ರಾಜಸ್ತಾನದ ಸುಮನ್ ರಾವ್ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2019
ಮುಂಬೈ, ಜೂನ್ 16: ರಾಜಸ್ತಾನದ ಸುಮನ್ ರಾವ್ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2019 ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಸೌಂದರ್ಯ ಸ್ಪರ್ಧೆಯು ಸರ್ದಾರ್ ವಲ್ಲಭಭಾಯ್ ಪಟೇಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಛತ್ತೀಸ್ ಗಢದ ಶಿವಾನಿ ಜಾಧವ್ ಫೆಮಿನಾ ಮಿಸ್ ಗ್ರಾಂಡ್ ಇಂಡಿಯಾ 2019 ಅನ್ನು ತಮ್ಮದಾಗಿಸಿಕೊಂಡರು.
ಬಿಹಾರದ ಶ್ರೇಯಾ ಶಂಕರ್ ಮಿಸ್ ಇಂಡಿಯಾ ಯುನೈಟೆಡ್ ಕಾಂಟಿನೆಂಟ್ಸ್ 2019 ಅನ್ನು ಶನಿವಾರ ತಮ್ಮ ಮುಡಿಗೇರಿಸಿಕೊಂಡರು. 20 ವರ್ಷದ ಸುಮನ್ ಕಾಲೇಜು ವಿದ್ಯಾರ್ಥಿನಿಯಾಗಿದ್ದು, ಥಾಯ್ಲೆಂಡ್ ನಲ್ಲಿ ನಡೆಯುವ ಮಿಸ್ ವರ್ಲ್ಡ್ 2019ರ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಜೀವನದಲ್ಲಿ ಒಂದು ನಿರ್ದಿಷ್ಟ ಗುರಿಯ ಕಡೆಗೆ ನೀವು ಸಂಕಲ್ಪ ಮಾಡಿದರೆ ನಿಮ್ಮ ದೇಹದ ಪ್ರತಿ ನರ- ನಾಡಿಯು ಗೆಲುವಿನ ಪಯಣದ ದಿಕ್ಕಿನಲ್ಲಿ ಕೆಲಸ ಮಾಡಲು ಆರಂಭಿಸುತ್ತವೆ ಎಂದು ಸಂದರ್ಶನದಲ್ಲಿ ಆಕೆ ಹೇಳಿದ್ದರು.

ಬಾಲಿವುಡ್ ನ ಹೆಸರಾಂತ ಕೊರಿಯೋಗ್ರಾಫರ್ ರೆಮೋ ಡಿಸೋಜಾ, ನಟಿಯರಾದ ಹುಮಾ ಖುರೇಷಿ, ಚಿತ್ರಾಂಗದಾ ಸಿಂಗ್, ಫ್ಯಾಷನ್ ಡಿಸೈನರ್ ಫಲ್ಗುಣಿ ಶೇನ್ ಪೀಕಾಕ ಮತ್ತು ಭಾರತದ ಫುಟ್ ಬಾಲ್ ಆಟಗಾರ ಸುನೀಲ್ ಛೆಟ್ರಿ ಮತ್ತಿತರರು ತೀರ್ಪುಗಾರರಾಗಿದ್ದರು.
ಈ ಸಮಾರಂಭದಲ್ಲಿ ಕತ್ರಿನಾ ಕೈಫ್, ವಿಕಿ ಕೌಶಲ್, ಮೌನಿ ರಾಯ್ ನೃತ್ಯ ಪ್ರದರ್ಶನ ನೀಡಿದರು. ಬಾಲಿವುಡ್ ಚಿತ್ರಕರ್ಮಿ ಕರಣ್ ಜೋಹರ್ ಮತ್ತು ಮನೀಶ್ ಪೌಲ್ ಕಾರ್ಯಕ್ರಮ ನಿರೂಪಣೆ ಮಾಡಿದರು.












Click it and Unblock the Notifications