ಏಪ್ರಿಲ್‌ 1ರಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ಮುಂಬೈ, ಫೆಬ್ರವರಿ 28 : ಇಂಡಿಯನ್ ಆಯಿಲ್ ಕಾರ್ಪೊರೇಷನ್ ಬಿಎಸ್-6 ಗುಣಮಟ್ಟದ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಮಾಡುವುದಾಗಿ ಘೋಷಣೆ ಮಾಡಿದೆ. ಇದರಿಂದಾಗಿ ಏಪ್ರಿಲ್‌ 1ರಿಂದ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಹೆಚ್ಚಾಗಲಿದೆ.

Recommended Video

      Oil firms to hike price from April 1st

      ಐಓಸಿ ಭಾರತದ ಅತಿ ದೊಡ್ಡ ಇಂಧನ ಪೂರೈಕೆದಾರ. "ಸಲ್ಫರ್ ಅಂಶ ಕಡಿಮೆ ಇರುವ ಪೆಟ್ರೋಲ್ ಮತ್ತು ಡೀಸೆಲ್ ಉತ್ಪಾದನೆಗಾಗಿ 17,000 ಕೋಟಿ ವೆಚ್ಚದಲ್ಲಿ ಸಂಸ್ಕರಣಾ ಘಟಕಗಳನ್ನು ನವೀಕರಣ ಮಾಡಿದೆ" ಎಂದು ಐಓಸಿ ಅಧ್ಯಕ್ಷ ಸಂಜೀವ್ ಸಿಂಗ್ ಹೇಳಿದ್ದಾರೆ.

      ಏಪ್ರಿಲ್ 1ರಿಂದ ಬಿಎಸ್-6 ಗುಣಮಟ್ಟದ ಪೆಟ್ರೋಲ್, ಡಿಸೇಲ್ ಮಾರುಕಟ್ಟೆಗೆ ಬರಲಿದೆ ಎಂದು ಐಓಸಿ ಹೇಳಿದೆ. ಘಟಕಗಳನ್ನು ನವೀಕರಣ ಮಾಡಿರುವ ಕಾರಣದಿಂದಾಗಿ ವೆಚ್ಚವೂ ಅಧಿಕವಾಗಲಿದ್ದು, ಇದರ ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೂ ಏರಿಕೆಯಾಗಲಿದೆ.

      Get Ready To Pay More For Diesel And Petrol

      ಪ್ರಸ್ತುತ ಬಳಸುವ ಪೆಟ್ರೋಲ್ ಮತ್ತು ಡೀಸೆಲ್‌ನಲ್ಲಿ 50 ಪಿಪಿಎಂ ಸಲ್ಫರ್ ಅಂಶವಿದೆ. ಬಿಎಸ್‌-6 ಗುಣ್ಣಮಟ್ಟದ ತೈಲ ಕೇವಲ 10 ಪಿಪಿಎಂ ಸಲ್ಫರ್ ಅಂಶ ಒಳಗೊಂಡಿರಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಎಷ್ಟು ಏರಿಕೆಯಾಗಲಿದೆ? ಎಂಬುದನ್ನು ಇನ್ನೂ ಐಓಸಿ ಹೇಳಿಲ್ಲ.

      ದೇಶದ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಸಂಸ್ಕರಣ ಘಟಕಗಳ ನವೀಕರಣಕ್ಕಾಗಿ ಒಟ್ಟು 35,000 ಹೂಡಿಕೆ ಮಾಡಿವೆ. ಅದರಲ್ಲಿ ಐಓಸಿ ಒಂದೇ 17,000 ಕೋಟಿ ರೂ. ವ್ಯಯಮಾಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+