ನಟ ಆದಿತ್ಯ ಪಂಚೋಲಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ಮುಂಬೈ, ಜೂನ್ 27: ಹಿಂದಿ ಚಿತ್ರರಂಗದ ಹಿರಿಯ ನಟ ಆದಿತ್ಯ ಪಂಚೋಲಿ ಮತ್ತೊಮ್ಮೆ ಬೇಡದ ವಿಷಯಕ್ಕೆ ಸುದ್ದಿಯಾಗಿದ್ದಾರೆ. ನಟಿ ಜಿಯಾ ಖಾನ್ ಸಾವಿನ ಪ್ರಕರಣದಲ್ಲಿ ಆದಿತ್ಯ ಪಂಚೋಲಿ ಹಾಗೂ ಅವರ ಪುತ್ರ ಸೂರಜ್ ಪಂಚೋಲಿ ಹೆಸರು ಕೇಳಿ ಬಂದಿತ್ತು. ಈಗ ಆದಿತ್ಯ ಪಂಚೋಲಿ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಆದಿತ್ಯ ಅವರನ್ನು ವಿಚಾರಣೆಗೊಳಪಡಿಸಿಲ್ಲ.

ಮಹಿಳೆಯೊಬ್ಬರು ನೀಡಿರುವ ಲಿಖಿತ ದೂರಿನ ಅನ್ವಯ ಆದಿತ್ಯ ಪಂಚೋಲಿ ವಿರುದ್ಧ ಐಪಿಸಿ ಸೆಕ್ಷನ್ 376 ಅನ್ವಯ ದೂರು ದಾಖಲಿಸಿಕೊಳ್ಳಲಾಗಿದೆ. ವರ್ಸೋವಾ ಸಬ್ ಅರ್ಬನ್ ಠಾಣೆ ಪೊಲೀಸರು, ತನಿಖೆ ಕೈಗೊಂಡಿದ್ದು, ದೂರು ನೀಡಿದ ಮಹಿಳೆಯ ಹೇಳಿಕೆ ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಸಂತ್ರಸ್ತ ಮಹಿಳೆಯ ಸೋದರಿ ಈ ಮುಂಚೆ ಏಪ್ರಿಲ್ ತಿಂಗಳಿನಲ್ಲಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿ, ನಟ ಆದಿತ್ಯ ಪಂಚೋಲಿ ಅವರಿಂದ ತೀವ್ರ ಕಿರುಕುಳ ಅನುಭವಿಸುತ್ತಿರುವುದಾಗಿ ಹೇಳಿದ್ದರು. ನನ್ನ ಸೋದರಿ ಹಾಗೂ ನಟ ಆದಿತ್ಯ ಅವರು ಲಿನ್ ಇನ್ ಸಂಬಂಧದಲ್ಲಿದ್ದರು, ಕಳೆದ ಹತ್ತು ವರ್ಷದಿಂದ ಪರಿಚಯ ಎಂದು ಪೊಲೀಸರಿಗೆ ತಿಳಿಸಿದ್ದರು. ಈಗ ಪೊಲೀಸರು ಸಂತ್ರಸ್ತೆಯ ಹೇಳಿಕೆ ಪಡೆದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Rape case registered against Bollywood actor Aditya Pancholi

ನೆರೆಮನೆಯವರ ಮೇಲೆ ಹಲ್ಲೆ ಮಾಡಿದ ಪ್ರಕರಣವನ್ನು 2013ರಲ್ಲಿ ಎದುರಿಸಿದ್ದ ಆದಿತ್ಯ ಪಂಚೋಲಿಗೆ ಬಹುವಾಗಿ ಕಾಡಿದ್ದು ನಟಿ ಜಿಯಾ ಖಾನ್ ಅವರ ನಿಗೂಢ ಸಾವು. ಜಿಯಾ ಸಾವಿಗೆ ಆದಿತ್ಯ ಪಂಚೋಲಿ ಹಾಗೂ ಅವರ ಮಗ ಸೂರಜ್ ಕಾರಣ ಎಂದು ಜಿಯಾ ಅವರ ತಾಯಿ ಆಗ್ರಹಿಸಿ ವಿವಿಧ ತನಿಖಾ ಸಂಸ್ಥೆಗಳಿಂದ ತನಿಖೆಗಾಗಿ ಮನವಿ ಮಾಡಿದ್ದರು.(ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+