ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಮೇಯರ್ ಕಾರಿಗೆ ದಂಡ
ನೋ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿರುವ ಸಾಮಾನ್ಯ ಜನರ ವಾಹನಗಳನ್ನು ಸಂಚಾರ ಪೊಲೀಸರು ಮುಲಾಜಿಲ್ಲದೆ ಎಳೆದುಕೊಂಡು ಹೀಗುವುದನ್ನು ನಾವು ನೋಡಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ನೋ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದ ಮುಂಬೈ ಮೇಯರ್ ಕಾರಿಗೆ ದಂಡ ವಿಧಿಸಲಾಗಿದೆ.
ನಿಯಮವೆಂದರೆ ಎಲ್ಲರಿಗೂ ಒಂದೇ ಇತ್ತೀಚೆಗೆ ನೋ ಪಾರ್ಕಿಂಗ್ ಬೋರ್ಡ್ ಕೆಳಗಡೆಯೇ ತಮ್ಮ ಕಾರನ್ನು ನಿಲ್ಲಿಸಿದ್ದ ಮೇಯರ್‌ಗೆ ದಂಡ ವಿಧಿಸಲಾಗಿದೆ.
ಸಂಚಾರ ಪೊಲೀಸರು ನೋ ಪಾರ್ಕಿಂಗ್ ಫಲಕ ಕೆಳಗಡೆಯೇ ಮೇಯರ್ ವಿಶ್ವನಾಥ್ ಮಹಾದೇಶ್ವರ್ ಅವರ ಕಾರು ನಿಂತಿರುವುದನ್ನು ನೋಡಿದ್ದಾರೆ. ಅಲ್ಲಿ ಕಾರು ನಿಲ್ಲಿಸಿ ಯಾವುದೋ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲೆಂದು ತೆರಳಿದ್ದರು.

ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ಪ್ರದೇಶ ಅದಾಗಿದ್ದು, ಅದನ್ನೂ ತಿಳಿದೂ ಕೂಡ ವಾಹನ ನಿಲ್ಲಿಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಸಂಚಾರ ಪೊಲೀಸರು ವಿಶೇಷ ಡ್ರೈವ್ ನಡೆಸುತ್ತಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತಿದ್ದಾರೆ.
ಇದೇ ರೀತಿ ಎಲ್ಲಾ ಊರುಗಳಲ್ಲೂ ದಂಡ ವಿಧಿಸಿದರೆ ಅರ್ಧ ದಟ್ಟಣೆ ಕಡಿಮೆಯಾಗುತ್ತದೆ. ಬೆಂಗಳೂರಲ್ಲಿಯೂ ರಸ್ತೆಯ ತುಂಬೆಲ್ಲಾ ಸರ್ಕಾರಿ ಅಧಿಕಾರಿಗಳ ಕಾರು ಗೋಚರಿಸುತ್ತದೆ. ಮನಸ್ಸಿಗೆ ಬಂದಂತೆ ವಾಹನಗಳನ್ನು ಪಾರ್ಕ್ ಮಾಡಿರುತ್ತಾರೆ. ಇಲ್ಲೂ ಕೂಡ ದಂಡ ಬೀಳಬೇಕು. ಆಗ ಸಂಚಾರ ವ್ಯವಸ್ಥೆಯೂ ಸುಧಾರಿಸಿದೆ ಎಂಬ ಭಾವನೆ ಮೂಡುತ್ತದೆ.












Click it and Unblock the Notifications