Breaking; ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ನಿಧನ
ಮುಂಬೈ, ಮೇ 10; ಖ್ಯಾತ ಸಂತೂರ್ ವಾದಕ, ಪದ್ಮ ವಿಭೂಷಣ ಪಂಡಿತ್ ಶಿವಕುಮಾರ್ ಶರ್ಮಾ ವಿಧಿವಶರಾದರು. ಕಿಡ್ನಿ ಸಮಸ್ಯೆಯ ಕಾರಣ ಕಳೆದ ಆರು ತಿಂಗಳಿನಿಂದ ಅವರು ಡಯಾಲಿಸಿಸ್ ಪಡೆಯುತ್ತಿದ್ದರು.
84 ವರ್ಷದ ಪಂಡಿತ್ ಶಿವಕುಮಾರ್ ಶರ್ಮಾ ಮಂಗಳವಾರ ಹೃದಯಾಘಾತದಿಂದ ವಿಧಿವಶರಾದರು. ಖ್ಯಾತ ಸಂತೂರ್ ವಾದಕರಾಗಿದ್ದ ಶಿವಕುಮಾರ್ ಶರ್ಮಾ ಸಂಗೀತ ನಿರ್ದೇಶಕರು ಸಹ ಆಗಿದ್ದರು.
ಆರು ತಿಂಗಳಿಂನಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಕಿಡ್ನಿ ವೈಫಲ್ಯದ ಹಿನ್ನಲೆಯಲ್ಲಿ ಡಯಾಲಿಸಿಸ್ ಪಡೆಯುತ್ತಿದ್ದರು.

ಸಂತೂರ್ ವಾದ್ಯಕ್ಕೆ ಪಂಡಿತ್ ಶಿವಕುಮಾರ್ ಶರ್ಮಾ ಶಾಸ್ತ್ರೀಯ ಸ್ಥಾನಮಾನ ನೀಡಿದರು. ಸಿತಾರ್, ಸರೋದ್‌ನಂತೆ ಅದನ್ನು ಪ್ರಸಿದ್ಧಿಗೊಳಿಸಿದರು.












Click it and Unblock the Notifications