ತಾರ್ಕಿಕ ಅಂತ್ಯ ಕಾಣಿಸುತ್ತೇನೆ : ಅಲೋಕ್‌ಗೆ ವಿನ್ತಾ ನಂದಾ ಚಾಲೆಂಜ್
ಮುಂಬೈ, ಅಕ್ಟೋಬರ್ 16 : ಸಹ ಚಿತ್ರನಟಿಯರಿಂದ, ಬರಹಗಾರ್ತಿಯರಿಂದ, ಸಹಕಲಾವಿದೆಯರಿಂದ ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಹಿಂದಿ ಚಿತ್ರರಂಗದ ಖ್ಯಾತ ನಟ ಅಲೋಕ್ ನಾಥ್ (62) ಅವರು, ತಮ್ಮ ವಿರುದ್ಧ ಮೊದಲ ಆರೋಪ ಹೊರಿಸಿದ ಬರಹಗಾರ್ತಿ ವಿನ್ತಾ ನಂದಾ ಅವರ ವಿರುದ್ಧ ಸಿವಿಲ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ತಮ್ಮ ಮೇಲೆ ಅತ್ಯಾಚಾರ ಎಸಗಿರುವ ಸಲ್ಲದ ಆರೋಪ ಹೊರಿಸಿರುವ ಚಲನಚಿತ್ರ ಬರಹಗಾರ್ತಿ ವಿನ್ತಾ ನಂದಾ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಬೇಕು ಮತ್ತು 1 ರುಪಾಯಿ ಪರಿಹಾರವಾಗಿ ನೀಡಬೇಕು ಎಂದು ನ್ಯಾಯಾಲಯವನ್ನು ಅಲೋಕ್ ನಾಥ್ ಅವರು ಆಗ್ರಹಿಸಿದ್ದಾರೆ. ಅಲೋಕ್ ನಾಥ್ ಅವರ ಪರವಾಗಿ ಅವರ ಹೆಂಡತಿ ಆಶು ಸಿಂಗ್ ಅವರು ಸಿವಿಲ್ ಮಾನನಷ್ಟ ಮೊಕದ್ದಮೆ ಹೂಡಿದ್ದು, ತಮ್ಮ ಪರವಾಗಿ ಮೂವರು ಸಾಕ್ಷ್ಯಗಳಿವೆ ಎಂದು ಹೇಳಿಕೆ ನೀಡಿದ್ದಾರೆ.
ಸುಮಾರು ಎರಡು ದಶಕಗಳ ಹಿಂದೆ ತಮ್ಮ ಮೇಲೆ ಅಲೋಕ್ ನಾಥ್ ಅವರು ಅತ್ಯಾಚಾರ ಎಸಗಿದ್ದರು ಎಂದು ವಿನ್ತಾ ನಂದಾ ಅವರು ದೂರಿದ್ದಾರೆ. ಅವರ ಹೆಂಡತಿ ಇಲ್ಲದಾಗ ಪಾರ್ಟಿ ಆಯೋಜಿಸಿದ್ದ ಅವರು, ಮತ್ತು ಬರಿಸುವ ವಸ್ತುವನ್ನು ಬೆರೆಸಿ ತಮಗೆ ಮದ್ಯ ಕುಡಿಯಲು ಕೊಟ್ಟಿದ್ದರು. ನಶೆಯಲ್ಲಿದ್ದ ತಮ್ಮನ್ನು ಮನೆಗೆ ಡ್ರಾಪ್ ಮಾಡುವುದಾಗಿ ಹೇಳಿ, ತಮ್ಮ ಮನೆಗೇ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದರು ಎಂದು ವಿನ್ತಾ ನಂದಾ ಆರೋಪಿಸಿದ್ದಾರೆ.
ಅಲೋಕ್ ನಾಥ್ ವಿರುದ್ಧ ವಿನ್ತಾ ನಂದಾ ಮಾತ್ರವಲ್ಲ, ಸಂಧ್ಯಾ ಮೃದುಲ್ ಮತ್ತು ಹೆಸರು ಬಹಿರಂಗಪಡಿಸಲು ಇಚ್ಛಿಸದ ಮತ್ತೊಬ್ಬ ಮಹಿಳೆ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಬಾಯಿಬಿಟ್ಟಿದ್ದಾರೆ. ಅಲೋಕ್ ನಾಥ್ ವಿರುದ್ಧ ಇನ್ನೂ ಹಲವಾರು ನಟಿಯರು ದನಿಯೆತ್ತಿದ್ದು, 'ಸಂಸ್ಕಾರಿ' ನಟ ಎಂದೇ ಹೆಸರಾಗಿದ್ದ ಅಲೋಕ್ ನಾಥ್ ಅವರು ಜರ್ಜರಿತರಾಗಿದ್ದಾರೆ. ಎಲ್ಲ ಆರೋಪಗಳನ್ನು ಅಲ್ಲಗಳೆದಿರುವ ಅವರು ಇದೀಗ ಕೋರ್ಟ್ ಮೆಟ್ಟಿಲೇರಿದ್ದಾರೆ.

ಮೊಕದ್ದಮೆಯಿಂದ ನಾನೇನೂ ವಿಚಲಿತಳಾಗಿಲ್ಲ
ತಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದಕ್ಕೆ ಪ್ರತಿಕ್ರಿಯಿಸಿರುವ ವಿನ್ತಾ ನಂದಾ ಅವರು, ಈ ಮಾನನಷ್ಟ ಮೊಕದ್ದಮೆಯಿಂದ ನಾನೇನೂ ವಿಚಲಿತಳಾಗಿಲ್ಲ. ಏಕೆಂದರೆ, ಸತ್ಯದ ಬದಿಯಿದ್ದೇನೆ. ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಿಯೇ ಕಾಣಿಸುತ್ತೇನೆ ಎಂದು ಸವಾಲನ್ನು ಸ್ವೀಕರಿಸಿದ್ದಾರೆ. ಜೊತೆಗೆ, ಖ್ಯಾತ ಮಾಜಿ ಪತ್ರಕರ್ತ ಎಂಜೆ ಅಕ್ಬರ್ ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ ಎನ್ನಲಾದ ಮತ್ತು ಅವರಿಂದ ಮಾನನಷ್ಟ ಮೊಕದ್ದಮೆ ಎದುರಿಸುತ್ತಿರುವ ಪತ್ರಕರ್ತೆ ಪ್ರಿಯಾ ರಮಣಿ ಅವರಿಗೂ ಬೆಂಬಲ ವ್ಯಕ್ತಪಡಿಸುವುದಾಗಿ ವಿನ್ತಾ ನಂದಾ ಹೇಳಿದ್ದಾರೆ. ಇದರೊಂದಿಗೆ ಎರಡು ಹೈಪ್ರೊಫೈಲ್ ಪ್ರಕರಣಗಳು ಕೋರ್ಟ್ ನಲ್ಲಿ ಕಾದಾಟಕ್ಕೆ ಸಿದ್ಧವಾಗಿವೆ.

ಕಲಾವಿದರ ಸಂಘಕ್ಕೆ ಅಲೋಕ್ ವಿರುದ್ಧ ದೂರು
ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವಿನ್ತಾ ನಂದಾ ಪರ ವಕೀಲರು, ಅಲೋಕ್ ನಾಥ್ ವಿರುದ್ಧ ಸಿನೆಮಾ ಮತ್ತು ಟಿವಿ ಕಲಾವಿದರ ಅಸೋಸಿಯೇಷನ್ ಮತ್ತು ಇಂಡಿಯನ್ ಫಿಲ್ಮ್ ಮತ್ತು ಟೆಲಿವಿಷನ್ ಡೈರೆಕ್ಟರ್ಸ್ ಅಸೋಸಿಯೇಷನ್ ಗೆ ದೂರು ನೀಡಲಾಗಿದ್ದು, ಅವರು ಗುರುವಾರದೊಳಗೆ ತಮ್ಮ ಉತ್ತರವನ್ನು ನೀಡಬೇಕಾಗಿದೆ. ಆ ಉತ್ತರ ಬಂದ ನಂತರ ನಾವು ಏನು ಕಾನೂನು ಕ್ರಮ ಜರುಗಿಸಬೇಕು ಎಂಬುದರ ಬಗ್ಗೆ ನಿರ್ಧರಿಸಲಿದ್ದೇವೆ. ನಮ್ಮ ಗ್ರಾಹಕಿಗೆ ಸಾರ್ವಜನಿಕವಾಗಿ ಮತ್ತಷ್ಟು ಅವಮಾನಗಳನ್ನು ಮಾಡಿದರೆ ಸೂಕ್ತ ಕ್ರಮ ಜರುಗಿಸಲು ನಮ್ಮ ವಕೀಲರ ತಂಡ ಸಿದ್ಧವಾಗಿದೆ. ಒಂದು ಮಾತಂತೂ ಖಚಿತಪಡಿಸುತ್ತೇವೆ, ನಮ್ಮ ಗ್ರಾಹಕಿ ಯಾವುದೇ ಬೆದರಿಕೆಗೆ, ಮಾನನಷ್ಟ ಮೊಕದ್ದಮೆಗೆ ಬಗ್ಗುವುದಿಲ್ಲ ಎಂದು ಪ್ರತ್ಯುತ್ತರ ನೀಡಿದ್ದಾರೆ.

ಉತ್ತರ ನೀಡುವ ಅವಶ್ಯಕತೆಯೇ ಇಲ್ಲ : ಅಲೋಕ್
ಆದರೆ, ಇದೀಗ ಬಂದಿರುವ ಸುದ್ದಿಯ ಪ್ರಕಾರ, ತಾವು ಯಾವುದೇ ಸಂಘಟನೆಗೆ ಉತ್ತರ ನೀಡುವ ಅವಶ್ಯಕತೆಯಿಲ್ಲ. ಏಕೆಂದರೆ, ಏಲ್ಲೂ ಪೊಲೀಸರಿಗೆ ದೂರು ನೀಡಿಲ್ಲ. ನನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕೆಲವಾರು ಸಂದರ್ಶನಗಳಲ್ಲಿ ಮಾತ್ರ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಲಾಗಿದೆ. ಇಂಥ ಆರೋಪಗಳಿಗೆ ನಾನು ಉತ್ತರದಾಯಿಯಲ್ಲ ಎಂದು ಅಲೋಕ್ ನಾಥ್ ಅವರು ವಿನ್ತಾ ನಂದಾ ಅವರಿಗೆ ಟಾಂಗ್ ನೀಡಿದ್ದಾರೆ. ಇದಕ್ಕೂ ಮೊದಲು, ಆರೋಪ ಕೇಳಿಬಂದಿದ್ದಾಗ, ನಾನು ವಿನ್ತಾ ನಂದಾ ಮೇಲೆ ಅತ್ಯಾಚಾರ ಮಾಡಿಲ್ಲ. ಅವರ ಮೇಲೆ ಅತ್ಯಾಚಾರ ಆಗಿರಬಹುದು. ಆದರೆ, ಮಾಡಿದ್ದು ನಾನಲ್ಲ ಎಂದು ಹೇಳಿ, ಮೈನೆ ಪ್ಯಾರ್ ಕಿಯಾ, ಹಮ್ ಸಾಥ್ ಸಾಥ್ ಹೈ, ಹಮ್ ಆಪ್ ಕೆ ಹೈ ಕೌನ್ ಮುಂತಾದ ಚಿತ್ರಗಳಲ್ಲಿ ಅತ್ಯುತ್ತಮ ಅಭಿನಯ ನೀಡಿದ್ದ ಅಲೋಕ್ ನಾಥ್ ಅವರು ಹೇಳಿದ್ದರು.

ಆ ಇಪ್ಪತ್ತು ವರ್ಷಗಳ ಹಿಂದೆ ನಡೆದಿದ್ದೇನು?
ಅಷ್ಟಕ್ಕೂ ಅಂದು ಆಗಿದ್ದಾದರೂ ಏನು ಎಂಬುದನ್ನು ನೆನಪಿಸಿಕೊಳ್ಳುವುದಾದರೆ, ಇಪ್ಪತ್ತು ವರ್ಷಗಳ ಹಿಂದೆ ಅಲೋಕ್ ನಾಥ್ ಅವರು ತಮ್ಮ ಪತ್ನಿ ಇಲ್ಲದ ಸಮಯದಲ್ಲಿ ಮನೆಯಲ್ಲಿ ಪಾರ್ಟಿ ಆಯೋಜಿಸಿದ್ದರು. ವಿನ್ತಾ ನಂದಾ ಮತ್ತು ಆಶು ಸಿಂಗ್ ಅವರು ಆತ್ಮೀಯ ಸ್ನೇಹಿತೆಯರಾಗಿದ್ದರಿಂದ ಅವರ ಮನೆಗೆ ಹೋಗಿದ್ದರು. ಆಗಾಗ ಮದ್ಯ ಸೇವಿಸುತ್ತಿದ್ದರಿಂದ ಇಲ್ಲಿಯೂ ಮದ್ಯ ಸೇವಿಸಿದ್ದಾರೆ. ನಶೆಯಲ್ಲಿದ್ದ ಅವರನ್ನು ಅವರ ಮನೆಗೆ ಡ್ರಾಪ್ ಮಾಡುವುದಾಗಿ ಹೇಳಿ ಅಲೋಕ್ ನಾಥ್ ಅವರು ವಿನ್ತಾರನ್ನು ತಮ್ಮ ಮನೆಗೇ ಕರೆದುಕೊಂಡು ಬಂದು ಮತ್ತೆ ಬಾಯಿಯಲ್ಲಿ ಮದ್ಯ ಸುರಿದಿದ್ದರು. ನಂತರ ಅವರ ಮನೆಯಲ್ಲಿಯೇ ತಮ್ಮ ಮೇಲೆ ಅತ್ಯಾಚಾರ ಮಾಡಿದ್ದರು ಎಂದು ವಿನ್ತಾ ನಂದಾ ಆರೋಪಿಸಿದ್ದರು. ನಾನು ಅಂದು ಎಲ್ಲವನ್ನೂ ಕಳೆದುಕೊಂಡಿದ್ದೆ, ಆದರೆ, ದೊಡ್ಡ ನಟರ ವಿರುದ್ಧ ಬಾಯಿಬಿಡುವ ಧೈರ್ಯ ಇಲ್ಲದ್ದರಿಂದ ಬಾಯಿಮುಚ್ಚಿಕೊಂಡಿರಬೇಕಾಗಿತ್ತು ಎಂದು ವಿನ್ತಾ ನಂದಾ ಬರೆದುಕೊಂಡಿದ್ದಾರೆ.

ಸಂಧ್ಯಾ ಮೃದುಲ್ ಮತ್ತು ಇನ್ನೊಬ್ಬ ಕಲಾವಿದೆ
ಮುಖದ ಮೇಲೆ ಅಡರಿದ್ದ ಬೆರವನ್ನು ಜುಬ್ಬಾದಲ್ಲಿ ಒರೆಸಿಕೊಂಡು ಮತ್ತೆ ಮೇಕಪ್ ಹಚ್ಚಿಕೊಳ್ಳುವ ಮೊದಲೇ ಇನ್ನಿಬ್ಬರು, ಅಲೋಕನಾಥ್ ಮೇಲೆ ಎಗರಿ ಬಿದ್ದಿದ್ದಾರೆ, ತಮ್ಮ ಮೇಲೆ ಕೂಡ ಲೈಂಗಿಕ ದೌರ್ಜನ್ಯ ಅಲೋಕ್ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಒಬ್ಬರು ಹಿಂದಿ ಚಿತ್ರರಂಗದಲ್ಲಿ 'ಸ್ಯಾಂಡಿ' ಎಂದೇ ಕರೆಯಿಸಿಕೊಳ್ಳುವ, 49ರ ಹರೆಯದ ಮಹಾರಾಷ್ಟ್ರದ ಹಳೆಯ ಕಾಲದ ಚಿತ್ರನಟಿ ಸಂಧ್ಯಾ ಮೃದುಲ್. ಮತ್ತೊಬ್ಬರು, ಹಮ್ ಸಾಥ್ ಸಾಥ್ ಹೈ ಚಿತ್ರದ ಸಮಯದಲ್ಲಿ ತಮ್ಮ ಮುಂದೆಯೇ ಬೆತ್ತಲಾಗಿದ್ದರು ಎಂದು ಹೆಸರು ಹೇಳಲಿಚ್ಛಿಸದ ನಟಿಯೊಬ್ಬರು ಅಲೋಕ್ ನಾಥ್ ಅವರ 'ನಗ್ನ ಸತ್ಯ'ವನ್ನು ಬಿಚ್ಚಿಟ್ಟಿದ್ದಾರೆ. ಈ ಎರಡು ಘಟನೆಗಳಿಗೆ ಅಲೋಕ್ ನಾಥ್ ಅವರು ಏನು ಉತ್ತರ ನೀಡಲಿದ್ದಾರೆ? ಇವರ ವಿರುದ್ಧವೂ ಮಾನನಷ್ಟ ಮೊಕದ್ದಮೆ ಹೂಡಲಿದ್ದಾರಾ?
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications