ಬರ್ಥ್ ಡೇ ಬಾಯ್ ಉದ್ಧವ್ ಗೇಲಿ ಮಾಡಿದ್ರಾ ಅಜಿತ್ ಪವಾರ್!

ಮುಂಬೈ, ಜುಲೈ 27: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ನಡುವೆ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಶುಭ ಹಾರೈಸಿದ ರೀತಿ ಈಗ ಚರ್ಚೆಯ ವಿಷಯವಾಗಿದೆ. ಮಹಾರಾಷ್ಟ್ರ ಸರ್ಕಾರದಲ್ಲಿ ಎಲ್ಲವೂ ನನ್ನ ಕಂಟ್ರೋಲ್ ನಲ್ಲಿದೆ ಎಂದು ಉದ್ಧವ್ ಹೇಳಿಕೆ ನೀಡಿದ್ದರು.

ಅಜಿತ್ ಪವಾರ್ ಅವರು ಇಂದು ವಿಶ್ ಮಾಡಿ ಉದ್ಧವ್ ಜೊತೆಗಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಈ ಫೋಟೊದಲ್ಲಿ ವಾಹನವೊಂದರಲ್ಲಿ ಉದ್ಧವ್ ಹಾಗೂ ಅಜಿತ್ ಅಕ್ಕಪಕ್ಕದಲ್ಲಿ ಕುಳಿತಿದ್ದಾರೆ. ಅಜಿತ್ ಅವರು ಸ್ಟಿಯರಿಂಗ್ ಹಿಡಿದುಕೊಂಡು ಕುಳಿತಿದ್ದಾರೆ. ಈ ಚಿತ್ರಕ್ಕೂ ಉದ್ಧವ್ ಹೇಳಿಕೆಗೂ ಜೋಡಣೆ ಮಾಡಿ, ಬೇಕಾಂತಲೇ ಈ ರೀತಿ ಅಜಿತ್ ಅವರು ವಿಶ್ ಮಾಡಿ ಟ್ರಾಲ್ ಮಾಡಿದ್ದಾರೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿ ಹಬ್ಬಿದೆ.

ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ನ್ಯಾಷಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ ಸಿಪಿ), ಅಜಿತ್ ಅವರು ಯಾವುದೇ ದುರುದ್ದೇಶದಿಂದ ಈ ಚಿತ್ರ ಹಂಚಿಕೊಂಡಿಲ್ಲ ಎಂದಿದೆ. ಶಿವಸೇನಾ ಅಧ್ಯಕ್ಷ, ಮಹಾ ವಿಕಾಸ್ ಅಘಾಡಿ ನಾಯಕ ಉದ್ಧ ಠಾಕ್ರೆ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆ, ಅವರಿಗೆ ಹೆಚ್ಚಿನ ಆಯುರ್ ಆರೋಗ್ಯ ಲಭಿಸಲಿ ಎಂದು ಎನ್ಸಿಪಿ ಮುಖಂಡ ಅಜಿತ್ ಪವಾರ್ ಶುಭ ಹಾರೈಸಿದ್ದರು.

NCP Denies Ajit Pawar Trolled Uddhav Thackeray

ಆದರೆ, steering wheel ಹೇಳಿಕೆಗೆ ತಕ್ಕಂತೆ ಅಜಿತ್ ಚಿತ್ರ ಬಳಸಿರುವುದು ಏನನ್ನು ಸೂಚಿಸುತ್ತದೆ ಎಂದು ಅನೇಕರು ಪ್ರಶ್ನಿಸಿದ್ದಾರೆ.

ಸರ್ಕಾರದ ಭವಿಷ್ಯ ವಿಪಕ್ಷದ ಕೈಯಲಿಲ್ಲ, ನನ್ನ ಕೈಯಲಿದೆ. ಮೂರು ಚಕ್ರಗಳ ವಾಹನ(ಆಟೋರಿಕ್ಷಾ) ಸಾರ್ವಜನಿಕರಿಗಾಗಿ ಇರುವುದು, ಗಾಡಿ ನಾನೇ ಓಡಿಸುತ್ತಿದ್ದೇನೆ ಇನ್ನಿಬ್ಬರು ಹಿಂಬದಿ ಕುಳಿತ್ತಿದ್ದಾರೆ ಎಂಬರ್ಥದಲ್ಲಿ ಠಾಕ್ರೆ ಅವರು ತಮ್ಮ ಹುಟ್ಟುಹಬ್ಬದ ನಿಮಿತ್ತ ಸಾಮ್ನಾದಲ್ಲಿ ಬರೆದ ಸಂಪಾದಕೀಯದಲ್ಲಿ ಬರೆದುಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+