E-Rickshaws: ಬ್ಯಾಟರಿ ಚಾಲಿತ ವಾಹನಗಳ ಭದ್ರತೆಗೆ ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ! ಆಪಲ್-ಗೂಗಲ್ ಸೇರಿ 7 ಅಪ್ಲಿಕೇಶನ್ ಬ್ಯಾನ್
E Rickshaws: ಕೇಂದ್ರ ಸರ್ಕಾರವು ಬ್ಯಾಟರಿ ಚಾಲಿತ ವಾಹನಗಳಿಗೆ ಸಂಬಂಧಿಸಿದಂತೆ ಮಹತ್ವದ ಆದೇಶವನ್ನು ಮಾಡಿದೆ. ಬ್ಯಾಟರಿ ಚಾಲಿತ ವಾಹನಗಳನ್ನು ದೂರದಿಂದಲೇ ನಿಷ್ಕ್ರಿಯಗೊಳಿಸಲು ಬಳಸಲಾಗುತ್ತಿರುವ ಕನಿಷ್ಠ ಏಳು ಮೊಬೈಲ್ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರವು ಆಪಲ್ ಮತ್ತು ಗೂಗಲ್‌ಗೆ ನಿರ್ದೇಶನ ನೀಡಿದೆ. ಸ್ಮಾರ್ಟ್‌ಫೋನ್‌ನಲ್ಲಿ ಕೇವಲ ಒಂದು ಟ್ಯಾಪ್ ಮಾಡುವ ಮೂಲಕ ಇ-ರಿಕ್ಷಾಗಳನ್ನು ದೂರದಿಂದಲೇ ನಿಲ್ಲಿಸುವ ಕೆಲವೊಂದು ವಿಡಿಯೋಗಳು ಭಾರತೀಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ವಿಡಿಯೋಗಳು ವೈರಲ್ ಆದ ಕೆಲವೇ ದಿನಗಳಲ್ಲಿ ಸರ್ಕಾರವು ಈ ಕ್ರಮ ಕೈಗೊಂಡಿದೆ.
BAT-BMS, Lossigy ಮತ್ತು Epoch-i-ion ಸೇರಿದಂತೆ ಕೆಲವು ಮೊಬೈಲ್ ಅಪ್ಲಿಕೇಶನ್‌ಗಳು ಸುರಕ್ಷತಾವಲ್ಲದ ಬ್ಲೂಟೂತ್ ಆಧಾರಿತ ಬ್ಯಾಟರಿ ನಿರ್ವಹಣಾ ವ್ಯವಸ್ಥೆಗಳಿಗೆ (BMS) ಕನೆಕ್ಟ್ ಆಗುವ ಅವಕಾಶ ನೀಡುತ್ತವೆ. ಈ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಪ್ರಯಾಣದ ಮಧ್ಯದಲ್ಲೇ ಬ್ಯಾಟರಿ ಚಾಲಿತ ವಾಹನಗಳನ್ನು ದೂರದಿಂದಲೇ ಸ್ವಿಚ್ ಆಫ್ ಮಾಡಲಾಗುತ್ತಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೇ ರೀತಿಯಲ್ಲಿ ದುರುಪಯೋಗಕ್ಕೆ ಅವಕಾಶ ಕಲ್ಪಿಸುವ ಇತರೆ ಯಾವುದೇ ಅಪ್ಲಿಕೇಶನ್‌ಗಳು ಪತ್ತೆಯಾದರೂ ಅವುಗಳ ಮೇಲೂ ನಿರ್ಬಂಧ ಹೇರಲಾಗುತ್ತದೆ ಎಂದು ಹೇಳಲಾಗಿದೆ.

ಈ ಪ್ರಕರಣದಲ್ಲಿ ಆನ್‌ಲೈನ್ ವಿಷಯ ಅಥವಾ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಲು ಸಾಮಾನ್ಯವಾಗಿ ಬಳಸುವ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿಲ್ಲ. "ಈ ವಿಷಯವು ಸೆಕ್ಷನ್ 69A ವ್ಯಾಪ್ತಿಗೆ ಬರುವುದಿಲ್ಲ. ಬದಲಾಗಿ, ಈ ಅಪ್ಲಿಕೇಶನ್‌ಗಳನ್ನು ತಮ್ಮ ವೇದಿಕೆಯಲ್ಲಿ ಮುಂದುವರಿಸಿ ಹೋಸ್ಟ್ ಮಾಡುವುದು ಸಂಭಾವ್ಯ ಕಾನೂನು ಉಲ್ಲಂಘನೆಯಾಗಬಹುದು ಎಂಬ ನಿಲುವನ್ನು ಸರ್ಕಾರ ತೆಗೆದುಕೊಂಡಿದೆ. ಇದರಿಂದ ಮಧ್ಯವರ್ತಿಗಳಾಗಿ (Intermediaries) ಆಪಲ್ ಮತ್ತು ಗೂಗಲ್‌ಗೆ ಲಭ್ಯವಿರುವ ಕಾನೂನು ರಕ್ಷಣೆ (Safe Harbour Protection) ಕಳೆದುಹೋಗುವ ಸಾಧ್ಯತೆ ಇದೆ.
"ಇದು ಕಾನೂನಿನ ಸಂಭಾವ್ಯ ಉಲ್ಲಂಘನೆಯಾಗಿರುವುದರಿಂದ, 'ಸೇಫ್ ಹಾರ್ಬರ್' ರಕ್ಷಣೆಯನ್ನು ಹಿಂಪಡೆಯಬಹುದು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79 ಅಡಿಯಲ್ಲಿ, ಕಾನೂನುಬದ್ಧ ಸೂಚನೆ ಬಂದ ಬಳಿಕವೂ ಅಗತ್ಯ ಕ್ರಮ ಕೈಗೊಳ್ಳದಿದ್ದರೆ, ಮೂರನೇ ವ್ಯಕ್ತಿಯ ವಿಷಯಕ್ಕೆ ಸಂಬಂಧಿಸಿದ ಹೊಣೆಗಾರಿಕೆಯಿಂದ ವೇದಿಕೆಗಳಿಗೆ ದೊರೆಯುವ ಕಾನೂನು ರಕ್ಷಣೆಯನ್ನು ಹಿಂತೆಗೆದುಕೊಳ್ಳುವ ಅವಕಾಶವಿದೆ ಎಂದು ಹೇಳಲಾಗಿದೆ.
ಜನದಟ್ಟಣೆಯ ರಸ್ತೆಯಲ್ಲಿ ಪ್ರಯಾಣಿಕರು ಇರುವಾಗ ಇ-ರಿಕ್ಷಾ ಇದ್ದಕ್ಕಿದ್ದಂತೆ ವಿದ್ಯುತ್ ಕಡಿತಗೊಂಡರೆ ಅದರಿಂದ ಭಾರೀ ದೊಡ್ಡ ಅನಾಹುತವೇ ಸಂಭವಿಸಲಿದೆ. ಯಾರಾದರೂ ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬಟನ್ ಟ್ಯಾಪ್ ಮಾಡಿದರೆ ದೊಡ್ಡ ಸಮಸ್ಯೆ ಆಗಲಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಹಲವಾರು ಬ್ಯಾಟರಿ ನಿರ್ವಹಣಾ ಅಪ್ಲಿಕೇಶನ್‌ಗಳ ಮೇಲೆ ಕ್ರಮ ಕೈಗೊಳ್ಳಲು ಪ್ರೇರೇಪಿಸಿದ ಆತಂಕಕಾರಿ ಸನ್ನಿವೇಶವೆಂದರೆ ಈಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ.
ವಿದ್ಯುತ್ ವಾಹನ ಬ್ಯಾಟರಿಗಳನ್ನು ದೂರದಿಂದಲೇ ನಿಷ್ಕ್ರಿಯಗೊಳಿಸಲು ಅವುಗಳನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂಬ ವರದಿಗಳ ನಂತರ ಸರ್ಕಾರವು ಏಳು ಬ್ಯಾಟರಿ ನಿರ್ವಹಣಾ ವ್ಯವಸ್ಥೆ (BMS) ಅಪ್ಲಿಕೇಶನ್‌ಗಳನ್ನು ತಮ್ಮ ಅಪ್ಲಿಕೇಶನ್ ಸ್ಟೋರ್‌ಗಳಿಂದ ತೆಗೆದುಹಾಕುವಂತೆ ಗೂಗಲ್ ಮತ್ತು ಆಪಲ್‌ಗೆ ನಿರ್ದೇಶನ ನೀಡಿದೆ.














Click it and Unblock the Notifications