ಏ.5 ರಂದೇ ನರೇಂದ್ರ ಮೋದಿ ಚಿತ್ರ ತೆರೆಗೆ, ಟ್ರೈಲರ್ ಇಲ್ಲಿದೆ ನೋಡಿ!

ಮುಂಬೈ, ಮಾರ್ಚ್ 21: ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧಾರಿತ ಚಲನಚಿತ್ರ, 'ಪಿಎಂ ನರೇಂದ್ರ ಮೋದಿ' ಚಿತ್ರ ಏಪ್ರಿಲ್ 12 ರ ಬದಲಾಗಿ ಏಪ್ರಿಲ್ 5 ಕ್ಕೇ ಬಿಡುಗಡೆಯಾಗಲಿದೆ.

ಏಪ್ರಿಲ್ 11 ರಿಂದ ಲೋಕಸಭಾ ಚುನಾವಣೆ ಆರಂಭವಾಗಲಿರುವುದರಿಂದ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಚುನಾವಣೆ ಮುಗಿದ ಮೇಲೆ ಚಿತ್ರ ಬಿಡುಗಡೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಚುನಾವಣಾ ಆಯೋಗದ ಮೊರೆಹೋಗಿದ್ದವು. ಆದರೆ ಚಿತ್ರ ತಂಡ ಜಾಗರೂಕತೆಯ ನಡೆ ಇಟ್ಟು, ಚುನಾವಣೆ ಆರಂಭವಾಗುವ ಆರು ದಿನ ಮೊದಲೇ ಚಿತ್ರವನ್ನು ಬಿಡುಗಡೆ ಮಾಡಲು ಮುಂದಾಗಿದೆ. ಅದರ ಅಧಿಕೃತ ಟ್ರೈಲರ್ ಸಹ ಬುಧವಾರ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೆಲವೇ ಸಮಯದಲ್ಲಿ 22 ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

PM Narendra Modi biopic to hit screen on April 5, here is trailer

ಈ ಚಿತ್ರದಲ್ಲಿ ನರೇಂದ್ರ ಮೋದಿ ಅವರ ಪಾತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೇರಾಯ್ ಅವರು ನಟಿಸಿದ್ದು, ಒಮಂಗ್ ಕುಮಾರ್ ಅವರು ಚಿತ್ರವನ್ನು ನಿರ್ದೇಶಿಸಿದ್ದಾರೆ. ಒಮಂಗ್ ಅವರ ಮೇರಿಕೋಮ್ ಮತ್ತು ರಸಬ್ಜಿತ್ ಚಿತ್ರಗಳು ಸಾಕಷ್ಟು ಸುದ್ದಿ ಮಾಡಿದ್ದವು. ಕಳೆದ 2018 ರಲ್ಲೇ ಚಿತ್ರದ ಚಿತ್ರೀಕರಣ ಆರಂಭವಾಗಿತ್ತು, ನರೇಂದ್ರ ಮೋದಿ ಆರೆಸ್ಸೆಸ್ ನ ಸಾಮಾನ್ಯ ಪ್ರಚಾರಕರಾಗಿ ನಂತರ ಪ್ರಧಾನಿ ಹುದ್ದೆಯವರೆಗೆ ಬೆಳೆದ ಹಾದಿಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+