ಸಚಿನ್ ವಾಜೆ ಜತೆ ಕಾಣಿಸಿದ್ದ ಮಹಿಳೆ ಯಾರು?: ಎನ್‌ಐಎಗೂ ಉತ್ತರ ಸಿಗದ ಪ್ರಶ್ನೆ

ಮುಂಬೈ, ಮಾರ್ಚ್ 24: ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಮುಂದೆ ಸ್ಫೋಟಕ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತಷ್ಟು ಸಂಗತಿಗಳನ್ನು ಕಲೆಹಾಕಿದೆ.

ಮುಕೇಶ್ ಅಂಬಾನಿ ಅವರ ಅಂಟಿಲಿಯಾ ನಿವಾಸದಿಂದ ಕೆಲವೇ ಕಿಮೀ ದೂರದಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ ಸಚಿವ್ ವಾಜೆ ಫೆ. 16 ರಿಂದ 20ರವರೆಗೂ ತಂಗಿದ್ದರು. ಈ ಸಂದರ್ಭದಲ್ಲಿ ವಾಜೆಯ ಹಿಂಬದಿಯಿಂದ ಮಹಿಳೆಯೊಬ್ಬಳು ಹೋಟೆಲ್‌ಗೆ ಪ್ರವೇಶಿಸುತ್ತಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. ಆಕೆಯ ವಿವರಗಳನ್ನು ಪತ್ತೆಹಚ್ಚಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

ಮನ್ಸುಖ್ ಹಿರೇನ್ ಅವರ ಸ್ಕಾರ್ಪಿಯೋ ಕಳ್ಳತನವಾಗುವ ಒಂದು ದಿನ ಹಿಂದಷ್ಟೇ ದಕ್ಷಿಣ ಮುಂಬೈನ ಐಷಾರಾಮಿ ಹೋಟೆಲ್‌ನಲ್ಲಿ ನಕಲಿ ಆಧಾರ್ ಕಾರ್ಡ್ ಬಳಸಿ ಸಚಿನ್ ವಾಜೆ ರೂಂ ಬುಕ್ ಮಾಡಿದ್ದರು. ಅವರು ಅಲ್ಲಿದ್ದ ದಿನಗಳಲ್ಲಿ ಅವರ ಜತೆ ಮಹಿಳೆಯೊಬ್ಬಳು ಇರುವುದನ್ನು ಎನ್‌ಐಎ ಪತ್ತೆಹಚ್ಚಿದೆ.

ಮಾಹಿತಿ ನೀಡದ ವಾಜೆ

ಮಾಹಿತಿ ನೀಡದ ವಾಜೆ

ಸಚಿನ್ ವಾಜೆ ಅಪರಾಧ ಗುಪ್ತಚರ ಘಟಕದಲ್ಲಿದ್ದಾಗ ಪ್ರಕರಣವೊಂದಲ್ಲಿ ವಿಚಾರಣೆಗೆ ಒಳಪಡಿಸಿದ ಜನರಲ್ಲಿ ಆ ಮಹಿಳೆಯೂ ಒಬ್ಬಳಿರಬೇಕು ಎಂದು ಎನ್‌ಐಎ ಅನುಮಾನ ವ್ಯಕ್ತಪಡಿಸಿದೆ. ಮಹಿಳೆಯ ಗುರುತು ತಿಳಿಯಲು ಎನ್‌ಐಎ ಸಚಿನ್ ವಾಜೆ ಅವರನ್ನು ಪ್ರಶ್ನಿಸಿದೆ. ಆದರೆ ಅವರು ತನಿಖೆಗೆ ಸಹಕರಿಸುತ್ತಿಲ್ಲ. ಮಹಿಳೆಯ ಗುರುತು ಬಹಿರಂಗಪಡಿಸಲು ಮತ್ತು ಆಕೆಯೊಂದಿಗಿನ ತಮ್ಮ ಸಂಬಂಧವನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಐದು ಬ್ಯಾಗ್‌ಗಳಲ್ಲಿ ಏನಿತ್ತು?

ಐದು ಬ್ಯಾಗ್‌ಗಳಲ್ಲಿ ಏನಿತ್ತು?

ಹೋಟೆಲ್ ಸಿಬ್ಬಂದಿಯನ್ನು ಎನ್‌ಐಎ ವಿಚಾರಣೆಗೆ ಒಳಪಡಿಸಿದ್ದು, ಐದು ದಿನಗಳ ಕಾಲ ಹೋಟೆಲ್‌ನಲ್ಲಿ ಇದ್ದ ಸಮಯದಲ್ಲಿ ವಾಜೆ ಯಾರನ್ನೆಲ್ಲ ಭೇಟಿಯಾಗಿದ್ದರು ಎಂಬುದನ್ನು ತಿಳಿಯಲು ಪ್ರಯತ್ನಿಸುತ್ತಿದೆ. ಹೋಟೆಲ್‌ನಲ್ಲಿ ತಂಗಿದ್ದ ಸಮಯದಲ್ಲಿ ವಾಜೆ ಐದು ಬ್ಯಾಗ್‌ಗಳನ್ನು ತಂದಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಬ್ಯಾಗ್‌ಗಳನ್ನು ಕಿಯೋಸ್ಕ್‌ನಲ್ಲಿ ಸ್ಕ್ಯಾನ್ ಮಾಡಲಾಗಿದ್ದು, ಅದರಲ್ಲಿ ಏನೇನು ಇದ್ದವು ಎಂಬುದನ್ನು ತಿಳಿಯಲು ತನಿಖೆ ಮುಂದುವರಿಸಲಾಗಿದೆ.

ಐದು ದಿನ ಉಳಿದುಕೊಂಡಿದ್ದ ವಾಜೆ

ಐದು ದಿನ ಉಳಿದುಕೊಂಡಿದ್ದ ವಾಜೆ

ನಕಲಿ ಆಧಾರ್ ಕಾರ್ಡ್‌ನ ಸಂಖ್ಯೆ 7825-2857-5822. ದಕ್ಷಿಣ ಮುಂಬೈನ ನಾರಿಮನ್ ಪಾಯಿಂಟ್ ಎಂಬ ಐಷಾರಾಮಿ ಹೋಟೆಲ್‌ನಲ್ಲಿ ಸಚಿನ್ ವಾಜೆ ಈ ನಕಲಿ ದಾಖಲೆಗಳನ್ನು ಬಳಸಿ ಫೆ. 15 ರಿಂದ 20ರವರೆಗೂ ಉಳಿದುಕೊಂಡಿದ್ದರು

ನಕಲಿ ಆಧಾರ್ ಕಾರ್ಡಲ್ಲಿ ಅಸಲಿ ಫೋಟೊ

ನಕಲಿ ಆಧಾರ್ ಕಾರ್ಡಲ್ಲಿ ಅಸಲಿ ಫೋಟೊ

ನಕಲಿ ಆಧಾರ್ ಕಾರ್ಡ್‌ನಲ್ಲಿ ಸಚಿನ್ ವಾಜೆ ತಮ್ಮ ಹೆಸರನ್ನು ಸುಶಾಂತ್ ಸದಾಶಿವ್ ಖಮ್ಕಾರ್ ಎಂದು ನಮೂದಿಸಿದ್ದರು. ತಮ್ಮ ಜನ್ಮದಿನಾಂಕವನ್ನು ಜೂನ್ 15, 1972 ರಂದು ಉಲ್ಲೇಖಿಸಿದ್ದರು. ವಾಸ್ತವವಾಗಿ ಅವರ ಜನ್ಮದಿನಾಂಕ ಫೆಬ್ರವರಿ 22, 1972. ನಕಲಿ ಆಧಾರ್ ಐಡಿಯಲ್ಲಿ ಅವರು ತಮ್ಮ ನೈಜ ಫೋಟೊವನ್ನು ಬಳಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+