ಒಳ್ಳೆ ಗಂಡ ಬೇಕೋ.. ಗುಲಾಮ ಬೇಕೋ?: ಈ ರೀತಿಯ ಹುಡುಗ ಬೇಕೆಂದು ಬೇಡಿಕೆ ಇಟ್ಟ ಯುವತಿಗೆ ನೆಟ್ಟಿಗರ ತರಾಟೆ
Viral Post: ಸಾಮಾಜಿಕ ಜಾಲತಾಣಗಳು ಈಗಿನ ದಿನಗಳಲ್ಲಿ ಕೇವಲ ಸಂವಹನ ಮಾಧ್ಯಮವಾಗಿ ಉಳಿದಿಲ್ಲ, ಬದಲಾಗಿದೆ ಸಮಾಜದ ವಿವಿಧ ಆಲೋಚನೆಗಳು ಮತ್ತು ಬದಲಾಗುತ್ತಿರುವ ಧೋರಣೆಗಳನ್ನು ಪ್ರತಿಬಿಂಬಿಸುವ ಕನ್ನಡಿಯಾಗಿವೆ. ಅದರಲ್ಲೂ ಈಗ ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಜನರ ನಿರೀಕ್ಷೆಗಳು ಎಷ್ಟು ಬದಲಾಗಿವೆ ಎಂಬುದಕ್ಕೆ ಮಹಿಳೆಯೊಬ್ಬರು ಟ್ವಿಟ್‌ನಲ್ಲಿ ಹಂಚಿಕೊಂಡಿರುವ ಈ ವಿಚಿತ್ರ ಪೋಸ್ಟ್ ಪ್ರಮುಖ ಸಾಕ್ಷಿಯಾಗಿದೆ. ಇದು ಇದೀಗ ಭಾರೀ ವೈರಲ್ ಆಗಿದೆ.
ವೇದಿಕಾ ಎಂಬ ಟ್ವಿಟ್ ಬಳಕೆದಾರರು ತಾನು ಮದುವೆಯಾಗುವ ವ್ಯಕ್ತಿಯಲ್ಲಿ ಇರಬೇಕಾದ 11 ಕಠಿಣ ಷರತ್ತುಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಇದು ಇಡೀ ಇದೀಗ ಸಖತ್ ಸದ್ದು ಮಾಡುತ್ತಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ. ಈಗಿನ ಕಾಲದ ಸಂಬಂಧಗಳಲ್ಲಿನ ನಿರೀಕ್ಷೆಗಳು ಮತ್ತು ವಾಸ್ತವದ ನಡುವಿನ ಅಂತರವನ್ನು ಈ ಘಟನೆಯಿಂದ ಮತ್ತೊಮ್ಮೆ ಮುಂಚೂಣಿಗೆ ಬಂದಂತಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭ
ಟ್ವಿಟರ್ ಬಳಕೆದಾರರಾದ ವೇದಿಕಾ ತಮಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ವೈಯಕ್ತಿಕವಾಗಿ ಸಂಪೂರ್ಣವಾಗಿ ಹೊಂದಿಕೊಳ್ಳುವ ವ್ಯಕ್ತಿಯನ್ನು ಹುಡುಕುತ್ತಿರುವುದಾಗಿ ತಿಳಿಸಿದ್ದಾರೆ. ಅವರ ಸುದೀರ್ಘ ಬೇಡಿಕೆಗಳ ಪಟ್ಟಿಯನ್ನು ನೋಡಿದವರು ಬೆಚ್ಚಿ ಬಿದ್ದಿದ್ದು, ಈ ಬಗ್ಗೆ ಭಾರಿ ಚರ್ಚೆಗಳು ಕೂಡ ಆರಂಭವಾಗಿವೆ.
ಈ ಹುಡುಗಿಯ ಪ್ರಕಾರ ಮದುವೆಯಾಗುವ ಹುಡುಗ ಹೇಗಿರಬೇಕು?
* ಕನ್ಯತ್ವ (Virgin) ಹೊಂದಿರಬೇಕು.
* ತಿಂಗಳಿಗೆ ಕನಿಷ್ಠ 2 ಲಕ್ಷ ರೂಪಾಯಿ ಸಂಬಳ ಗಳಿಸಬೇಕು.
* ಸಹಜವಾಗಿಯೇ ಸುಂದರವಾಗಿರಬೇಕು
* ಎತ್ತರ 6 ಅಡಿ ಇರಬೇಕು
* ಅಡುಗೆ ಮಾಡುವುದು ತಿಳಿದಿರಬೇಕು
* ಮಹಿಳಾ ದ್ವೇಷಿ ಆಗಿರಬಾರದು.
* ಸಾಮಾಜಿಕ ಜಾಲತಾಣಗಳಿಂದ ದೂರ ಇರಬೇಕು.
* ಯಾವುದೇ ಮಹಿಳಾ ಸ್ನೇಹಿತೆಯರು ಇರಬಾರದು.
* ಎಲ್ಲಿಗಾದರೂ ಹೋಗುವ ಮೊದಲು ಅನುಮತಿ ಕೇಳಬೇಕು.
* 24×7 ತನ್ನ ಲೈವ್ ಲೊಕೇಶನ್ ಹಂಚಿಕೊಳ್ಳಬೇಕು
* ವಿದೇಶ ಪ್ರವಾಸಗಳಿಗೆ ಕರೆದುಕೊಂಡು ಹೋಗಬೇಕು
ನೆಟ್ಟಿಗರು ಹೇಳೋದೇನು?
'ಇಂತಹ ಪುರುಷ ಎಲ್ಲಿ ಸಿಗುತ್ತಾರೆ?,' ಎಂದು ಈ ಪೋಸ್ಟ್‌ನಲ್ಲಿ ಪ್ರಶ್ನೆ ಕೇಳಲಾಗಿದೆ. ಸಾಮಾನ್ಯವಾಗಿ ಹೇಳುವುದಾದರೆ ಈ ಪಟ್ಟಿ ತುಂಬಾ ಸುದೀರ್ಘ ಮತ್ತು ಕಠಿಣವಾಗಿದೆ. ಇಂದಿನ ಆಧುನಿಕ ಜಗತ್ತಿನಲ್ಲಿ ಇಷ್ಟೆಲ್ಲಾ ಗುಣಗಳು ಒಬ್ಬನೇ ವ್ಯಕ್ತಿಯಲ್ಲಿ ಇರಬೇಕೆಂದರೆ, ಅಂತಹ ವ್ಯಕ್ತಿ ಸಿಗುವುದು ತುಂಬಾ ಅಪರೂಪ. ಮತ್ತೊಂದೆಡೆ ಈ ಬಗ್ಗೆ ನೆಟ್ಟಿಗರು ಕೂಡ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದು, ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಈ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಾರವಾಗಿ ಪ್ರತಿಕ್ರಿಯಿಸಿದ್ದಾರೆ. ಬಹುತೇಕರು ಈ ಬೇಡಿಕೆಗಳು ಅಸಹಜ ಮತ್ತು ಅವಾಸ್ತವಿಕ ಎಂದು ಕಿಡಿಕಾರಿದ್ದಾರೆ. 'ನೀವು ಹುಡುಕುತ್ತಿರುವುದು ಪತಿಯನ್ನಲ್ಲ, ಬದಲಿಗೆ ನಿಮ್ಮ ಅಧೀನದಲ್ಲಿರುವ ಒಬ್ಬ ಗುಲಾಮನನ್ನ. ಇಷ್ಟು ದೊಡ್ಡ ಪಟ್ಟಿ ನೀಡುವ ಮುನ್ನ ನಿಮ್ಮ ಸ್ವಂತ ಅರ್ಹತೆ ಏನು ಎಂಬುದನ್ನ ಸ್ಪಷ್ಟಪಡಿಸಿ,' ಎಂದು ಒಬ್ಬ ಬಳಕೆದಾರರು ಆಕ್ರೋಶ ಹೊರಹಾಕಿದ್ದಾರೆ.
I will only marry a Man who is:
— Vedika (@Crustology_) July 1, 2026
- Virgin
- Earns minimum 2 lakh per month
- Naturally handsome
- 6'0" perfect height
- Knows cooking
- Non-misogynist
- Doesn't use social media
- Has no female friends
- Asks permission before going anywhere
- Shares his live…
ಮತ್ತೊಬ್ಬರು ಹಾಸ್ಯದ ಧಾಟಿಯಲ್ಲಿ, 'ಇಷ್ಟೆಲ್ಲಾ ಗುಣಗಳಿರುವವರು ಬೇಕೆಂದರೆ ಅದು ಸಾಧ್ಯವಿಲ್ಲದೆ ಮಾತು,' ಎಂದು ಕಾಲೆಳೆದಿದ್ದಾರೆ. ಇನ್ನು ಕೆಲವರಂತೂ 'ಇಂತಹ ವ್ಯಕ್ತಿಗಳು ಭೂಮಿಯ ಮೇಲಿರಲು ಸಾಧ್ಯವಿಲ್ಲ,' ಅಂತಲೂ ತಮಷೆಯಿಂದಲೇ ಹೇಳುವ ಮೂಲಕ ಕಾಲೆಳೆದಿದ್ದಾರೆ. ಆದರೆ, ಈ ಚರ್ಚೆ ಕೇವಲ ವ್ಯಂಗ್ಯಕ್ಕೆ ಸೀಮಿತವಾಗಲಿಲ್ಲ.
ಕೆಲವರು ಈ ಯುವತಿಯ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಸಮಾಜದಲ್ಲಿ ಪುರುಷರು ಹೆಣ್ಣುಮಕ್ಕಳನ್ನು ನೋಡುವಾಗ ಸುಂದರವಾಗಿರಬೇಕು, ಅಡುಗೆ ಮಾಡಬೇಕು, ಉತ್ತಮ ನಡೆ ಇರಬೇಕು ಎಂದು ನಿರೀಕ್ಷಿಸುತ್ತಾರೆ. ಆದರೆ ಈ ಬಗ್ಗೆ ಹೆಚ್ಚಾಗಿ ಯಾರೂ ಪ್ರಶ್ನೆ ಮಾಡವುದಿಲ್ಲ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ, ಈ ವೈರಲ್ ಪೋಸ್ಟ್ ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.












Click it and Unblock the Notifications