ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ಗೆ ಶಿವಸೇನೆ ಪತ್ರ
ಮುಂಬೈ, ನವೆಂಬರ್ 5: ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್‌ಗೆ ಶಿವಸೇನೆ ಪತ್ರ ಬರೆದಿದೆ. ಮಹಾರಾಷ್ಟ್ರ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ವಹಿಸಲು ಮನವಿ ಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ 50:50 ಅಧಿಕಾರ ಬೇಕು ಎಂದು ಶಿವಸೇನೆ ಪಟ್ಟು ಹಿಡಿದಿದೆ. ಆದರೆ ಬಿಜೆಪಿಯ ಅರ್ಧದಷ್ಟು ಸೀಟು ಕೂಡ ಗೆದ್ದಿಲ್ಲ ಹೇಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೊಡುವುದು ಎನ್ನುವುದು ಬಿಜೆಪಿಯ ಪ್ರಶ್ನೆಯಾಗಿದೆ.
ಹೀಗಿರುವಾಗ ಚುನಾವಣೆ ಫಲಿತಾಂಶ ಹೊರಬಿದ್ದು ತಿಂಗಳಿಗೆ ಬಂದರೂ ಮಹಾರಾಷ್ಟ್ರ ಸರ್ಕಾರ ರಚನೆ ಕುರಿತು ಗೊಂದಲ ಇನ್ನೂ ಮುಮದುವರೆದಿದೆ. ಹೀಗಾಗಿ ಈ ವಿಚಾರದಲ್ಲಿ ಆರ್‌ಎಸ್‌ಎಸ್ ಮಧ್ಯಸ್ಥಿಕೆವಹಿಸುವಂತೆ ಶಿವಸೇನೆಯು ಮೋಹನ್ ಭಾಗವತ್‌ಗೆ ಪತ್ರ ಬರೆದಿದೆ.

ಬರೆದ ಪತ್ರದಲ್ಲಿ ಬಿಜೆಪಿ-ಶಿವಸೇನಾ ಸೇರಿ ಸರ್ಕಾರವನ್ನು ರಚನೆ ಮಾಡುವ ಕುರಿತು ಎಲ್ಲಾ ಮಾತುಕತೆ ನಡೆದಿತ್ತು. ಆದರೆ ಇದೀಗ ಮೈತ್ರಿ ಧರ್ಮವನ್ನು ಬಿಜೆಪಿ ಮರೆತಿದೆ ಎಂದು ತಿವಾರಿ ಪತ್ರದಲ್ಲಿ ತಿಳಿಸಿದ್ದಾರೆ.
ಆದರೆ ಇದುವರೆಗೂ ಆರ್‌ಎಸ್‌ಎಸ್‌ನಿಂದ ಯಾವುದೇ ಪ್ರತಿಕ್ರಿಯೆ ಶಿವಸೇನೆಗೆ ಲಭ್ಯವಾಗಿಲ್ಲ. ಒಂದೆಡೆ ಶಿವಸೇನೆಯು ಶರದ್ ಪವಾರ್ ಜೊತೆಗೆ ಕೈ ಜೋಡಿಸಲು ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಕುರಿತು ದೇವೇಂದ್ರ ಫಡ್ನವಿಸ್, ಅಮಿತ್ ಶಾ ಹಾಗೂ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications