ಮಹಾರಾಷ್ಟ್ರದಲ್ಲಿ ಯಾವ ದುಷ್ಯಂತ್ ಇಲ್ಲ: ಬಿಜೆಪಿಗೆ ಶಿವಸೇನಾ ಟಾಂಟ್
ಮುಂಬೈ, ಅಕ್ಟೋಬರ್ 29: ಮಹಾರಾಷ್ಟ್ರದಲ್ಲಿ ಯಾವ ದುಷ್ಯಂತನೂ ಇಲ್ಲ, ಯಾರ ತಂದೆಯೂ ಜೈಲಿಗೆ ಹೋಗಿಲ್ಲ ಎಂದು ಶಿವಸೇನಾ ಬಿಜೆಪಿಗೆ ಟಾಂಟ್ ಕೊಟ್ಟಿದೆ.
ಮಹಾರಾಷ್ಟ್ರದಲ್ಲಿ ಬಹುಮತ ದೊರೆತಿದ್ದರೂ ಕೂಡ ಸರ್ಕಾರ ರಚನೆ ಮಾಡದ ಹಿನ್ನೆಲೆಯಲ್ಲಿ ಶಿವಸೇನಾ ಮುಖ್ಯಸ್ಥ ಸಂಜಯ್ ರೌತ್ ಬಿಜೆಪಿ ವಿರುದ್ಧ ಗುಡುಗಿದ್ದಾರೆ.
ಇಲ್ಲಿ ನಾವು 'ಧರ್ಮ ಮತ್ತು ಸತ್ಯ' ರಾಜಕಾರಣ ಮಾಡುತ್ತೇವೆ. ಇಲ್ಲಿ ಯಾವ ದುಷ್ಯಂತನೂ ಇಲ್ಲ ಯಾರ ತಂದೆಯೂ ಜೈಲಿಗೆ ಹೋಗಿಲ್ಲ. ಕಾಂಗ್ರೆಸ್ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಹೋಗಬಾರದು ಅಂತಹ ಪರಿಸ್ಥಿತಿಯನ್ನು ಶರದ್ ಪವಾರ್ ಸೃಷ್ಟಿಸಿದ್ದಾರೆ.

ಯಾರಿಗಾದರೂ ನಮ್ಮನ್ನು ಅಧಿಕಾರದಿಂದ ದೂರ ಇರಿಸುವ ಆಲೋಚನೆ ಇದ್ದರೆ ತಿಳಿಸಿಬಿಡಿ, ನಾವು ಅದನ್ನು ಸ್ವೀಕರಿಸುತ್ತೇವೆ. ಲೋಕಸಭಾ ಚುನಾವಣೆ ಮುನ್ನ ಏನೇನು ಕಾರ್ಯಗಳನ್ನು ಮಾಡಬೇಕು ಅಂದುಕೊಂಡಿದ್ದೆವೋ ಆ ಕಾರ್ಯಗಳು ನಡೆಯುವುದು ಮಾತ್ರ ನಮಗೆ ಮುಖ್ಯ ಎಂದಿದ್ದಾರೆ.
ಬಿಜೆಪಿಯು ಹರ್ಯಾಣದಲ್ಲಿ ಬಹುಮತವನ್ನು ಸಾಬೀತುಪಡಿಸುವಲ್ಲಿ ಸೋತಿತ್ತು ಬಳಿಕ ಜೆಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದೆ. ದುಷ್ಯಂತ್ ಚೌತಾಲಾ ಅವರನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.
ಬಿಜೆಪಿಯು ಜೆಜೆಪಿ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುತ್ತಿದ್ದ ಸಂದರ್ಭದಲ್ಲಿ ಅಜಯ್ ಚೌತಾಲಾ ಅವರು ಜೈಲಿನಲ್ಲಿದ್ದ ವಿಷಯವನ್ನು ವಿರೋಧಪಕ್ಷದವರು ಪ್ರಸ್ತಾಪಿಸಿದ್ದರು. ಬಳಿಕ ಅಜಯ್ ಚೌತಾಲಾ ಅವರು ಫರ್ಲೋ ಮೇಲೆ ಹೊರಗೆ ಬಂದಿದ್ದರು.
ನಮಗೆ ಇತರ ಆಯ್ಕೆಗಳಿವೆ, ಆದರೆ ಪರ್ಯಾಯ ಮಾರ್ಗವನ್ನು ಸ್ವೀಕರಿಸುವ ಪಾಪವನ್ನು ಮಾಡಲು ನಾವು ಬಯಸುವುದಿಲ್ಲ. ಶಿವಸೇನೆ ಯಾವಾಗಲೂ ಸತ್ಯದ ರಾಜಕೀಯವನ್ನು ನಂಬಿದೆ, ನಾವು ಅಧಿಕಾರಕ್ಕಾಗಿ ಆಸೆ ಪಟ್ಟಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications