500 ಕಡೆ ಅರ್ಜಿ ಹಾಕಿದ್ರೂ ಸಿಗದ ಕೆಲಸ: ಕೊನೆಗೆ ರಾಪಿಡೋ ಬೈಕ್ ಓಡಿಸತೊಡಗಿದ ಕಂಪ್ಯೂಟರ್ ಸೈನ್ಸ್ ಪದವೀಧರ

ಇತ್ತೀಚಿನ ದಿನಗಳಲ್ಲಿ ಪದವಿ ಮುಗಿಸಿ ಹೊರಬರುವ ಯುವಜನತೆಗೆ ಉದ್ಯೋಗವನ್ನು ಹುಡುಕುವುದೇ ದೊಡ್ಡ ಸವಾಲಾಗಿದೆ. ಎಷ್ಟೇ ಉತ್ತಮ ಅಂಕಗಳನ್ನು ಪಡೆದಿದ್ದರೂ, ತೀವ್ರ ಪೈಪೋಟಿ ಮತ್ತು ನಿಧಾನ ನೇಮಕಾತಿ ಪ್ರಕ್ರಿಯೆಯಿಂದ ಲಕ್ಷಾಂತರ ಯುವ ಉದ್ಯೋಗಾಕಾಂಕ್ಷಿಗಳು ಕಂಗೆಟ್ಟಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮುಂದೆ ಚನ್ನಾಗಿರುವ ಅವಕಾಶ ಸಿಗಬಹುದು ಎನ್ನುವ ನಂಬಿಕೆಯ ಮೇಲೆ ಯುವಕರು, ಜೀವನ ನಿರ್ವಹಣೆಗಾಗಿ ಸಿಕ್ಕ ಕೆಲಸವನ್ನು ಮಾಡುತ್ತಾ ತಮ್ಮ ಉದ್ಯೋಗದ ಹುಡುಕಾಟವನ್ನು ಮುಂದುವರಿಸುತ್ತಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ಇಂತಹದ್ದೇ ಒಂದು ಕಥೆ ದೇಶದ ಯುವಜನತೆ ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆಗೆ ಕನ್ನಡಿ ಹಿಡಿದಿದೆ.

Computer Science

ಎಕ್ಸ್ ಬಳಕೆದಾರರಾದ ನೀರಜ್ ಎಂಬುವವರು ತಮ್ಮ ರಾಪಿಡೋ ಬೈಕ್ ಸವಾರನೊಂದಿಗೆ ನಡೆಸಿದ ಸಂಭಾಷಣೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗಿದೆ.

ಈ ವರ್ಷವಷ್ಟೇ ಕಂಪ್ಯೂಟರ್ ಸೈನ್ಸ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಪದವಿ ಮುಗಿಸಿದ ಯುವಕನೊಬ್ಬ, ನೂರಾರು ಕಡೆ ಅರ್ಜಿ ಸಲ್ಲಿಸಿದರೂ ಉದ್ಯೋಗ ಸಿಗದೆ ಬೈಕ್ ಟ್ಯಾಕ್ಸಿ ಓಡಿಸುತ್ತಿರುವ ಕಹಿ ಸತ್ಯ ಈ ಪೋಸ್ಟ್ ಮೂಲಕ ಬೆಳಕಿಗೆ ಬಂದಿದೆ.

500ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ: ಒಂದೂ ಕರೆ ಬರಲಿಲ್ಲ

ನೀರಜ್ ಅವರು ತಿಳಿಸಿರುವಂತೆ, ಕಳೆದ ವಾರ ಅವರು ರಾಪಿಡೋ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ್ದರು. ಈ ವೇಳೆ ಸವಾರನ ಹೆಲ್ಮೆಟ್ ಮೇಲಿದ್ದ ಕಾಲೇಜು ಸ್ಟಿಕ್ಕರ್ ನೋಡಿ ಇಬ್ಬರ ನಡುವೆ ಮಾತುಕತೆ ಆರಂಭವಾಗಿದೆ. ಆಗ ಆ ಸವಾರ, ತಾನು ಇದೇ ವರ್ಷ ಕಂಪ್ಯೂಟರ್ ಸೈನ್ಸ್‌ನಲ್ಲಿ ಫಸ್ಟ್‌ ಕ್ಲಾಸ್‌ನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿರುವುದಾಗಿ ಹೇಳಿದ್ದಾನೆ.

ಪದವಿ ಮುಗಿದ ಎರಡು ತಿಂಗಳಲ್ಲೇ ಕೈಲಿದ್ದ ಹಣವೆಲ್ಲಾ ಖಾಲಿಯಾದ ಕಾರಣ, ಆತ ಅನಿವಾರ್ಯವಾಗಿ ಪ್ರತಿದಿನ ಬೆಳಗ್ಗೆ 6 ಗಂಟೆಯಿಂದಲೇ ರಾಪಿಡೋ ರೈಡ್ ಮಾಡಲು ಆರಂಭಿಸಿದ್ದಾನೆ. ಆತ ಈಗಾಗಲೇ 500ಕ್ಕೂ ಹೆಚ್ಚು ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿದ್ದರೂ, ಯಾವುದೇ ಕಂಪನಿಯಿಂದ ಒಂದೇ ಒಂದು ಇಂಟರ್ವ್ಯೂ ಕಾಲ್ ಅಥವಾ ಪ್ರತಿಕ್ರಿಯೆ ಬಂದಿಲ್ಲ. 500ರ ನಂತರ ತಾನು ಅರ್ಜಿಗಳ ಲೆಕ್ಕ ಇಡುವುದನ್ನೇ ಬಿಟ್ಟುಬಿಟ್ಟೆ ಎಂದು ಆ ಯುವಕ ಅಳಲು ತೋಡಿಕೊಂಡಿದ್ದಾನೆ.

ಪೋಷಕರಿಗೆ ತಿಳಿಯದ ಕಹಿ ಸತ್ಯ

ಇಲ್ಲಿ ಮತ್ತೊಂದು ಅತ್ಯಂತ ಬೇಸರದ ಸಂಗತಿಯೆಂದರೆ, ಆ ಯುವಕ ತಾನು ರಾಪಿಡೋ ಓಡಿಸುತ್ತಿರುವ ವಿಚಾರವನ್ನು ಹೆತ್ತ ಪೋಷಕರಿಂದ ಮುಚ್ಚಿಟ್ಟಿದ್ದಾನೆ. ಮಗ ಮನೆಯಲ್ಲೇ ಕುಳಿತು ಇಂಟರ್ವ್ಯೂಗಳಿಗೆ ಸಿದ್ಧತೆ ನಡೆಸುತ್ತಿದ್ದಾನೆ ಎಂದೇ ಆತನ ಪೋಷಕರು ಭಾವಿಸಿದ್ದಾರೆ. ಈ ಕಹಿ ಸತ್ಯವನ್ನು ಪೋಷಕರಿಗೆ ಹೇಗೆ ಹೇಳಬೇಕು, ಅದನ್ನು ಅವರು ಹೇಗೆ ಸ್ವೀಕರಿಸುತ್ತಾರೋ ಹಾಗೂ ಮನೆಯಲ್ಲಿ ಪರಿಸ್ಥಿತಿ ಮತ್ಯಾವ ರೂಪ ಪಡೆದುಕೊಳ್ಳುತ್ತದೋ ಎಂಬ ಆತಂಕದಿಂದ ಆತ ಸತ್ಯವನ್ನು ಮರೆಮಾಚಿದ್ದಾನೆ.

ವಿಶೇಷವೆಂದರೆ, ಆ ಯುವಕ ಈ ಪರಿಸ್ಥಿತಿಯ ಬಗ್ಗೆ ಎಲ್ಲೂ ಅತಿಯಾದ ನಾಟಕೀಯ ಭಾವನೆ ಪ್ರದರ್ಶಿಸಿಲ್ಲ. ಬದಲಿಗೆ, "ಸದ್ಯಕ್ಕೆ ಮಾರುಕಟ್ಟೆಯ ಪರಿಸ್ಥಿತಿಯೇ ಹೀಗಿದೆ" ಎಂದು ಅತ್ಯಂತ ಸರಳವಾಗಿ ಹೇಳುತ್ತಾ, ಇದೆಲ್ಲವೂ ತನಗೆ ಸೀದಾ ಸಾದಾ ಬದುಕಿನ ಭಾಗ ಎಂಬಂತೆ ಬೈಕ್ ಚಲಾಯಿಸಿಕೊಂಡು ಹೋಗಿದ್ದಾನೆ.

ಯುವ ಪದವೀಧರರ ಮುಂದಿರುವ ಸವಾಲುಗಳು

ಈ ಕಥೆ ಕೇವಲ ಒಬ್ಬ ರಾಪಿಡೋ ರೈಡರ್‌ನದ್ದಲ್ಲ, ಬದಲಿಗೆ ಇಂದು ಭಾರತದಾದ್ಯಂತ ವಿವಿಧ ವಿಷಯಗಳಲ್ಲಿ ಪದವಿ ಮುಗಿಸಿ ಹೊರಬರುತ್ತಿರುವ ಸಾವಿರಾರು ಯುವ ವೃತ್ತಿಪರರ ಸ್ಥಿತಿಯಿದು. ಪದವಿ ಮತ್ತು ಕೌಶಲ್ಯಗಳಿದ್ದರೂ ಸಹ ಉದ್ಯೋಗ ಮಾರುಕಟ್ಟೆಯಲ್ಲಿ ನಿರೀಕ್ಷಿತ ಅವಕಾಶಗಳು ಸಿಗುತ್ತಿಲ್ಲ.

ಈ ಕಾರಣದಿಂದಾಗಿ ಹಣಕಾಸಿನ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಯುವಕರು ಇಂತಹ ಗಿಗ್ ವರ್ಕ್ ಅಥವಾ ಪಾರ್ಟ್ ಟೈಮ್ ಕೆಲಸಗಳನ್ನು ಆಶ್ರಯಿಸುತ್ತಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಫ್ರೆಶರ್‌ಗಳಿಗೆ ಉದ್ಯೋಗದ ಕೊರತೆ ಇರುವುದು ಎಷ್ಟು ಗಂಭೀರ ಸಮಸ್ಯೆಯಾಗಿದೆ ಎಂಬುದನ್ನು ತಡವಾಗಿಯಾದರೂ ನಾವೆಲ್ಲರೂ ಅರಿತುಕೊಳ್ಳಬೇಕಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+