ಐಎನ್ಎಸ್ ಕೋಲ್ಕತ್ತಾ ಲೋಕಾರ್ಪಣೆ ಮಾಡಿದ ಮೋದಿ
ಮುಂಬೈ, ಆ.16 : ಭಾರತದ ನೌಕಾಶಕ್ತಿ ಸಾಮರ್ಥ್ಯ ಮತ್ತಷ್ಟು ಹೆಚ್ಚಾಗಿದೆ. ದೇಶೀ ನಿರ್ಮಿತ ಅತಿ ದೊಡ್ಡ ಯುದ್ಧ ನೌಕೆ ಐಎನ್ಎಸ್ ಕೋಲ್ಕತ್ತಾವನ್ನು ಶನಿವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. 6800 ಟನ್ ತೂಕದ ಐಎನ್ಎಸ್ ಕೊಲ್ಕತ್ತಾ ನೌಕೆಯನ್ನು ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಮೋದಿ ಅವರು, ಇಂದು ಭಾರತದ ಪಾಲಿಗೆ ಐತಿಹಾಸಿಕ ದಿನ ಎಂದು ಹೇಳಿದರು.
ಶನಿವಾರ ಮುಂಬೈನ ನೌಕಾನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಐಎನ್ಎಸ್ ಕೊಲ್ಕತ್ತಾ ನೌಕೆಯನ್ನು ಲೋಕಾರ್ಪಣೆ ಮಾಡಿದರು. ನಂರ ಮಾತನಾಡಿದ ಅವರು, ಐಎನ್ಎಸ್ ಕೊಲ್ಕತ್ತಾ ನೌಕೆ ಸ್ವದೇಶಿ ನಿರ್ಮಿತ ನೌಕೆಯಾಗಿದ್ದು, ಇದನ್ನು ಸ್ವತಃ ನಮ್ಮ ತಂತ್ರಜ್ಞರೇ ನಿರ್ಮಿಸಿರುವುದು ಹೆಮ್ಮೆಯ ಸಂಗತಿ ಎಂದು ಬಣ್ಣಿಸಿದರು. ನೌಕೆಯನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಭಾರತದ ತಂತ್ರಜ್ಞರು ಹಾಗೂ ಕಾರ್ಮಿಕರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ ಏನು ಎಂಬುದಕ್ಕೆ ಐಎನ್ಎಸ್ ನೌಕೆ ಸಾಕ್ಷಿಯಾಗಿದೆ ಎಂದು ಹೇಳಿದ ಮೋದಿ, ಇಡೀ ಜಗತ್ತಿಗೆ ಭಾರತದ ಶಕ್ತಿ ತೋರಿಸುವ ಕಾಲ ಬಂದಿದೆ. ಆದರೆ, ಅದನ್ನು ಯುದ್ಧದ ಮೂಲಕ ಪ್ರದರ್ಶಿಸುವ ಅಗತ್ಯವಿಲ್ಲ ಎಂದು ಹೇಳಿದರು. [ಕೆಂಪುಕೋಟೆ ಮೇಲೆ ಮೋದಿ ಹೇಳಿದ್ದೇನು?]
The entire nation may not be in uniform but we stand firmly behind you & are proud of you: PM to Armed Forces of India
— PMO India (@PMOIndia) August 16, 2014 

Click it and Unblock the Notifications
