ಮುಂಬೈ: ಸೆಂಟ್ರಲ್ ರೈಲು ನಿಲ್ದಾಣದ ಬಳಿ ಕಚ್ಚಾ ಬಾಂಬ್ ಪತ್ತೆ
ಮುಂಬೈ, ಜನವರಿ 11: ಮುಂಬೈನ ಸೆಂಟ್ರಲ್ ರೈಲ್ವೆ ನಿಲ್ದಾಣದ ಬಳಿ ಮೆಟ್ರೋ ರೈಲು ಕಾಮಗಾರಿ ನಡೆಸುವಾಗ ಎರಡು ಕಚ್ಚಾ ಬಾಂಬ್ ಗಳು ಪತ್ತೆಯಾಗಿವೆ ಎಂದು ಮುಂಬೈ ಮೆಟ್ರೋ ರೈಲು ನಿಗಮ(ಎಂಎಂಆರ್ ಸಿಎಲ್) ಅಧಿಕಾರಿಗಳು ಹೇಳಿದ್ದಾರೆ.
ನಾಗ್ಪಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಂಬ್ ಗಳು ಪತ್ತೆಯಾಗಿದ್ದು, ಸ್ಥಳಕ್ಕೆ ಶ್ವಾನ ದಳ ಆಗಮಿಸಿದ್ದು, ಬಾಂಬ್ ಗಳನ್ನು ಸುರಕ್ಷಿತವಾಗಿ ಅಲ್ಲಿಂದ ಹೊರ ತೆಗೆಯಲಾಗಿದೆ. ಕಚ್ಚಾ ಬಾಂಬ್ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಮುಂಬೈನ ಬಾಂಬ್ ನಿಷ್ಕ್ರಿಯ ದಳದವರು ಹಾಗೂ ಶ್ವಾನದಳ, ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಾಂಬ್ ಗಳನ್ನು ಫೋರೆನ್ಸಿಕ್ ಲ್ಯಾಬಿಗೆ ಕಳಿಸಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.ಮೇಲ್ನೊಟಕ್ಕೆ ಇವು ತುಂಬಾ ಹಳೆಯದ್ದಾಗಿದ್ದು, ನೆಲದಲ್ಲಿ ತುಂಬಾ ಆಳವಾಗಿ ಹುದುಗಿತ್ತು ಎಂದು ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ನೀಲೇಶ್ ಶೆವಾಲೆ ಹೇಳಿದರು.(ಎಎನ್ಐ)












Click it and Unblock the Notifications