆ ಕೊರೊನಾವೈರಸ್ ಪಾಸಿಟಿವ್ ಬಂದಿದ್ದು, ಸದ್ಯ ಹೋಂ ಕ್ವಾರಂಟೈನ್ ನಲ್ಲಿದ್ದಾರೆ. 74 ವರ್ಷ ವಯಸ್ಸಿನ ನಟ ಕಿರಣ್ ಅವರಿಗೆ ಸದ್ಯಕ್ಕೆ ಯಾವುದೇ ರೀತಿಯ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಆರೋಗ್ಯ ಪರಿಸ್ಥಿತಿಯಲ್ಲಿ ಏರುಪೇರಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

"ನನಗೆ ರೋಗಲಕ್ಷಣಗಳು(asymptomatic) ಕಂಡು ಬಂದಿಲ್ಲ. ಮೇ 14ರಂದು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ತೆರಳಿದಾಗ ಕೊವಿಡ್ 19 ಪರೀಕ್ಷೆ ಮಾಡಿದರು. ಇದರಲ್ಲಿ ಪಾಸಿಟಿವ್ ಎಂದು ಫಲಿತಾಂಶ ಬಂದಿತ್ತು. ಹೀಗಾಗಿ, ಹೋಂ ಕ್ವಾರಂಟೈನ್ ನಲ್ಲಿದ್ದೇನೆ" ಎಂದು ಕಿರಣ್ ಪ್ರತಿಕ್ರಿಯಿಸಿದ್ದಾರೆ.

Veteran actor Kiran Kumar tests positive for COVID-19

''ಜ್ವರ, ಕೆಮ್ಮು, ತಲೆನೋವು ಸೇರಿದಂತೆ ಯಾವುದೇ ಲಕ್ಷಣಗಳು ಕಾಣಿಸಿಕಂಡಿಲ್ಲ, ವೈದ್ಯರ ಸಲಹೆಯಂತೆ ಮನೆಯಲ್ಲೇ ಕ್ವಾರಂಟೈನ್ ನಲ್ಲಿದ್ದೇನೆ'' ಎಂದು ಪಿಟಿಐಗೆ ಕಿರಣ್ ತಿಳಿಸಿದ್ದಾರೆ.

ಧಡ್ಕನ್, ಮುಜ್ಸೆ ದೋಸ್ತಿ ಕರೊಗೆ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಕಿರಣ್ ಅವರ ಕ್ವಾರಂಟೈನ್ ಬದುಕಿಗೆ ಮನೆಯವರು ಸಹಕರಿಸುತ್ತಿದ್ದಾರೆ. ನಮ್ಮ ಮನೆಯ ಮೂರನೇ ಮಹಡಿಯಲ್ಲಿ ನಾನು ವಾಸವಿದ್ದೇನೆ. ಮನೆಯವರು ಎರಡನೇ ಮಹಡಿಯಲ್ಲಿದ್ದಾರೆ. ಮೇ 26 ಅಥವಾ 27ಕ್ಕೆ ಇನ್ನೊಂದು ಸುತ್ತಿನ ಪರೀಕ್ಷೆ ನಡೆಸಲಾಗುತ್ತದೆ ಎಂದಿದ್ದಾರೆ.

ಶನಿವಾರದ ಎಣಿಕೆಯಂತೆ ಮಹಾರಾಷ್ಟ್ರದಲ್ಲಿ 47,190 ಪ್ರಕರಣಗಳು ದಾಖಲಾಗಿವೆ. 1,577 ಮಂದಿ ಮೃತಪಟ್ಟಿದ್ದಾರೆ. ಮುಂಬೈನಲ್ಲಿ 25,000 ಪ್ರಕರಣಗಳು ದಾಖಲಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+