ಕಾಂಗ್ರೆಸ್ ನಾಯಕಿ ಪುತ್ರಿಗೆ ಟ್ವಿಟ್ಟರ್ ನಲ್ಲಿ ಅತ್ಯಾಚಾರದ ಬೆದರಿಕೆ
ಮುಂಬೈ, ಜುಲೈ 03: ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಚತುರ್ವೇದಿ ಅವರ ಪುತ್ರಿಗೆ ಟ್ವಿಟ್ಟರ್ ನಲ್ಲಿ ಕಿಡಿಗೇಡಿಯೊಬ್ಬ ಅತ್ಯಾಚಾರದ ಬೆದರಿಕೆ ಒಡ್ಡಿದ್ದು, ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಿಯಾಂಕಾ ಚತುರ್ವೇದಿ ಅವರ 10 ವರ್ಷದ ಮಗಳನ್ನು ಅತ್ಯಾಚಾರ ಮಾಡುವುದಾಗಿ @GirishK1605 ಎಂಬ ಖಾತೆಯಿಂದ ಬೆದರಿಕೆ ಬಂದಿದೆ.
'ನಾವು ರಾಜಕಾರಣಿಗಳು ಪ್ರತಿದಿನ ಟ್ರೋಲ್ ಆಗುತ್ತೇವೆ. ಅದೇನು ಹೊಸತಲ್ಲ. ಆದರೆ ನನ್ನ ಮಗಳ ಬಗ್ಗೆ ಮಾತನಾಡುವುದು ಸರಿಯೇ? ಅದೂ ಇಷ್ಟು ಅವಾಚ್ಯವಾಗಿ? ಅದಕ್ಕೆಂದೇ ನಾನು ಅವರ ವಿರುದ್ಧ ದೂರು ನೀಡಬೇಕೆಂದು ನಿರ್ಧರಿಸಿದ್ದೇನೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.
Yes I plan to file an FIR. Also for kind attention of @MumbaiPolice , this fake quote with my pic is being shared on varioua FB pages with call for violence directed at me, I would request you to treat this as urgent. https://t.co/112Ctsa3Z4
— Priyanka Chaturvedi (@priyankac19) July 1, 2018
ಈ ಕುರಿತಂತೆ ಪಕ್ಷ ಭೇದ ಮರೆತು ಎಲ್ಲರೂ ಪ್ರಿಯಾಂಕಾ ಚತುರ್ವೇದಿ ಅವರ ಬೆಂಬಲಕ್ಕೆ ನಿಂತಿದ್ದು, ಟ್ರೋಲ್ ಹೆಸರಿನಲ್ಲಿ ಆವಾಚ್ಯ ಶಬ್ದ ಬಳಸುವರಿಗೆ, ಬೆದರಿಸುವವರಿಗೆ ಸರಿಯಾದ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.

ಅಂತರ್ಧರ್ಮೀಯ ದಂಪತಿಯ ಪಾಸ್ ಪೋರ್ಟ್ ವಿವಾದಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರನ್ನೂ ಟ್ರೋಲ್ ಮಾಡಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಅವರ ವಿರುದ್ಧವೂ ಅಸಭ್ಯ ಭಾಷೆ ಬಳಸಲಾಗಿತ್ತು. 'ಪ್ರಜಾಪ್ರಭುತ್ವದಲ್ಲಿ ಟೀಕೆಗಳಿಗೆ ಎಂದಿಗೂ ಸ್ವಾಗತ. ಆದರೆ ಆ ಟೀಕೆಗಳು ಸಭ್ಯತೆಯ ಗೆರೆ ದಾಟದಿರಲಿ' ಎಂದು ಸುಷ್ಮಾ ಸ್ವರಾಜ್ ಈ ಟ್ರೋಲ್ ಗಳಿಗೆ ಪ್ರತಿಕ್ರಿಯಿಸಿದ್ದರು.












Click it and Unblock the Notifications