ಐಶಾರಾಮಿ ವೇಶ್ಯಾವಾಟಿಕೆ ದಂಧೆ ಭೇದಿಸಿದ ಪೊಲೀಸರು: ನಟಿಯರು ಭಾಗಿ

ಮುಂಬೈ, ಜನವರಿ 17: ಚಿತ್ರ, ಧಾರವಾಹಿ ನಟಿಯರು ಭಾಗಿಯಾಗಿದ್ದ ಸ್ಟಾರ್ ಹೊಟೆಲ್‌ಗಳಲ್ಲಿ ನಡೆಸಲಾಗುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಅಂಧೇರಿಯ ಸ್ಟಾರ್ ಹೋಟೆಲ್ ಒಂದರಲ್ಲಿ ಈ 'ಹೈ ಪ್ರೊಫೈಲ್' ವೇಶ್ಯಾವಾಟಿಕೆ ದಂಧೆ ನಡೆಯುತ್ತಿತ್ತು. ನಿನ್ನೆ ಪೊಲೀಸರು ಹೊಟೆಲ್‌ ಮೇಲೆ ದಾಳಿ ನಡೆಸಿ ಮೂವರು ನಟಿಯರನ್ನು ರಕ್ಷಿಸಿದ್ದಾರೆ. ಒಬ್ಬ ಮಹಿಳೆಯನ್ನು ಬಂಧಿಸಿದ್ದಾರೆ.

Recommended Video

      ಡಿಕೆಶಿಗೆ ಕೆಪಿಸಿಸಿ ಯೋಗ, ಹೈಕಮಾಂಡ್ ಎದುರು ಸಿದ್ದು ಹೊಸರಾಗ! | DK SHIVAKUMAR | KPCC | CONGRESS | CENTRAL

      ಅಂಧೇರಿಯಲ್ಲಿ ಟ್ರಾವೆಲ್ಸ್ ನಡೆಸುತ್ತಿದ್ದ ಮಹಿಳೆಯೊಬ್ಬಾಕೆ ಈ 'ಹೈ ಪ್ರೊಫೈಲ್' ಸೆಕ್ಸ್ ದಂಧೆ ನಡೆಸುತ್ತಿದ್ದಳು. ಈಕೆಯನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈಕೆ ಇನ್ನೂ ಹಲವು ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದುದಾಗಿ ವಿಚಾರಣೆ ವೇಳೆ ಗೊತ್ತಾಗಿದೆ.

      Police Raid On High Profile Prostitution Rocket In Mumbai

      ರಕ್ಷಿಸಲಾಗಿರುವ ಮೂವರೂ ಸಹ ನಟಿಯರಾಗಿದ್ದು, ಅದರಲ್ಲಿ ಒಬ್ಬಾಕೆ ಅಪ್ರಾಪ್ತರಾಗಿದ್ದಾರೆ. 'ಸಾವಧಾನ್ ಭಾರತ್' ಶೋ ನಲ್ಲಿ ನಟಿಸಿದ್ದ ನಟಿ, ಮರಾಠಿಯ ಧಾರವಾಹಿ ಮತ್ತು ಸಿನಿಮಾ ನಟಿ ಮತ್ತು ವೆಬ್ ಸೀರೀಸ್‌ ನಲ್ಲಿ ನಟಿಸಿದ್ದ ಅಪ್ರಾಪ್ತೆಯನ್ನು ಪೊಲೀಸರು ರಕ್ಷಿಸಿದ್ದಾರೆ.

      ಹೈ-ಪ್ರೋಫೈಲ್ ವೇಶ್ಯಾವಾಟಿಕೆ ದಂಧೆಗೆ ಭಾರಿ ವಾಣಿಜ್ಯಪತಿಗಳು, ರಾಜಕಾರಣಿಗಳೇ ಗ್ರಾಹಕರಾಗಿದ್ದರಂತೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+