ಕೊರೊನಾ ಹಾಟ್ ಸ್ಪಾಟ್ ಮುಂಬೈನಿಂದ ಬಂದ ಗುಡ್ ನ್ಯೂಸ್
ಮುಂಬೈ, ಏಪ್ರಿಲ್ 27: ಮುಂಬೈ ದೇಶದಲ್ಲಿ ಕೊರೊನಾ ಹಾಟ್‌ಸ್ಪಾಟ್ ನಗರ. ಕಾರಣ ಇಲ್ಲಿಯೇ ಅತಿ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆದರೆ, ಇದೀಗ ಇಂತಹ ಸ್ಥಳದಿಂದ ಒಂದು ಶುಭ ಸುದ್ದಿ ಬಂದಿದೆ.
ಮುಂಬೈನಲ್ಲಿ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ ಸಾವಿರ ದಾಟಿದೆ. 1015 ಮಂದಿ ಕೊರೊನಾ ಹೋರಾಟದಲ್ಲಿ ಗೆದ್ದಿದ್ದಾರೆ. ಇಂದು ಒಂದೇ ದಿನ 118 ರೋಗಿಗಳನ್ನು ಡಿಸ್ಜಾರ್ಜ್ ಮಾಡಲಾಗಿದೆ. ಮುಂಬೈ ಹಾಗೂ ಪುಣೆಯಲ್ಲಿ ಕೊರೊನಾ ಅಟ್ಟಹಾಸ ನಡುವೆ ಸಣ್ಣ ಖುಷಿ ಸಿಕ್ಕಿದೆ.
ಇಂದು 118 ಜನರು ಡಿಸ್ಜಾರ್ಜ್ ಆಗಿದ್ದಾರೆ. ಒಟ್ಟು 1015 ಜನರು ಗುಣಮುಖ ಆಗಿದ್ದಾರೆ. ಆದರೆ, ಇದು ಸಂಭ್ರಮದ ವಿಷಯೂ ಅಲ್ಲ. ಕಾರಣ ಮುಂಬೈನಲ್ಲಿ ಇನ್ನೂ 5589 ಮಂದಿ ಸೋಂಕಿತರು ಇದ್ದಾರೆ. ಈ ಸಂಖ್ಯೆ ದಿನೇ ದಿನೇ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗುತ್ತಲೇ ಇದೆ. ಇಂದು ಒಂದೇ ದಿನ ಮುಂಬೈನಲ್ಲಿ 395 ಕೇಸ್‌ಗಳು ಪತ್ತೆಯಾಗಿವೆ. ಮುಂಬೈನಲ್ಲಿ 219 ಜನರು ಕೊರೊನಾಗೆ ಬಲಿಯಾಗಿದ್ದಾರೆ.

ಇನ್ನು ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 8068ಕ್ಕೆ ಏರಿಕೆ ಕಂಡಿದೆ. ಮುಂಬೈ ಹಾಗೂ ಪುಣೆಯಲ್ಲಿ ಸೋಂಕು ವೇಗವಾಗಿ ಹರಡುತ್ತಿದೆ. ಮಹಾರಾಷ್ಟ್ರ, ದೇಶದಲ್ಲಿ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯವಾಗಿದೆ. ಇಡೀ ರಾಜ್ಯದಲ್ಲಿ ಒಟ್ಟು 1188 ಜನರು ಗುಣಮುಖರಾಗಿದ್ದಾರೆ.
395 new #COVID19 positive cases in Mumbai today, total positive cases here stands at 5589. 15 deaths reported today, total death toll in Mumbai is 219. With 118 discharged today, the total number of people discharged till date stands at 1015: Municipal Corporation Greater Mumbai
— ANI (@ANI) April 27, 2020
ಅಂದಹಾಗೆ, ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 28380ಕ್ಕೆ ಏರಿಕೆಯಾಗಿದೆ. 886 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.












Click it and Unblock the Notifications