ಮನೆ ಶಿಫ್ಟಿಂಗ್ ವೇಳೆ ಲಿಫ್ಟ್ ಬಂದ್! ಅಪಾರ್ಟ್‌ಮೆಂಟ್ ಸೊಸೈಟಿ ವಿರುದ್ಧ ಬೆಂಗಳೂರಿನ ಟೆಕ್ಕಿ ಆಕ್ರೋಶ
ಬೆಂಗಳೂರು: ಬಾಡಿಗೆ ಮನೆಗೆ ಪೀಠೋಪಕರಣಗಳನ್ನು ಸ್ಥಳಾಂತರಿಸುವ ವೇಳೆ ಅಪಾರ್ಟ್‌ಮೆಂಟ್‌ನ ಲಿಫ್ಟ್‌ನ್ನು ಉದ್ದೇಶಪೂರ್ವಕವಾಗಿ ಬಂದ್ ಮಾಡಿದ್ದಾರೆ ಎಂದು ಆರೋಪಿಸಿದ ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಾಡಿಗೆದಾರರ ವಿರುದ್ಧ ಕೆಲ ಅಪಾರ್ಟ್‌ಮೆಂಟ್ ಸೊಸೈಟಿಗಳಲ್ಲಿ ಇರುವ ತಾರತಮ್ಯದ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.
ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಸಿದ್ಧಾರ್ಥ ಮುಖರ್ಜಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ, ಅಪಾರ್ಟ್‌ಮೆಂಟ್ ನಿರ್ವಹಣಾ ಸಮಿತಿಯ ವರ್ತನೆ ಸರಿ ಇಲ್ಲಾ ಎಂದು ಹೇಳಿದ್ದಾರೆ. ಮನೆ ಸಾಮಾನುಗಳನ್ನು ಮೇಲಿನ ಮಹಡಿಗೆ ಸ್ಥಳಾಂತರಿಸುವ ಸಮಯದಲ್ಲಿ ಲಿಫ್ಟ್ ಬಳಸಲು ಅವಕಾಶ ನೀಡದೆ, ಲಿಫ್ಟ್‌ನ್ನೇ ಸ್ಥಗಿತಗೊಳಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಸೊಸೈಟಿ ವಿರುದ್ದ ತಿರುಗಿಬಿದ್ದ ಅಪಾರ್ಟ್‌ಮೆಂಟ್ ನಿವಾಸಿ!
ವಿಡಿಯೊದಲ್ಲಿ ಮಾತಾನಾಡಿರುವ ಸಿದ್ದಾರ್ಥ, "ಫರ್ನಿಚರ್ ಶಿಫ್ಟ್ ಮಾಡಿದರೆ ಬೇರೆಯವರಿಗೆ ತೊಂದರೆಯಾಗುತ್ತದೆ ಎಂದು ಸೊಸೈಟಿ ಮ್ಯಾನೇಜ್‌ಮೆಂಟ್ ಲಿಫ್ಟ್ ಅನ್ನೇ ಬಂದ್ ಮಾಡಿದೆ!" ಎಂದು ಸೊಸೈಟಿ ನಿರ್ವಹಣಾ ಸಮಿತಿ ಹೇಳಿದೆ. ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಹಿಡಿದುಕೊಳ್ಳುವುದು ಬಿಟ್ಟು, ಈ ರೀತಿ ಲಿಫ್ಟ್ ಸೇವೆಯನ್ನೇ ಸಂಪೂರ್ಣವಾಗಿ ನಿಲ್ಲಿಸುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.
ಇದರಿಂದ ಕೇವಲ ತಮಗಷ್ಟೇ ಅಲ್ಲ "ಈ ನಿರ್ಧಾರದಿಂದ ಯಾರಿಗೂ ಪ್ರಯೋಜನವಾಗಿಲ್ಲ, ಬದಲಿಗೆ 3ನೇ ಮಹಡಿಯವರೆಗಿನ ನಿವಾಸಿಗಳೂ ಮೆಟ್ಟಿಲು ಹತ್ತಿ ಹೋಗುವಂತಾಗಿದೆ," ಎಂದು ಸಂತ್ರಸ್ತರೊಬ್ಬರು ವಿಡಿಯೊದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಬಾಡಿಗೆದಾರರ ಮೇಲಿನ ತಾರತಮ್ಯವೇ ಇಂತಹ ಪರಿಸ್ಥಿತಿಗೆ ಕಾರಣ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಬಾಡಿಗೆದಾರರೆಂದರೆ ಅಷ್ಟಕಷ್ಟೇನಾ? ಸೋಷಿಯಲ್ ಮೀಡಿಯಾದಲ್ಲಿ ಸಿದ್ಧಾರ್ಥ್ ಆಕ್ರೋಶ!
ವಿಡಿಯೊವನ್ನು ಹಂಚಿಕೊಳ್ಳುವಾಗ "The tenant hate is real" ಎಂದು ಶೀರ್ಷಿಕೆ ನೀಡಿರುವ ಸಿದ್ಧಾರ್ಥ, ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ಬಾಡಿಗೆದಾರರನ್ನು ಮನೆ ಮಾಲೀಕರಿಗಿಂತ ಕಡಿಮೆ ಗೌರವದಿಂದ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
"ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ಬಾಡಿಗೆದಾರರನ್ನು ಮನೆ ಮಾಲೀಕರಿಗಿಂತ ಕಡಿಮೆ ಗೌರವದಿಂದ ನಡೆಸಿಕೊಳ್ಳಲಾಗುತ್ತಿದೆ" ಎಂದು ಸಿದ್ಧಾರ್ಥ್ ಎಂಬುವವರು ವಿಡಿಯೊ ಹಂಚಿಕೊಳ್ಳುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಈ ವಿಡಿಯೊಗೆ ಅವರು "ಬಾಡಿಗೆದಾರರ ಮೇಲಿನ ದ್ವೇಷ ನಿಜ" ಎಂದು ಕ್ಯಾಪ್ಷನ್ ನೀಡಿದ್ದು, ಬಾಡಿಗೆ ಮನೆಗಳಲ್ಲಿ ವಾಸಿಸುವವರು ಎದುರಿಸುವ ತಾರತಮ್ಯದ ಬಗ್ಗೆ ನೆಟ್ಟಿಗರ ಗಮನ ಸೆಳೆದಿದ್ದಾರೆ. ನಿಮ್ಮ ಅಪಾರ್ಟ್‌ಮೆಂಟ್‌ಗಳಲ್ಲೂ ಹೀಗಾಗುತ್ತದೆಯೇ?
ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾದ ವಿಡಿಯೊ: ಬಾಡಿಗೆದಾರರ ಕಷ್ಟಕ್ಕೆ ನೆಟ್ಟಿಗರು ಸಾಥ್!
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೊವೊಂದು ನೆಟ್ಟಿಗರ ನಡುವೆ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. "ಮೆಟ್ರೋ ನಗರಗಳಲ್ಲಿ ಬಾಡಿಗೆ ಮನೆಗಳಲ್ಲಿ ಇರುವವರ ಪರಿಸ್ಥಿತಿ ಹೀಗೆ ಇರುತ್ತದೆ" ಎಂದು ಹಲವರು ವಿಡಿಯೊ ನೋಡಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಅಪಾರ್ಟ್‌ಮೆಂಟ್ ಅಥವಾ ಸೊಸೈಟಿಗಳ ಕೆಲವು ನಿವೃತ್ತ ನಿರ್ವಾಹಕರು ರೂಲ್ಸ್ ಹೆಸರಿನಲ್ಲಿ ಜನರಿಗೆ ಅನಗತ್ಯವಾಗಿ ತೊಂದರೆ ಕೊಡುತ್ತಾರೆ ಎಂದು ಕಮೆಂಟ್ ಬಾಕ್ಸ್‌ನಲ್ಲಿ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಸೊಸೈಟಿ ಪರವೂ ವಾದ
ಮತ್ತೊಂದೆಡೆ, ಕೆಲ ಬಳಕೆದಾರರು ಸೊಸೈಟಿ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಭಾರವಾದ ಪೀಠೋಪಕರಣಗಳನ್ನು ಸಾಮಾನ್ಯ ಪ್ರಯಾಣಿಕರ ಲಿಫ್ಟ್‌ನಲ್ಲಿ ಸಾಗಿಸಿದರೆ ಲಿಫ್ಟ್‌ಗೆ ಹಾನಿಯಾಗುವ ಸಾಧ್ಯತೆ ಇದೆ. ಇದರಿಂದ ಉಳಿದ ನಿವಾಸಿಗಳಿಗೆ ತೊಂದರೆಯಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸೊಸೈಟಿ ನಿಯಮದ ಪರ ನಿಂತ ನೆಟ್ಟಿಗರು
ಮತ್ತೊಂದೆಡೆ, ಸೊಸೈಟಿಯ ಈ ಕ್ರಮವನ್ನು ಕೆಲ ಬಳಕೆದಾರರು ಸೂಕ್ತ ಎಂದಿದ್ದಾರೆ. ಸಾಮಾನ್ಯ ಲಿಫ್ಟ್‌ಗಳಲ್ಲಿ ಅತಿಯಾದ ತೂಕದ ಸಾಮಗ್ರಿಗಳನ್ನು ಸಾಗಿಸುವುದರಿಂದ ಲಿಫ್ಟ್‌ಗಳು ಕೆಟ್ಟುಹೋಗಬಹುದು ಮತ್ತು ಇದು ಇಡೀ ಅಪಾರ್ಟ್‌ಮೆಂಟ್‌ನ ನಿವಾಸಿಗಳ ದೈನಂದಿನ ಓಡಾಟಕ್ಕೆ ಅಡ್ಡಿಪಡಿಸಬಹುದು. ಆದ್ದರಿಂದ ಸಾರ್ವಜನಿಕ ಆಸ್ತಿಯ ರಕ್ಷಣೆ ಹಾಗೂ ನಿವಾಸಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ಸರಿಯಾಗಿದೆ ಎಂದು ಅವರು ಹೇಳಿದ್ದಾರೆ.
"ಮನೆ ಶಿಫ್ಟ್ ಮಾಡುವಾಗ ಲಿಫ್ಟ್ ಬಳಸಲು ಬಿಡದೆ, ಹೆಚ್ಚಿನ ಕೂಲಿ ಕೊಟ್ಟು ಮೆಟ್ಟಿಲುಗಳ ಮೂಲಕ ಲಗೇಜ್ ಸಾಗಿಸಬೇಕಾಯಿತು!" - ಹೀಗೆ ಹಲವರು ಅಪಾರ್ಟ್‌ಮೆಂಟ್‌ಗಳಲ್ಲಿ ತಮಗಾದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ವಿವಾದ ಈಗ ಅಪಾರ್ಟ್‌ಮೆಂಟ್‌ಗಳ ಕಠಿಣ ರೂಲ್ಸ್ ಹಾಗೂ ಬಾಡಿಗೆಗೆ ಇರುವವರ ಹಕ್ಕುಗಳ ನಡುವಿನ ವ್ಯತ್ಯಾಸವನ್ನು ಚರ್ಚೆ ಮಾಡುವಂತಾಗಿದೆ. ನಿಯಮಗಳ ಹೆಸರಲ್ಲಿ ನಿವಾಸಿಗಳ ನೆಮ್ಮದಿ ಕೆಡಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಎಲ್ಲೆಡೆ ಕೇಳಿಬರುತ್ತಿದೆ.














Click it and Unblock the Notifications